ಬೆಂಗಳೂರು
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ರಚಿಸಿದ ತೌಲನಿಕ ಧರ್ಮ ದರ್ಶನ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿ ದೊರಕಿದೆ.
2022 ಹಾಗೂ 2023ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ನೀಡಲಾಗುವ ಈ ಪ್ರಶಸ್ತಿ ₹ 25 ಸಾವಿರ ನಗದು ಒಳಗೊಂಡಿದೆ.
1990ರಲ್ಲಿ ಪ್ರಕಟವಾಗಿದ್ದ ಯಾಕುಬ್ ಮಸೀಹ್ ಅವರ ಪ್ರಸಿದ್ಧ ಪುಸ್ತಕವನ್ನು (A comparative study of religions) ಶ್ರೀಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಾರ್ಸಿ ಹಿಂದೂ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳ ತಿರುಳನ್ನು ಶೋಧಿಸಿ ಎಲ್ಲಾ ಧರ್ಮೀಯರು ಸಾಮರಸ್ಯದಿಂದ ಬದುಕಬಹುದೆಂಬ ಉದಾತ್ತ ಸಂದೇಶ ಈ ಪುಸ್ತಕದಲ್ಲಿದೆ.
ಒಟ್ಟು ಹತ್ತು ಜನ ಲೇಖಕರು, ಅನುವಾದಕರನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2023 ಹಾಗೂ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.
2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಪ್ರೊ.ಎಚ್.ಎಸ್. ರಾಘವೇಂದ್ರರಾವ್, ವಿನಯ್ ಚೈತನ್ಯ, ನಟರಾಜ್ ಹುಳಿಯಾರ್, ದು.ಸರಸ್ವತಿ ಮತ್ತು ಎಚ್.ಎಂ. ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
2024ನೇ ಸಾಲಿಗೆ ಆರ್.ಕೆ. ಕುಲಕರ್ಣಿ, ಕರೀಗೌಡ ಬೀಚನಹಳ್ಳಿ, ರಾಜೇಂದ್ರ ಚೆನ್ನಿ, ಬೋಡೆ ರಿಯಾಜ್ ಅಹ್ಮದ್ ಮತ್ತು ಬಸು ಬೇವಿನಗಿಡದ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಭಿನಂನೆ ಗುರುಗಳಿಗೆ
ಶರಣು ಶರಣಾರ್ಥಿ