ನಿಂಗನಗೌಡ ಹಿರೇಸಕ್ಕರಗೌಡ್ರ
ಗದಗ
04/07/2025
10000
ಮಹಾ ಪೋಷಕ
ನಿವೃತ್ತ ಶಿಕ್ಷಕರು. ಬಸವ ತತ್ವನಿಷ್ಟ ಗದಗ ಬೆಟಗೇರಿ ಬಸವದಳದ ಪ್ರಮುಖರು. ವಚನ ಅಧ್ಯಯನ ಮಾಡಿದವರು, ಮಾಡುತ್ತಿರುವರು. ದಾಸೋಹ ಪ್ರೇಮಿಗಳು. ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಆಪ್ತರಾಗಿದ್ದವರು.
“ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ಮತ್ತು ಅವರ ವಚನಗಳು, ಪ್ರಸ್ತುತ ಕಾಲದ ಅಗತ್ಯತೆ, ಅವಶ್ಯಕತೆಯನ್ನು ಪೂರೈಸಬಲ್ಲವು. ದೇವರು ದೇವರೆಂದು ಸುಮ್ಮನೆ ಅಂಧಾನುಕರಣೆ ಬೇಡ. ಕಾಯ ಇದೆ ಎಂದ ಬಳಿಕ ‘ಕಾಯಕ’ ಮಾಡಬೇಕು. ಕಾಯಕದಲ್ಲಿಯೇ ಕೈಲಾಸ ಕಂಡವರು-ಶರಣರು. ಮೂಢ ನಂಬಿಕೆ, ಹಲವು ದೈವಾಚರಣೆಗಳನ್ನು ಶರಣರು ತಿರಸ್ಕರಿಸಿದರು. ತಮ್ಮ ತಮ್ಮ ಅರಿವಿನ-ಚೈತನ್ಯವನ್ನೇ ನಂಬಿ, ನಡೆಯಲ್ಲಿಯೇ ನುಡಿ ಪೂರೈಸಿದವರು. ಕಾಯಕ, ದಾಸೋಹಕ್ಕೆ ಮಹತ್ವ ಕೊಟ್ಟವರು-ಶರಣರು. ಅಂಥ ಮಹಾಪುರುಷರನ್ನೂ ಅವರ ವಚನ ಪ್ರಸಾರವನ್ನೂ ಮಾಡುತ್ತಿರುವ ‘ಬಸವ ಮೀಡಿಯ’ ಇನ್ನೂ ಹೆಚ್ಚು ಹೆಚ್ಚಾಗಿ ಶರಣರ ಬಗ್ಗೆ, ಅವರ ಕಾಯಕ, ದಾಸೋಹ ಕುರಿತು ಪ್ರಚಾರ ಮಾಡಲಿ. ಎಲ್ಲರಲ್ಲಿಯೂ ಬಸವ ಪ್ರಜ್ಞೆ ಜಾಗ್ರತೆಯಾಗುವಂತೆ ಮಾಡಲಿ” ಎಂದು ಹಾರೈಸುವೆ. ಶರಣಾರ್ಥಿಗಳು.
ಪ್ರೊ. ಎಸ್. ಎಸ್. ಹರ್ಲಾಪುರ, ಸಾವಿತ್ರಿ ಹರ್ಲಾಪುರ
ಅಣ್ಣಿಗೇರಿ
25/06/2025
10000
ಮಹಾ ಪೋಷಕ
ಕಿರು ಪರಿಚಯ ಬರಲಿದೆ
ಸಂದೇಶ ಬರಲಿದೆ
ಡಾ. ಪೂರ್ಣಿಮ ಜೆ.
ಬೆಂಗಳೂರು
27/06/2025
10000
ಮಹಾ ಪೋಷಕ
ಡಾ. ಪೂರ್ಣಿಮ ಮೂಲತಃ ಕಡೂರು ತಾಲೂಕಿನ ಚೌಳಹಿರಿಯೂರಿನವರು. ಎಂ.ಬಿ.ಬಿ.ಎಸ್., ಡಿ.ಜಿ.ಒ., ಎಂ.ಎಸ್ (ಒ.ಬಿ.ಜಿ) ಓದಿದ್ದಾರೆ. ಈಗ ಬೆಂಗಳೂರಿನ ಇಂದಿರಾನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಕಾಯಕ ಸಲ್ಲಿಸುತ್ತಿದ್ದಾರೆ.
ಬಸವ ಮೀಡಿಯಾ ಎಂಬ ಬಸವ ಜ್ಯೋತಿ ಬಸವ ತತ್ವವನ್ನು ವಿಶ್ವದ ಮೂಲೆ ಮೂಲೆಗೂ ಪ್ರಸರಿಸಲಿ. ಈ ಜ್ಯೋತಿಯ ಹನಿ ಎಣ್ಣೆಗಾಗಿ ನನ್ನ ದಾಸೋಹ ಉಪಯೋಗವಾಗಲಿ.
ಸಂಗಮೇಶ ವೀರಪ್ಪ ಅರಳಿ
ಬೆಳಗಾವಿ
25/06/2025
5000
ಪೋಷಕ
ಬೆಳಗಾವಿ ಲಿಂಗಾಯತ ಸಂಘಟನೆಯ ಉಪಾಧ್ಯಕ್ಷರು, ಬೀಜದ ವ್ಯಾಪಾರಿ, ಬೆಳಗಾವಿ ಅಗ್ರೋ ಟ್ರೇಡರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರು, ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯರು.
ಬಸವ ಮೀಡಿಯಾ ಇದೇ ರೀತಿ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಸಾಗಲಿ. ಬಸವಾದಿ ಶರಣರ ತತ್ವವನ್ನು ನಮ್ಮ ಸಮಾಜ ಮತ್ತು ಜಗತ್ತಿನಾದ್ಯಂತ ಬಿತ್ತುವ ಕೆಲಸವನ್ನು ಮುನ್ನಡೆಸಿಕೊಂಡು ಹೋಗಲಿ.