ವಚನ ವಿಶ್ವವಿದ್ಯಾಲಯದ ಅವಶ್ಯಕತೆ

ಹಲವಾರು ದಶಕಗಳಿಂದ ಹಸ್ತಪ್ರತಿಗಳಲ್ಲಿ ಹಂಚಿ ಹೋಗಿರುವ ಸಹಸ್ರಾರು ವಚನಗಳನ್ನು ಬೆಳಕಿಗೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ವಚನಗಳ ಪ್ರಕಟಣೆ ಎಂದಿಗೂ ಮುಗಿಯದ ಕೆಲಸ.

ಹೊಸ ವಚನಗಳ ಶೋಧ, ಕೃತಕ ವಚನಕಾರರ ಮತ್ತು ನಿಜ ವಚನಕಾರರ ಕೃತಕ ವಚನಗಳ ಪರಿಷ್ಕರಣ ಮುಂತಾದ ಕೆಲಸಗಳು ನಿರಂತರವಾಗಿ ನಡೆಯಬೇಕು. ಇದಕ್ಕೆ ಒಂದು ಶಾಶ್ವತವಾದ ಸಂಸ್ಥೆ ಅವಶ್ಯ.

ವಚನಗಳು ಮತ್ತು ಅವುಗಳಲ್ಲಿ ಪ್ರಕಟವಾಗಿರುವ ಶರಣ ಸಿದ್ದಾಂತ ಕನ್ನಡಿಗರ ಮೇಲೆ ಅಪಾರ ಪ್ರಭಾವ ಬೀರಿವೆ. ಅವುಗಳ ವಿವಿಧ ಆಯಾಮಗಳ ಬಗ್ಗೆ ಬಹು ಶಿಸ್ತಿನ ಅಧ್ಯಯನ ನಡೆಯಬೇಕು.

ಶರಣರು ವೈಯಕ್ತಿಕ ಶುದ್ದಿಯ ಜೊತೆ ಸಾಮಾಜಿಕ ಸಮಾನತೆ, ಅಭಿವೃದ್ಧಿಗೂ ಒತ್ತು ಕೊಟ್ಟರು. ೯೦೦ ವರ್ಷಗಳ ಈ ಪರಂಪರೆಯನ್ನು ಗ್ರಹಿಸಲು ತತ್ವ, ಇತಿಹಾಸ, ಸಮಾಜ, ಅರ್ಥ ಶಾಸ್ತ್ರಗಳನ್ನು ಬಳಸಿಕೊಳ್ಳಬೇಕು.

ಶರಣ ಚಳುವಳಿ ದಲಿತ, ಶ್ರಮಿಕ ವರ್ಗಗಳು ಮತ್ತು ಮಹಿಳೆಯರು ನಡೆಸಿದ ಹೋರಾಟ. ಇದು ದೇಶೀ ಸಮುದಾಯದ ಧ್ವನಿಯಾಗಿತ್ತು. ಇಲ್ಲಿ ದಲಿತ, ಮಹಿಳಾ , ಜಾನಪದ ಅಧ್ಯಯನಗಳಿಗೆ ಅವಕಾಶವಿದೆ.

ವಚನಗಳನ್ನು ಅಭ್ಯಸಿಸಲು ಭಾಷಾ-ಸಾಹಿತ್ಯ, ಗ್ರಂಥ ಸಂಪಾದನಾ, ನಿಘಂಟು ಶಾಸ್ತ್ರಗಳ ವಿದ್ವಾಂಸರ ಅವಶ್ಯಕತೆಯಿದೆ. ಅವುಗಳನ್ನು ಅನ್ಯ ಭಾಷೆಗಳಲ್ಲಿ ಪರಿಚಯಿಸಲು ಭಾಷಾಂತರ ವಿಭಾಗವೂ ಬೇಕಿದೆ.

(‘ಸಮಗ್ರ ವಚನ ಸಂಪುಟ – ದ್ವಿತೀಯ ಆವೃತ್ತಿ: ಬಿಡುಗಡೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)

Share This Article
Leave a comment

Leave a Reply

Your email address will not be published. Required fields are marked *