ವಚನಗಳನ್ನು ತಪ್ಪಾಗಿ ಅರ್ಥೈಸಿದರೆ ಸಮಾಜದಲ್ಲಿ ಅಸ್ವಸ್ಥತೆ: ವಿ ಸೋಮಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ನವದೆಹಲಿ

ವಚನಗಳ ನಿಜ ಅರ್ಥವನ್ನು ಸರಿಯಾಗಿ ಅರ್ಥೈಸದ ಕೆಲವರು, ಸಮಾಜದ ಅಸ್ವಸ್ಥತೆಗೆ ಕಾರಣರಾಗುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು.

ಬದುಕಿನಲ್ಲಿ ತಪ್ಪುಗಳಾಗಿದ್ದರೆ, ಅವುಗಳನ್ನು ಸರಿಪಡಿಸಲು ಶರಣರ ವಚನಗಳು ಸಹಕಾರಿಯಾಗುತ್ತವೆ. ಆದರೆ ಈ ಶ್ರೀಮಂತ ಸಾಹಿತ್ಯ ಅದು ನಮ್ಮ ಜೀವನಕ್ಕೆ ಹತ್ತಿರವಾಗದೆ, ದೂರವೇ ಉಳಿದಿದೆ ಎಂದು ಹೇಳಿದರು.

ದೆಹಲಿಯ ಪ್ರಜ್ಞಾಪ್ರವಾಹ ಮತ್ತು ಕೆಂಪೇಗೌಡ ಫೌಂಡೇಷನ್‌ ಸಂಯುಕ್ತ ಆಶ್ರಯದಲ್ಲಿ ದೆಹಲಿ ಕರ್ನಾಟಕ ಸಂಘದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ರವಿವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ ಮಾತನಾಡಿದರು. ವಚನಗಳು ಸಾಮಾನ್ಯವಾಗಿ ಭಕ್ತಿಗೆ ಪ್ರಧಾನ್ಯತೆಯನ್ನು ನೀಡುತ್ತವೆ, ಅದು ಸರಳ ಆಧ್ಯಾತ್ಮಿಕ ಸಾಧನೆ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿದರು. ಶ್ರೀ ಶಿವಾನಂದ ಬೃಹನ್ಮಠ ಗದಗದ ಪರಮಪೂಜ್ಯ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ದೆಹಲಿ ಕರ್ನಾಟಕದ ಸಂಘದ ಅಧ್ಯಕ್ಷ ಸಿ. ಎಂ ನಾಗರಾಜ್, ದೆಹಲಿಯ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಪ್ರಕಾಶ್ ಸಿಂಗ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಎಂ ಶ್ರೀನಿವಾಸ್‌, ಜೆಎನ್‌ಯು ಪ್ರೊಫೆಸರ್‌ ಡಾ. ಸಂಗಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *