ಕದಳಿ ಮಹಿಳಾ ಸಮಾವೇಶದಲ್ಲಿ ಬಂದ ಐದು ನಿರ್ಣಯಗಳು

ಕಲಬುರಗಿ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ರಾಜ್ಯ ಕದಳಿ ಮಹಿಳಾ ವೇದಿಕೆ ವತಿಯಿಂದ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.‌ಸಿ.‌ಸೋಮಶೇಖರ, ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಶಾಂತಾ ಬಿ.‌ಅಸ್ಟಿಗೆ, ಗಾಯತ್ರಿ ವಸ್ತ್ರದ, ಎಚ್.ಎಸ್. ಶೆಟ್ಟರ, ಸುಶೀಲಾ ಸೋಮಶೇಖರ, ಡಾ.‌ಸುಧಾ ಹುಚ್ಚಣ್ಣನವರ, ಸ್ವರ್ಣಗೌರಿ ಅವರು ನಿರ್ಣಯಗಳನ್ನು ಮಂಡಿಸಿದರು.

ನಿರ್ಣಯಗಳು:

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಬೇಕು.

ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿರುವುದನ್ನು ಸಮಾವೇಶ ಸ್ವಾಗತಿಸುತ್ತದೆ ಮತ್ತು ಸರ್ಕಾರವನ್ನು ಅಭಿನಂದಿಸುತ್ತದೆ.

ಬಸವಪೀಠ ಇರುವ ವಿಶ್ವವಿದ್ಯಾಲಯಗಳಿಗೆ ಪ್ರತಿ ವರ್ಷ 25 ಲಕ್ಷ ರೂ. ಅನುದಾನ ನೀಡಬೇಕು.

ಬೆಂಗಳೂರಿನ ಒಂದು ಆಯಕಟ್ಟು ಪ್ರದೇಶದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಬಸವಾದಿ ಶರಣರನ್ನು ಕುರಿತಂತೆ ಒಂದು ಶಾಶ್ವತ ಪ್ರದರ್ಶನ ವ್ಯವಸ್ಥೆ ಮಾಡಬೇಕು.

ಬಸವ ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು.

Share This Article
1 Comment
  • ನಿರ್ಣಯಗಳು ಸರ್ವಸಮ್ಮತವಾಗಿವೆ , ಈಡೇರಿ ಅನುಷ್ಠಾನಗೊಳ್ಳಲಿ .

    ಶರಣು ಶರಣಾರ್ಥಿ

Leave a Reply

Your email address will not be published. Required fields are marked *