ಸಿಂಧನೂರು:
ಲಿಂಗೈಕ್ಯ ಶರಣ ಪಿ. ವೀರಭದ್ರಪ್ಪ ಕುರಕುಂದ ಅವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ನವೆಂಬರ್ 9 ರವಿವಾರ ಬೆಳಿಗ್ಗೆ 10 ಗಂಟೆಗೆ ಶರಣೆ ನೀಲಾಂಬಿಕೆ ಪ್ರಸಾದ ನಿಲಯದಲ್ಲಿ ನಡೆಯಲಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಸಮ್ಮುಖವನ್ನು ಇಳಕಲ್ಲ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ವೆಂಕಟಾಪುರದ ಬಸವರಾಜಪ್ಪ ಶರಣರು ವಹಿಸುವರು.
ಉದ್ಘಾಟನೆಯನ್ನು ಶಾಸಕರಾದ ಹಂಪನಗೌಡ್ರು ಬಾದರ್ಲಿ ಮಾಡುವರು. ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ ಅವರಿಂದ ‘ಬಸವಧರ್ಮ ಸಮಾನತೆಯ ಧರ್ಮ’ ವಿಷಯವಾಗಿ ಅನುಭಾವ ನಡೆಯಲಿದೆ. ಅಧ್ಯಕ್ಷತೆಯನ್ನು ನಾಗಭೂಷಣ ನವಲಿ ವಹಿಸಲಿದ್ದಾರೆ.
ಬಸವ ಕೇಂದ್ರ, ಬಸವ ಚಾರಿಟೇಬಲ್ ಟ್ರಸ್ಟ್ ಹಾಗೂ ಬಸವಪರ ಸಂಘಟನೆಗಳು ಸರ್ವರಿಗೂ ಸ್ವಾಗತ ಕೋರಿವೆ.

