ರಾಯಚೂರು
ಇಲ್ಲಿನ ಬಸವ ಕೇಂದ್ರದಲ್ಲಿ ಈಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕರಾಗಿ ಆಗಮಿಸಿದ ಶಿವರಾಜ ಪಾಟೀಲ ಗುರ್ಜಾಲ ಇವರು ಬಸವ ಕೇಂದ್ರದಲ್ಲಿ ಇಂಥ ವಚನ ಗಾಯನ, ನೃತ್ಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಸವತತ್ವ ಬೆಳೆಸುತ್ತಿರುವದು ಹೆಮ್ಮೆಯ ವಿಷಯವೆಂದರು.

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ವಿಶ್ವನಾಥ ಹೂಗಾರ ಅವರು ಪುಟ್ಟರಾಜ ಕವಿ, ಗವಾಯಿಗಳ ಸಂಗೀತ ಸಾಧನೆ ಕುರಿತು ಹೇಳಿ, ಬಸವ ಕೇಂದ್ರದ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ಹಮ್ಮಿಕೊಂಡ ಬಗ್ಗೆ ಶ್ಲಾಘಿಸಿದರು.
ಇನ್ನೋರ್ವ ಅತಿಥಿ ಜಯಶ್ರೀ ಮಹಾಜನಶೆಟ್ಟಿಯವರು ಸಂಗೀತದ ಮಹತ್ವ ಕುರಿತು ಮಾತನಾಡುತ್ತಾ, ಶರಣ ತತ್ವಕ್ಕೆ ಸಂಗೀತವೇ ಪ್ರೇರಕವೆಂದರು.
ವೇದಿಕೆ ಮೇಲೆ ಅತಿಥಿಗಳಾಗಿ ವೆಂಕಣ್ಣ ಆಶಾಪುರ, ಸರೋಜಾ ರೆಡ್ಡಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸರೋಜಮ್ಮ ಮಾಲಿಪಾಟೀಲ ವಹಿಸಿದ್ದರು.
ಅಶ್ವಿನಿ ಮಾಟೂರ, ಪಾರ್ವತಿ ಪಾಟೀಲ, ಡಾ. ಪ್ರಿಯಾಂಕಾ ಗದ್ವಾಲ, ಪೂರ್ಣಿಮಾ ಅವರುಗಳು ಹಾಗೂ ನಾದಲೋಕ ಕಲಾಬಳಗದ ಮಕ್ಕಳು ವಚನಗಾಯನ ನಡೆಸಿಕೊಟ್ಟರು. ಸಿಗ್ನೇಚೆರ್ ಡ್ಯಾನ್ಸ್ ಸ್ಕೂಲ್ ವಿದ್ಯಾರ್ಥಿಗಳು ವಚನ ನೃತ್ಯ ಗೈದರು.

ಸ್ವಾಗತ, ನಿರೂಪಣೆಯನ್ನು ಚನ್ನಬಸವಣ್ಣ ಮಹಾಜನಶೆಟ್ಟಿ ಮಾಡಿದರು. ರಾಘವೇಂದ್ರ ಆಶಾಪುರ ಪ್ರಾಸ್ತಾವಿಕೆ ನುಡಿಗಳನ್ನಾಡಿದರು. ಮಲ್ಲಿಕಾರ್ಜುನಸ್ವಾಮಿ ಕಾರ್ಯಕ್ರಮ ಚಿತ್ರಿಕರಿಸಿದರು. ವೀರೇಂದ್ರ ಕುರುಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ನಾಗೇಶಪ್ಪ, ಮಲ್ಲಿರ್ಜುನ ಗುಡಿಮನಿ, ನಾಗರಾಜ್ ಪಾಟೀಲ, ಎ. ವೀರಭದ್ರಪ್ಪ, ರಾಜೇಶ್ವರಿ ಅಲ್ಕೋಡ್ ಮತ್ತಿತರರು ಉಪಸ್ಥಿತರಿದ್ದರು.

