ಶರಣ ನಾಗರಾಜ ಮತ್ತಿಹಳ್ಳಿ ಅವರು ವಚನಗಳು ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ಮುಕ್ತ ಛಂದಸ್ಸುಗಳು. ಒಳಸತ್ವದಲ್ಲಿ ಸಂಪೂರ್ಣ ಭಿನ್ನತೆಯನ್ನು ಹೊಂದಿರುವಂಥವು ಎಂದು ಹೇಳುತ್ತಾ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.
ವಚನಗಳಲ್ಲಿ ಭಕ್ತಿ, ಸಾಮಾಜಿಕ ಕಳಕಳಿ, ವೈಯಕ್ತಿಕ ಅನುಭಾವ, ಸುತ್ತ-ಮುತ್ತ ನಡೆಯುತ್ತಿರುವ ಅನ್ಯಾಯಗಳಿಗೆ ಸ್ಪಂದಿಸುವ ಲಕ್ಷಣಗಳಿವೆ, ಶರಣರು ವೈಯಕ್ತಿಕವಾಗಿ ವಚನಗಳ ಮೂಲಕ ಸಮಾಜಕ್ಕೆ ಮಿಡಿದರು ಎನ್ನುವುದನ್ನು ವಿವರಿಸಿದರು.
ಮೆರೆಮಿoಡಯ್ಯನವರು, ಅಂಬಿಗರ ಚೌಡಯ್ಯನವರು,ಏಲೇಶ್ವರ ಕೇತಯ್ಯನವರು ತಮ್ಮ ವಚನಗಳ ಮೂಲಕ ಸುತ್ತಲಿನ ಜನರ ಇಲ್ಲಸಲ್ಲದ ವ್ಯವಹಾರವನ್ನು ಛೇಡಿಸುತ್ತಿದ್ದುದು, ಆಗಿನ ಕಾಲದ ಶರಣೆಯರೂ ಸಹ ನಿರ್ಭೀತಿಯಿಂದ ವಚನ ರಚಿಸುತ್ತಿದ್ದುದು ನೆನಪು ಮಾಡಿಕೊಂಡರು.
ಶರಣೆ ಪ್ರೇಮಾ ಅಣ್ಣಿಗೇರಿ ಅವರು ವಚನಗಳು ಜಾಗತಿಕ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿವೆ ಎಂದು ಮಾರ್ಗದರ್ಶನದ ನುಡಿಗಳನ್ನು ಕಟ್ಟಿಕೊಟ್ಟರು.
ಡಾ. ಶಶಿಕಾಂತ ಪಟ್ಟಣ ಅವರು ಶರಣರು ಸಾರ್ವಕಾಲಿಕ ಸಮಾನತೆಯನ್ನು ಸಾರಿದರು, ವರ್ಣ ಭೇದ-ಲಿಂಗಭೇದ, ಸುಲಿಗೆ-ಶೋಷಣೆ, ಅಂಧಶ್ರದ್ಧೆ ಎಲ್ಲವನ್ನೂ ಮೀರಿ ನಿಂತರು ಎಂದು ಅಭಿಮಾನದಿಂದ ನುಡಿದರು.
ಶರಣೆ ಭಾಗ್ಯ ಕೋಟಿ ಅವರ ವಚನ ಪ್ರಾರ್ಥನೆ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಸ್ವಾಗತ-ಪ್ರಾಸ್ತಾವಿಕ, ಪರಿಚಯ, ಶರಣೆ ಶಕುಂತಲಾ ಸಿಂಧೂರ ಅವರ ಶರಣು ಸಮರ್ಪಣೆ, ಶರಣೆ ಬಬಿತಾ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ನೆರವೇರಿತು. ಶರಣೆ ಸಾವಿತ್ರಿ ಕಮಲಾಪುರ ಅವರು ಕಾರ್ಯಕ್ರಮ ನಿರೂಪಿಸಿದರು.
(ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 19 ನೆಯ ದಿವಸದ ವರದಿ. ಆಗಸ್ಟ್ 22)