ಸಾಹಿತ್ಯ ಸಮ್ಮೇಳನದಲ್ಲಿ ಜರ್ಮನ್ ಪ್ರಜೆ
ಶರಣ ಸಾಹಿತ್ಯ ಸಮ್ಮೇಳನದಲ್ಲಿ ಜರ್ಮನ್ ದೇಶದ ಸೈಮನ್ ಪಾಲ್ಗೊಂಡಿದ್ದರು. ಅವರಿಗೆ ರುದ್ರಾಕ್ಷಿ ಮಾಲೆಯನ್ನು ಬಸವಲಿಂಗಸ್ವಾಮಿಗಳು ಕಾಣಿಕೆಯಾಗಿ ನೀಡಿದರು.
ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಬಸವ ತತ್ವಕ್ಕೆ 500 ಕೋಟಿ ರೂಪಾಯಿ ಯೋಜನೆ: ಎಂ ಬಿ ಪಾಟೀಲ್
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿದ್ದರಾಮ ಬೆಲ್ದಾಳ ಶರಣರು ಅವರಿಂದ ಅಧ್ಯಕ್ಷೀಯ ನುಡಿಗಳು
ಬಸವಾದಿ ಶರಣರ ವಚನ ಸಾಹಿತ್ಯವಾಗಿದೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಜಗತ್ತಿನ ಏಕೈಕ ಸಾಹಿತ್ಯ. ಸ್ವತಂತ್ರ, ಸ್ವಾನುಭವ ಸಾಹಿತ್ಯವಾಗಿರುವ ವಚನ ಸಾಹಿತ್ಯದ ಮಾನವೀಯ ಮೌಲ್ಯಗಳನ್ನು ಬೇರಾವ ಸಾಹಿತ್ಯದಲ್ಲೂ ನಾವು ಕಾಣಲಾರೆವು.
ಫೋಟೋಗಳಲ್ಲಿ 13ನೇ ಶರಣ ಸಾಹಿತ್ಯ ಸಮ್ಮೇಳನ
ಸಮ್ಮೇಳನದಲ್ಲಿ ತೋಂಟದ ಸಿದ್ದರಾಮ ಶ್ರೀಗಳ ಭಾಷಣ
ಅ.ಭಾ. ಶ.ಸಾಹಿತ್ಯ ಪರಿಷತ್ ಕದಳಿ ಮಹಿಳಾ ವೇದಿಕೆ ಮೂಲಕ ಶರಣ ಸಾಹಿತ್ಯವನ್ನು ಮಹಿಳೆಯರು-ಮಕ್ಕಳಲ್ಲಿ ಬಿತ್ತುತ್ತಿರುವುದು ದೊಡ್ಡ ಕಾರ್ಯವಾಗಿದೆ. ವ್ಯಕ್ತಿಯ ಆತ್ಮಕಲ್ಯಾಣದ ಮೂಲಕ ಸಮಾಜಕಲ್ಯಾಣದ ಸಂದೇಶ ಶರಣರ ವಚನ ಸಾಹಿತ್ಯದಲ್ಲಿ ಅಡಗಿದೆ. ಸಮಾಜದಲ್ಲಿ ಸಂಘರ್ಷ ತಪ್ಪಿಸಿ ಶಾಂತಿ, ಸೌಹಾರ್ದತೆ, ಸಮಾನತೆ ಸ್ಥಾಪಿಸಬೇಕಾದರೆ ವಚನ ಸಾಹಿತ್ಯವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶ್ರಮಸಂಸ್ಕೃತಿಯನ್ನು ಬಲು ಎತ್ತರಕ್ಕೆ ಎತ್ತಿಹಿಡಿದದ್ದು ಶರಣ ಸಾಹಿತ್ಯ, ಇದು ನಮ್ಮೆಲ್ಲರ ಹೆಮ್ಮೆ.
ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಮುಖ್ಯಮಂತ್ರಿಗಳ ಭೇಟಿ: ಭಾಲ್ಕಿ ಶ್ರೀ
ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರ ಭಾಷಣ:
ಸರ್ಕಾರ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತಿದೆ. ಅನುಭವ ಮಂಟಪಕ್ಕೆ ಜೀವಂತಿಕೆ, ಚೈತನ್ಯ ಬರಬೇಕಾದರೆ ಅಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಮಠಾಧೀಶರಾದ ನಾವು ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧರಿದ್ದೇವೆ. ಇಲ್ಲಿ ಉಪಸ್ಥಿತರಿರುವ ಸಚಿವ ಎಂ.ಬಿ.ಪಾಟೀಲರ ಗಮನಕ್ಕೂ ಇದನ್ನು ತರುತ್ತಿದ್ದೇವೆ. ಬಸವಾದಿ ಶರಣರ ವಚನಗಳನ್ನು ಶಾಲಾ, ಕಾಲೇಜುಗಳ ಪಠ್ಯದಲ್ಲಿ ಅಳವಡಿಸಬೇಕೆಂದು ಒತ್ತಾಯಿಸುವೆ. ಅನುಭಾವಿ ಬೆಲ್ದಾಳ ಶರಣರನ್ನು ಈ ಸಮ್ಮೇಳನದ ಅಧ್ಯಕ್ಷರಾಗಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಪ್ರಾಸ್ತಾವಿಕ ನುಡಿ: ಡಾ.ಸಿ. ಸೋಮಶೇಖರ, ಅಧ್ಯಕ್ಷ ಶ.ಸಾ.ಪ.
ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಶರಣ ಸಾಹಿತ್ಯದಲ್ಲಿ ಅಡಗಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದು ಸಾಗತಾರ್ಹ. ಆದರೆ ಸಾಲದು, ಸರಕಾರ ಅವರ ಸಾಹಿತ್ಯ ಅಧ್ಯಯನಕ್ಕೆ ಮುಂಬರುವ ಬಜೆಟಿನಲ್ಲಿ 500 ಕೋಟಿ ರೂಪಾಯಿ ಮೀಸಲೀಡಬೇಕು.
ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ನಗರದ ಮುರುಘಾ ಮಠದ ಆವರಣದಲ್ಲಿ ಆಯೋಜನೆಗೊಂಡಿರುವ 2 ದಿನಗಳ ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನಕ್ಕೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಶನಿವಾರ ಚಾಲನೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮುರುಘಾ ಮಠದ ಅನುಭವ ಮಂಟಪದಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ. ಸಿದ್ದರಾಮ ಬೆಲ್ದಾಳ ಶರಣರು ಸಾರ್ವಧ್ಯಕ್ಷತೆ ವಹಿಸಿದ್ದಾರೆ. ನಾಡಿನ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ: ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ
0 ವರ್ಷಗಳ ನಂತರ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಬರುತ್ತಿದ್ದಾರೆ.
ಬಸವಕಲ್ಯಾಣದ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಸಂಕಿರಣಗಳು ಚಿಂತನ, ವಚನ ಗಾಯಕ, ರೂಪಕ ಚಟುವಟಿಕೆಗಳು ಶನಿವಾರ ಹಾಗೂ ಭಾನುವಾರ ನಡೆಯಲಿವೆ. ಪ್ರತಿ ದಿನ ಕಾರ್ಯಕ್ರಮಗಳಲ್ಲಿ 15-25,000 ಜನ ಸೇರುವ ನಿರೀಕ್ಷೆಯಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.