ಬಳ್ಳಾರಿ
‘ಬಸವ ಸಂಸ್ಕೃತಿ ಅಭಿಯಾನ’ದ ಮೊದಲನೇ ಪೂರ್ವಭಾವಿ ಸಿದ್ಧತಾ ಸಭೆ ಬಳ್ಳಾರಿ ನಗರದ, ವಿಶ್ವಗುರು ಬಸವ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು.
ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಆಗಮಿಸಿ ಸಾನಿಧ್ಯ ವಹಿಸಿ ಮಾತನಾಡುತ್ತ, ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 1ರವರೆಗೆ ರಾಜ್ಯಾದ್ಯಂತ ನಡೆಯುವ ಬಸವ ಸಂಸ್ಕೃತಿ ಅಭಿಯಾನ, ಕಾರ್ಯಕ್ರಮದ ರೂಪರೇಷೆಗಳನ್ನು ಸಭೆಗೆ ವಿವರಿಸಿದರು.

ಸೆಪ್ಟಂಬರ್ 6ರಂದು ಜಿಲ್ಲೆಯ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದು, ಬೆಳಿಗ್ಗೆ 10 ಗಂಟೆಗೆ ಅಭಿಯಾನದ ಸ್ವಾಗತ, ಹನ್ನೊಂದು ಗಂಟೆಗೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ ನಾಲ್ಕು ಗಂಟೆಗೆ ಪಥಸಂಚಲನ, 6 ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವೇದಿಕೆ ಕಾರ್ಯಕ್ರಮ, ರಾತ್ರಿ 8 ಗಂಟೆಗೆ, ಸಾಣೆಹಳ್ಳಿ ಕಲಾತಂಡದ ವತಿಯಿಂದ ಶರಣ ಸಂಸ್ಕೃತಿಯ ನಾಟಕ ಪ್ರದರ್ಶನ, ರಾತ್ರಿ 9ಕ್ಕೆ ಮಹಾಮಂಗಳ ಹಾಗೂ ದಾಸೋಹದ ವ್ಯವಸ್ಥೆ ಇರುತ್ತದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳು ಆಯೋಜಿಸಲು ಜಿಲ್ಲಾಮಟ್ಟದ ಸಮಿತಿ, ಉಪಸಮಿತಿಗಳ ರಚನೆ ಬಗ್ಗೆ ಕಾರ್ಯೋನ್ಮುಖರಾಗಲು, ಅಭಿಯಾನವನ್ನು ಯಶಸ್ವಿಗೊಳಿಸಲು, ಸರ್ವರು ಸಂಕಲ್ಪ ತೊಡಲು ವಿನಂತಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಲಿಂಗಾಯತ, ಬಸವಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಬಸವ ಸಂಸ್ಕೃತಿ ಅಭಿಯಾನವನ್ನು, ಭಕ್ತಿ, ಶ್ರದ್ಧೆ, ನಿಷ್ಠೆ ಹಾಗೂ ವಿಜೃಂಭಣೆಯಿಂದ ಅಭಿಯಾನ ನಡೆಸಲು ನಿರ್ಧರಿಸಿದರು.

ರಾಷ್ಟ್ರೀಯ ಬಸವದಳದ ರಾಜ್ಯ ಉಪಾಧ್ಯಕ್ಷ ರವಿಶಂಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲಾಕ್ಷಗೌಡ, ಮುಖಂಡ ಸುರೇಶ, ಸಹಮತ ವೇದಿಕೆಯ ಜಿಲ್ಲಾಧ್ಯಕ್ಷ ಪನ್ನರಾಜು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಮುಖರಾದ ಎನ್.ಜಿ. ಬಸವರಾಜಪ್ಪ, ಗಾಳೇಶಪ್ಪ, ವಿಶ್ವನಾಥ, ಅಕ್ಕ ನಾಗಲಾಂಬಿಕ ಮಹಿಳಾ ಗಣದ ವಚನಾಂಬಿಕೆ, ಲಿಂಗಾಯತ ಧರ್ಮ ಮಹಾಸಭಾದ ನಾಗರಾಜ, ಡಾ. ಶಿವಪ್ರಕಾಶ, ಉಮಾಪತಿಗೌಡ, ಜಿ.ಕೆ. ನಾಗರಾಜಪ್ಪ ಸೇರಿದಂತೆ ಸಿರಗುಪ್ಪ, ಕುರಗೋಡ, ಸೊಂಡೂರು, ಬಳ್ಳಾರಿ ತಾಲ್ಲೂಕುಗಳ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಮೊದಲಿಗೆ ಬಸವ ಜ್ಯೋತಿಯನ್ನು ಬೆಳಗಿಸುವ ಮೂಲಕ ಸಭೆ ಆರಂಭಿಸಲಾಯಿತು. ವಚನ ಗಾಯನ ನಡೆಯಿತು. ವಚನ ಮಹಾಮಂಗಲದ ನಂತರ ಪ್ರಸಾದ ಸ್ವೀಕರಿಸಿ ಸಭೆಯನ್ನು ಮುಕ್ತಾಯವಾಯಿತು.