ಕಮಲನಗರದಲ್ಲಿ 5ನೇ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ

ಬಸವ ಮೀಡಿಯಾ
ಬಸವ ಮೀಡಿಯಾ

ಕಮಲನಗರ

ಕರ್ನಾಟಕ ರಾಜ್ಯ ವಚನ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೀದರ್‌ ಸಹಯೋಗದಲ್ಲಿ ಅ.28ರಂದು ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ 5ನೇ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಕಾರ್ಯಕ್ರಮದ ಕರಪತ್ರವನ್ನು ವಚನ ಸಾಹಿತ್ಯ ಪರಿಷತ್ ಕಮಲನಗರ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಮಹಾದೇವಮ್ಮಾ ತಾಯಿ ಮತ್ತು ಬಸವ ಭಕ್ತರು ಶನಿವಾರ ಬಿಡುಗಡೆ ಮಾಡಿದರು.

ಮಹಾದೇವಮ್ಮಾ ತಾಯಿ ಮಾತನಾಡಿ. ‘ಶರಣರ ನಾಡಿನಲ್ಲಿ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿರುವುದು ಬಹಳ ಸಂತೋಷದ ವಿಷಯ. ಶರಣ ಬಾಂಧವರು ಕುಟುಂಬ ಸಮೇತರಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಶರಣರ ಬಗ್ಗೆ ಮತ್ತು ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಅನುಭವ ಪಡೆದುಕೊಳ್ಳಬೇಕು’ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಕಮಲನಗರ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಲಿಂಗಾನಂದ ಮಹಾಜನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ಗ್ರಾ.ಪಂ.ಅಧ್ಯಕ್ಷ ಸುಶೀಲಾಬಾಯಿ ಮಹೇಶ ಸಜ್ಜನಶೆಟ್ಟಿ, ಉದ್ಯಮಿಗಳಾದ ರಾಜಕುಮಾರ ಬಿರಾದಾರ, ಚನ್ನಬಸವ ಘಾಳೆ, ರಾಜಕುಮಾರ ತಂಬಾಕೆ, ಪ್ರಭುರಾವ ಬಿರಾದಾರ, ಧೂಳಪ್ಪಾ ನಿಟ್ಟೂರೆ, ಪ್ರಕಾಶ ಸೊಲ್ಲಾಪುರೆ, ಸುರೇಶ ಸೊಲ್ಲಾಪುರೆ, ಕಲ್ಲೇಶ ಉದಗೀರೆ, ಮಹೇಶ ಸಜ್ಜನಶೆಟ್ಟಿ, ನಾಗನಾಥ ಮಠ, ರಾಜಕುಮಾರ ಪಾಟೀಲ, ಮಹಾದೇವ ನಿಟ್ಟೂರೆ, ಶ್ಯಾಮ ಬಿರಾದಾರ, ರಮೇಶ ಬಿರಾದಾರ, ಶಿವಗಂಗಾ ಹಳಕಾಯಿ, ವರ್ಷಾ ಬಿರಾದಾರ, ಕಮಲನಗರ ವಚನ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ, ಕೋಶಾಧ್ಯಕ್ಷರಾದ ಪ್ರಭುರಾವ ಕಳಸೆ, ಪ್ರಭುರಾವ ಬಿರಾದಾರ, ಕಲ್ಲೇಶ್ವರ ಅಕ್ಕನ ಬಳಗ ಭಜನಾ ಮಂಡಳಿ ಶರಣೆಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *