ಹಿರೇಹಾಳ
ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಮುಂಡರಗಿ ತೋಂಟದಾರ್ಯ ಮಠ, ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ, ಕಾಯಕನಿಷ್ಠರಿಗೆ ಹಾಗೂ ಸೇವಾ ನಿವೃತ್ತರಿಗೆ ಸತ್ಕಾರದ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ರೈತರು, ಯುವಜನರು, ಮಹಿಳೆಯರು, ಜನಸಾಮಾನ್ಯರು ಮೌಡ್ಯ,ಕಂದಾಚಾರಗಳಿಂದ ಹೊರಬಂದು, ಬಸವಾದಿ ಶರಣರ ತತ್ವ ಸಿದ್ಧಾಂತವಾಗಿರುವ ಸತ್ಯಶುದ್ಧ ಕಾಯಕವನ್ನು ಮೈಗೂಡಿಸಿಕೊಂಡು ಬದುಕಬೇಕು. ಅದರಂತೆ ನಡೆದರೆ ಮನುಷ್ಯ, ಮನೆತನ, ನಾಡು, ದೇಶ ಪ್ರಗತಿ ಹೊಂದಲು ಸಾಧ್ಯವೆಂದು ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ನುಡಿದರು.
ಜನರ ಮೆಚ್ಚುಗೆಯನ್ನು ಪಡೆದುಕೊಂಡಿರುವ, ಸತತ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಶಶಿಧರ ತೇಲಿ ವಹಿಸಿಕೊಂಡಿದ್ದರು.
ಬಸವಕಲ್ಯಾಣದ ಗೋಣಿರುದ್ರಸ್ವಾಮಿ, ಭೀಮವ್ವತೇಲಿ, ಇಂದಿರಾ ಶಶಿಧರ ತೇಲಿ, ಉಮಾ ಶರಬಣ್ಣ ತೇಲಿ, ಸುಜಾತಾ ಕುಮಾರ ತೇಲಿ, ರೇಣುಕಾ ಹರಗೇರಿ, ಶಂಭುಲಿಂಗಪ್ಪ ಹರಗೇರಿ, ಉಮೇಶ ಬಾಗೂರ, ಸುರೇಶ ಮಾದರ, ಚನ್ನಪ್ಪ ಜಕ್ಕಣ್ಣವರ, ಜಗದೀಶ ಮಡಿವಾಳರ, ಅಂದಾನಪ್ಪ ಶೆಟ್ಟರ,ಯಮನೂರಸಾಬ ಸಂಗಮ, ಸಂಗಮೇಶ ಬಾಗೂರ, ಸಿದ್ಲಿಂಗಪ್ಪ ಜಾವೂರ, ವಿಜಯಲಕ್ಷ್ಮಿ ತಬಲಟ್ಟಿ, ತೇಲಿ ಬಂಧುಗಳು, ಆಪ್ತಮಿತ್ರರು ಹಾಗೂ ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.