ಬೆಳಗಾವಿ:
ಲಿಂಗಾಯತ ಪಂಚಮಸಾಲಿ ವಕೀಲರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 15ರಂದು 2A ಮೀಸಲಾತಿ ವಿಷಯ ಚರ್ಚಿಸಲು ಆಹ್ವಾನಿಸಿದ್ದಾರೆ.
ಇಲ್ಲಿನ ಗಾಂಧಿ ಭವನದಲ್ಲಿ ಪಂಚಮಸಾಲಿ ಪೀಠದ ಪ್ರಥಮ ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸಮಾಜದ ವಕೀಲರು ಬಂದಿದ್ದರು.
ಸಮಾವೇಶದ ವೇದಿಕೆಗೆ ಬಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಅವರು ಅಕ್ಟೋಬರ್ 15ರಂದು ಸಮಯ ನೀಡಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ವಕೀಲರು ಗದ್ದಲ ಆರಂಭಿಸಿದಾಗ, ಸ್ಥಳದಲ್ಲಿದ್ದ ಶಾಸಕ ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಅವರಿಗೆ ಮೊಬೈಲ್ ಕರೆ ಮಾಡಿ ಶ್ರೀಗಳ ಕೈಗೆ ಕೊಟ್ಟರು.
‘ಈಗ ದಸರಾ ಹಬ್ಬವಿದೆ. ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಹೋರಾಟ ಮುಂದುವರಿಸಬೇಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಾತ್ರ ವೇದಿಕೆ ಮೇಲೆ ಕೂಡಿಸಿ, ಎಲ್ಲ ಜನಪ್ರತಿನಿಧಿಗಳು, ನಾಯಕರನ್ನು ಕೆಳಗೆ ಕೂರಿಸಲಾಯಿತು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತು, ನ್ಯಾಯಪೀಠ– ಕೂಡಲಸಂಗಮ, ಜಿಲ್ಲಾ ವಕೀಲರ ಪರಿಷತ್ ಆಶ್ರಯದಲ್ಲಿ ಸಮಾವೇಶ ನಡೆಯಿತು.
ಮೂರು ನಿರ್ಣಯ
ವಕೀಲರ ಸಮಾವೇಶದಲ್ಲಿ ಮೂರು ನಿರ್ಣಯಗಳನ್ನು ಅಂಗೀಕಾರ ಮಾಡಲಾಗಿದೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳಿಂದ ನಿರ್ಣಯಗಳ ಮಂಡನೆ ಮಾಡಲಾಯಿತು.
1) ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗಗಳ ಆಯೋಗದಿಂದ ಪೂರ್ಣಪ್ರಮಾಣದ ವರದಿ ಪಡೆದು 2A ಮೀಸಲಾತಿ ನೀಡಬೇಕು.
2) ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರಕಾರದಿಂದ ದೊರೆಯುವ ಓಬಿಸಿ ಮೀಸಲಾತಿ ಸೌಲಭ್ಯವನ್ನು ನೀಡುವಂತೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
3) ಅ 15 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು 2A ಮೀಸಲಾತಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಬೇಕು
ಇಲ್ಲದಿದ್ದರೆ ಡಿಸೆಂಬರ್ 15 ರಂದು 10 ಸಾವಿರ ವಕೀಲರು ಹಾಗೂ ಐದು ಸಾವಿರ ರೈತರ ಟ್ರಾಕ್ಟರ್ ಮೂಲಕ ಸುವರ್ಣ ವಿಧಾನಸೌಧಕ್ಕೆ ಮಹಾ ಮುತ್ತಿಗೆ ಹಾಕಲಾಗುವದು ಎಂದು ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಪಂಚಮಸಾಲಿ ಅಡ್ವೋಕೇಟ್ ಪರಿಷತ್
ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಡ್ವೋಕೇಟ್ ಪರಿಷತ್ ಅಸ್ತಿತ್ವಕ್ಕೆ ತರಲಾಯಿತು.
ಪೂಜ್ಯ ಬಸವಜಯ ಮೃತ್ಯುಂಜಯ ಶ್ರೀಗಳು ಅಡ್ವೋಕೇಟ್ ಪರಿಷತ್ ಘೋಷಣೆ ಮಾಡಿ, ಪರಿಷತ್‌ನ ಬ್ಯಾನರ್ ಅನಾವರಣಗೊಳಿಸಿದರು.
ಸಿಎಂ ಮಾತೂ ಒಪ್ಪದ ವಕೀಲರು
ಪರ–ವಿರೋಧ ಚರ್ಚೆಯಿಂದ ಸಭೆ ಗದ್ದಲದಲ್ಲಿ ನಡೆಯಿತು. ಸಮಾವೇಶದಲ್ಲಿ ವಕೀಲರನ್ನು ಸಮಾಧಾನಪಡಿಸಲು, ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹರಸಾಹಸ ಪಡಬೇಕಾಯಿತು.
ಒಂದೇ ವಾರದಲ್ಲಿ ಭೇಟಿಯಾಗಲು ಮುಖ್ಯಮಂತ್ರಿ ಸಮಯ ನೀಡಬೇಕು ಎಂದು ವಕೀಲರು ಹಠ ಹಿಡಿದರು.
ಸಮಾವೇಶದ ವೇದಿಕೆಗೆ ಬಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ‘ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಅವರು ಅಕ್ಟೋಬರ್ 15ರಂದು ಸಮಯ ನೀಡಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ವಕೀಲರು ಸಿದ್ದರಾಮಯ್ಯ ಅವರೇ ಸ್ವಾಮೀಜಿ ಅವರಿಗೆ ಫೋನ್ ಮಾಡಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಶಾಸಕ ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಅವರಿಗೆ ಮೊಬೈಲ್ ಕರೆ ಮಾಡಿ ಶ್ರೀಗಳ ಕೈಗೆ ಕೊಟ್ಟರು.
‘ದಸರಾ ಹಬ್ಬ ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಹೋರಾಟ ಮುಂದುವರಿಸಬೇಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಇದಕ್ಕೆ ಕೆಲವರು ಒಪ್ಪಿಕೊಂಡರೆ ಇನ್ನೂ ಕೆಲವರು ಇಂಥ ಭರವಸೆ ಸಾಕಷ್ಟು ಕೇಳಿದ್ದೇವೆ, ಈಗಲೇ ರಾಣಿ ಚನ್ನಮ್ಮ ವೃತ್ತಕ್ಕೆ ಹೋಗಿ ಹೋರಾಟ ಆರಂಭಿಸೋಣ ಎಂದರು.
ಆಗ ಶಾಸಕರಾದ ವಿನಯ ಕುಲಕರ್ಣಿ, ಎಸ್.ಎಸ್.ಪಾಟೀಲ ‘ಈದ್ ಮಿಲಾದ್ ಅಂಗವಾಗಿ ಮುಸ್ಲಿಮರ ಬೃಹತ್ ಮೆರವಣಿಗೆ ನಡೆದಿದೆ. ನಾವೂ ಅಲ್ಲಿಗೆ ನುಗ್ಗಿದರೆ ಗೊಂದಲ ಮೂಡಬಹುದು. ಕೋಮು ಸೌಹಾರ್ದ ಕದಡುವುದು ಬೇಡ’ ಎಂದು ಮನವಿ ಮಾಡಿಕೊಂಡರು.
ನಂತರ ಸ್ವಾಮೀಜಿ ಹಾಗೂ ಕೆಲವು ವಕೀಲರು ವೃತ್ತಕ್ಕೆ ತೆರಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಾತ್ರ ವೇದಿಕೆ ಮೇಲೆ ಕೂಡಿಸಿ, ಎಲ್ಲ ಜನಪ್ರತಿನಿಧಿಗಳು, ನಾಯಕರನ್ನು ಕೆಳಗೆ ಕೂರಿಸಲಾಯಿತು.