ಗುಂಡ್ಲುಪೇಟೆಯಲ್ಲಿ ಬಸವ ಧರ್ಮ ಜಾಗೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ

ಗುಂಡ್ಲುಪೇಟೆ

ಬಸವ ಭಾರತ ಪ್ರತಿಷ್ಠಾನ ಮೈಸೂರು ಹಾಗೂ ಶ್ರೀ ಉದ್ದಾನೇಶ್ವರ ವಿರಕ್ತಮಠ ಮುಡಗೂರು ಇವರ ಸಹಯೋಗದಲ್ಲಿ ಬಸವ ಧರ್ಮ ಜಾಗೃತಿ ಅಭಿಯಾನವನ್ನು ಶುಕ್ರವಾರ ಅಯೋಜಿಸಲಾಗಿತ್ತು.

ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮಹೇಂದ್ರ ಮೂರ್ತಿಯವರು ಬಸವಣ್ಣನವರ ಜೀವನ ಮತ್ತು ಸಾಧನೆಯನ್ನು ಕುರಿತು ಮಾತನಾಡಿದರು.

ಬಸವಣ್ಣನವರು ಯುಗದ ಉತ್ಸಾಹ, ಕನ್ನಡ ನಾಡು-ನುಡಿಗೆ ಸಮಸ್ಯೆ ಬಂದಾಗಲೆಲ್ಲ ನಮಗೆ ಬಸವಣ್ಣನವರಲ್ಲಿ ಪರಿಹಾರ ಸಿಗುತ್ತದೆ. ನಮಗೆ ಅರಿವಾಗದಂತೆ ಬೆಳೆಸುವ ಗುಣ ,ವ್ಯಕ್ತಿತ್ವ ಬಸವಣ್ಣನವರ ಸಾಹಿತ್ಯದಲ್ಲಿ ಇದೆ. ದೇಶಕ್ಕೆ ಹೇಗೆ ಸಂವಿಧಾನವಿದಿಯೋ ಹಾಗೆ ದೇಹಕ್ಕೆ ಒಂದು ಸಂವಿಧಾನವನ್ನು ಕೊಟ್ಟವರು ಅವರು.

ಬಸವಣ್ಣನವರು ಏಕಾಂತ ಮತ್ತು ಲೋಕಾಂತಗಳನ್ನು ಸಮನ್ವಯಿಸಿ ಬದುಕಿದವರು. ಏಕಾ ದೇವೋಪಾಸನೆ ಕಾಯಕ ಪ್ರಜ್ಞೆ, ದೇವಾಲಯ ನಿರಾಕರಣೆ, ದಾಸೋಹಂ ಪರಿಕಲ್ಪನೆ, ನಡೆ-ನುಡಿ ಏಕತ್ರ, ಗುರು, ಲಿಂಗ, ಜಂಗಮ, ಪ್ರಸಾದಗಳ ಮಹತ್ವ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಸರ್ವೋದಯ, ಜಾತ್ಯಾತೀತ ನಿಲುವು, ವೈಚಾರಿಕ ಪ್ರಜ್ಞೆ, ದಯವೇ ಧರ್ಮದ ಮೂಲ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಡುಗೂರು ಮಠದ ಪೂಜ್ಯರಾದ ಶ್ರೀ ಇಮ್ಮಡಿ ಉದ್ದಾನ ಸ್ವಾಮಿಗಳು ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳನ್ನು ತಿಳಿಸಿ ಕನ್ನಡ ನಾಡು ನುಡಿಗೆ ಶರಣರ ಕೊಡುಗೆ ಅಪಾರ ಎಂದರು. ದೀಪಾವಳಿಯಂದು ಚಿನ್ನಯ ಜ್ಞಾನಿ ಚನ್ನಬಸವಣ್ಣನವರ ಜಯಂತಿ ಆಚರಣೆ ಬಗ್ಗೆ ಮಾತನಾಡಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನ ಪಡೆದ ಮಹಾ ಬಸವ ಕಿರಣ ಚನ್ನಬಸವಣ್ಣ ಎಂದರು. ಪೂಜ್ಯರು ಇಷ್ಟಲಿಂಗ ದೀಕ್ಷ ಶಿವಯೋಗದ ಮಹತ್ವವನ್ನು ತಿಳಿಸಿಕೊಟ್ಟರು.

ಬಸವ ಪತ್ರಿಕೆಯ ಸಂಪಾದಕರಾದ ಶ್ರೀ ಶಿವರುದ್ರಪ್ಪ, ಮುಖ್ಯ ಅತಿಥಿಶ್ರೀ ಬಸಪ್ಪ ದೇವರು ,ಶ್ರೀ ಕಾ.ಸು. ನಂಜಪ್ಪ, ಶ್ರೀ ಚೌಹಳ್ಳಿ ನಿಂಗರಾಜಣ್ಣ ಮಧುಶಂಕರ್ ನಂದೀಶ್ ಮೇಷ್ಟ್ರು ಬೊಮ್ಮಲಾಪುರ ಬಸವಣ್ಣ ಹಲವಾರು ಬಸವ ಭಕ್ತರು ಭಾಗವಹಿಸಿದ್ದರು

Share This Article
1 Comment

Leave a Reply

Your email address will not be published. Required fields are marked *