ಬಸವ ಕಲ್ಯಾಣ
ಲಿಂಗಾಯತ ಧರ್ಮದ ಆಚರಣೆ ಹಾಗೂ ಆ ತತ್ವವನ್ನು ಜೀವನದಲ್ಲಿ ಅಳವಡಿಸುವ ಪ್ರೇರಣೆ ಕೊಡಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಅನೇಕ ಮಠ ಮಾನ್ಯಗಳ ಅವಿರತ ಪ್ರಯತ್ನ ನಡೆಯುತ್ತಿದೆ ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಶುಕ್ರವಾರ ನುಡಿದರು.
ಇದರ ಫಲವಾಗಿ ಕರ್ನಾಟಕ ಸಮೃದ್ಧ ರಾಜ್ಯವಾಗಿದೆ. ಶಾಂತಿ ನೆಲೆಸುವ ಪ್ರದೇಶ ಮತ್ತಷ್ಟು ಸಮೃದ್ಧಿಯಾಗಲು ಸಾಧ್ಯವಾಗುತ್ತದೆ. ವೈಚಾರಿಕತೆ ಇದ್ದಲ್ಲಿ ಶಾಂತಿ ಇರುತ್ತದೆ.ಜನರಲ್ಲಿ ತತ್ವದ ಆಚರಣೆಯ ಬಗ್ಗೆ ಆಸಕ್ತಿ ಮತ್ತು ಶ್ರದ್ಧೆ ಇದ್ದಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ ಎಂದರು.

ಬಸವ ಧರ್ಮ ಪೀಠ ಕೂಡಲ ಸಂಗಮದಿಂದ ಇಲ್ಲಿನ ಬಸವ ಮಹಾಮನೆ ಪರಿಸರದಲ್ಲಿ ನಡೆಯುತ್ತಿರುವ 24ನೇ ಕಲ್ಯಾಣ ಪರ್ವವನ್ನು ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ಕ್ರಾಂತಿ ಮತ್ತು ಬಸವತತ್ವ ಪ್ರಚಾರ ಮಾಡುವಲ್ಲಿ ಪೂಜ್ಯ ಮಾತೆ ಮಹಾದೇವಿ ಅವರ ಕೊಡುಗೆ ದೊಡ್ಡದು.
ನಾಡಿನಲ್ಲಿ ಬಸವಣ್ಣನವರ, ಬಸವಾದಿ ಶರಣರ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುವಲ್ಲಿ ಮಾತೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದಲಾವಣೆ ಸಾಧ್ಯ ಎಂಬುವುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ.
ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ದಾರಿ ತಪ್ಪುತ್ತಿರುವ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಹೇಳಿಕೊಡಬೇಕಿದೆ. ಲಿಂಗಾಯತ ಧರ್ಮದ ಆಚರಣೆಗಳನ್ನು ತಿಳಿಸಿ ಲಿಂಗಪೂಜೆ ಮಾಡುವುದನ್ನೂ ಕಲಿಸಿಕೊಟ್ಟು ಕಾಯಕ ದಾಸೋಹದ ಬಗ್ಗೆ ಪ್ರಜ್ಞೆ ಮೂಡಿಸಬೇಕಿದೆ ಎಂದರು.

ಕೂಡಲ ಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷರಾದ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದರೆ ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿದರು.
ಪೌರಾಡಳಿತ ಇಲಾಖೆ ಸಚಿವ ರಹೀಮ್ ಖಾನ್ ಕ್ಯಾಲೆ೦ಡರ್ ಬಿಡುಗಡೆಗೊಳಿಸಿದರು. ಷಟಸ್ಥಲ ಧ್ವಜಾರೋಹಣವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ನೆರವೇರಿಸಿದರು. ಮಾಜಿ ಎಂಎಲ್ಸಿ ವಿಜಯ ಸಿಂಗ್ ಹಾಗೂ ಕಲಬುರಗಿ ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಅನುಭಾವ ನೀಡಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ್ ಪಾಟೀಲ್ ಗುರು ಬಸವ ಪೂಜೆ ನೆರವೇರಿಸಿದರೆ ಅಲ್ಲಮಪ್ರಭು ಯೋಗಪೀಠದ ಜಗದ್ಗುರು ಬಸವಕುಮಾರಸ್ವಾಮಿ ಬಸವ ಪ್ರಾರ್ಥನೆ ನಡೆಸಿಕೊಟ್ಟರು.
ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ ಕೂಡಲ ಸಂಗಮದ ಮಹದೇಶ್ವರ ಸ್ವಾಮೀಜಿ, ಧಾರವಾಡದ ಮಾತೆ ಜ್ಞಾನೇಶ್ವರಿ, ಅನುಭವ ಮಂಟಪದ ಸಂಚಾಲಕ ಶಿವಾನಂದ ದೇವರು ಸಾನ್ನಿಧ್ಯ ವಹಿಸಿದರು. ಸ್ವಾಗತ
ಸಮಿತಿ ಅಧ್ಯಕ್ಷ ಕಂಟೆಪ್ಪ ಗಂದಿಗುಡಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಕಲಬುರಗಿ ವಿದ್ಯುತ್ ಶಕ್ತಿ ಸರಬರಾಜು ಕಂಪನಿ ಅಧ್ಯಕ್ಷ ಪ್ರವೀಣ ಹರವಾಳ, ಬಿಡಿಪಿಸಿ ಅಧ್ಯಕ್ಷ ರವೀಂದ್ರ ಕೊಳಕುರ, ನಗರಸಭೆ ಅಧ್ಯಕ್ಷ ಎಂಡಿ ಸಗಿರೋದ್ದಿನ್, ಬೀದ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ, ಬಸವದಳದ ತಾಲೂಕು ಅಧ್ಯಕ್ಷರವೀಂದ್ರ ಕೊಳಕುರ, ಪ್ರಮುಖರಾದ ಆರ್ .ಜಿ.ಶಟಗಾರ,ಜಯರಾಜಖಂಡ್ರೆ, ಸುರೇಶಸಜ್ಜನ್, ಆಕಾಶ ಖಂಡಾಳೆ, ಶಿವಕುಮಾರ ಶಟಗಾರ, ವಿವೇಕ
ಧನ್ನೂರ, ರೇವಣಪ್ಪ ಮೂಲಗೆ ಹಾಗೂ ಪ್ರಮುಖರಿದ್ದರು.

ಶಿವರಾಜ ನರಶೆಟ್ಟಿ ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಬಸವರಜ ಬುಳ್ಳಾ ಪ್ರಾಸ್ತಾವಿಕ ಮಾತನಾಡಿದರು. ಸುರೇಶಕುಮಾರ ಸ್ವಾಮಿ ಹಾಗೂ ನವಲಿಂಗ ಪಾಟೀಲ್ ನಿರೂಪಿಸಿ ಶ್ರೀಕಾಂತ ಬುರಾಳೆ
ವಂದಿಸಿದರು.