ಶರಣರ ಶಕ್ತಿ ಇಂದು ಆಯ್ದ ಕೇಂದ್ರಗಳಲ್ಲಿ ‘ಮೊದಲ ಹಂತದ’ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ವಿವಾದಾಸ್ಪದ ‘ಶರಣರ ಶಕ್ತಿ’ ಚಿತ್ರ ಇಂದು ಆಯ್ದ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

ಭಾಲ್ಕಿ, ಹುಬ್ಬಳ್ಳಿ, ದಾವಣಗೆರೆ, ಹಳಿಯಾಳ, ಅಣ್ಣಿಗೇರಿ ಮತ್ತು ಮುಂಡರಗಿಗಳಲ್ಲಿ ಮೊದಲ ಹಂತದ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ದಿಲೀಪ್ ಶರ್ಮಾ ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ಮುಂದಿನ ವಾರ ಬೇರೆ ಪ್ರದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ.

ಅಕ್ಟೋಬರ್ 18 ಬಿಡುಗಡೆಯಾಗಬೇಕಿದ್ದ ಶರಣರ ಶಕ್ತಿ ಚಿತ್ರ ಲಿಂಗಾಯತ ಸಮುದಾಯದ ಪ್ರತಿಭಟನೆಯಿಂದ ಮುಂದೂಡಲ್ಪಟ್ಟಿತ್ತು.

ಜಾಗತಿಕ ಜಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌ಎಂ ಜಾಮದಾರ್ “ಚಿತ್ರದಲ್ಲಿದ್ದ ಹಲವಾರು ಪ್ರಮಾದಗಳನ್ನು ಪಟ್ಟಿ ಮಾಡಿ ನಿರ್ಮಾಪಕರಿಗೆ ಕಳಿಸಿದ್ದೆವು. ಅಗತ್ಯವಾದ ತಿದ್ದುಪಡಿ ಮಾಡಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಚಿತ್ರದ ಎಲ್ಲಾ ಮುದ್ರಣಗಳು ಈ ಬದಲಾವಣೆಗಳನ್ನು ಬಿಂಬಿಸುತ್ತವೆ ಎಂಬ ಯಾವುದೇ ಲಿಖಿತ ದೃಢೀಕರಣವನ್ನು ಚಿತ್ರ ತಂಡದವರು ಕೊಟ್ಟಿಲ್ಲ. ಚಿತ್ರದ ಬಿಡುಗಡೆಗೆ ಷರತ್ತುಬದ್ಧವಾದ ಒಪ್ಪಿಗೆ ಮಾತ್ರ ನೀಡಿದ್ದೇವೆ,” ಎಂದು ಆಂಗ್ಲ ಪತ್ರಿಕೆಗೆ ಹೇಳಿದ್ದಾರೆ.

Share This Article
2 Comments
  • ಒಂದು ಸಂತೋಷದ ವಿಚಾರವೆಂದರೆ ಶರಣ ಶಕ್ತಿ ಚಲನ ಚಿತ್ರದ ನಿರ್ದೇಶಕರು ಬಸವ ಭಕ್ತರ ಮನವಿಗೆ ಒಗೋಟ್ಟು ಚಲನ ಚಿತ್ರದಲ್ಲಿ ಶರಣರ ವಿಚಾರಗಳನ್ನ ನೈಜತೆಗೆ ತರಲು ಆಲೋಚಿಸಿರುವುದು ಬಹಳ ಸಂತೋಷ. ಅವರಿಗೆ ಅನಂತ ಶರಣು ಶರಣಾರ್ಥಿಗಳು.

    ಬಸವವಾಭಿಮಾನಿಗಳು ಹೆಚ್ಚು ಹೆಚ್ಚು ವೀಕ್ಷಣೆ ಮಾಡುವ ಮುಖಾಂತರ ಶರಣರ ಚಿತ್ರಕಥೆಗಳು, ದಾರಾವಾಹಿಗಳು ನಿರ್ಮಾಣ ಮಾಡಲು ನಿರ್ಮಾಪಕ ನಿರ್ದೇಶಕರುಗಳಿಗೆ ಪ್ರೋತ್ಸಾಹ ನೀಡಬೇಕಿದೆ…ಇಲ್ಲ ಅಂದರೆ ಮುಂದೆ ಯಾರು ಶರಣರ ಇತಿಹಾಸವನ್ನ ಮಾದ್ಯಮಗಳ ಮುಖಾಂತರ ತರಲು ಇಚ್ಚಿಸದೆ ಹಿಂದೇಟು ಹಾಕುತ್ತಾರೆ…ಅವರು ಲಾಭದ ದೃಷ್ಟಿಯಿಂದನೇ ಈ ರೀತಿ ಚಲನ ಚಿತ್ರ ದಾರಾವಾಹಿ ಇಂತವನ್ನ ಮಾಡಿದರು ಸಹ ಮಾದ್ಯಮಗಳ ಮುಖಾಂತರ ಬಸವಾದಿಶರಣರ ವಿಚಾರ ತಿಳಿಸುವುದು ಜನರ ಮನಸ್ಸಿನಲ್ಲಿ ಬಹಳ ಪ್ರಭಾವ ಬೀರುತ್ತದೆ..

Leave a Reply

Your email address will not be published. Required fields are marked *