ಬೆಂಗಳೂರು
ಬೀದರದಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಭೂಕಬಳಿಕೆ ವಿರುದ್ಧದ ಸಭೆಯಲ್ಲಿ, ಗುರು ಬಸವಣ್ಣನವರ ಬಗ್ಗೆ ಅವಮಾನಕರವಾಗಿ ಆಡಿರುವ ಮಾತನ್ನು ವಾಪಸ್ಸು ಪಡೆದುಕೊಂಡು, ಬಸವಭಕ್ತರಲ್ಲಿ ಕೂಡಲೇ ಕ್ಷಮೆ ಕೇಳಬೇಕೆಂದು ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಸಮನ್ವಯ ಸಮಿತಿ ಸಂಘಟನೆಗಳು ಜಂಟಿಯಾಗಿ ಆಗ್ರಹಿಸಿವೆ.
ಈ ಬಗ್ಗೆ ಚೆನ್ನಬಸವಾನಂದ ಸ್ವಾಮೀಜಿ ವಿಡಿಯೋ ಹೇಳಿಕೆಯಲ್ಲಿ ಮಾತನಾಡುತ್ತಾ, ಬಸನಗೌಡ ಪಾಟೀಲ ಅವರಿಗೆ ವಚನಗಳ ಅಧ್ಯಯನ ಇಲ್ಲ. ಯಾಕೆಂದರೆ ಅವರು ಯಾವಾಗಲೂ ಹಿಂದೂ ಹಿಂದೂ ಹಿಂದೂ ಎಂದು ತಿರಗಾಡುವಂತಹ ವೈದಿಕರ ಪಾರ್ಟಿಯಲ್ಲಿರುವುದರಿಂದ, ಅವರಿಗೆ ವಚನ ಸಾಹಿತ್ಯದ ಅಧ್ಯಯನವಿಲ್ಲ, ಲಿಂಗಾಯತ ಧರ್ಮದ ಮಾಹಿತಿ ಇಲ್ಲ. ಅದಕ್ಕಾಗಿ ಗುರು ಬಸವಣ್ಣನವರಿಗೆ ಈ ಒಂದು ಅವಮಾನಕಾರಿಯಾದಂತಹ ಮಾತುಗಳನ್ನು ಅವರು ಆಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಅವರು ಗುರು ಬಸವಣ್ಣನವರಲ್ಲಿ ಹಾಗೂ ಬಸವ ಭಕ್ತರಲ್ಲಿ ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೊಂದು, ನೀವೆಲ್ಲ ಮುಸ್ಲಿಮರಾಗಬೇಕಾಗುತ್ತದೆ ಎಂದು ಸನ್ಹೆ ತೋರಿಸುತ್ತಾ ಏನು ಯತ್ನಾಳ ಅವರು ಹೇಳಿದ್ದಾರಲ್ಲ, ಅದು ಕೂಡ ಖಂಡನಾರ್ಹವಾದುದು. ಯಾಕೆಂದರೆ ಇವತ್ತು ವಕ್ಫ್ ಬೋರ್ಡ್ ಭೂಮಿ ಕಬಳಿಕೆ ಮಾಡ್ತಾ ಇರುವುದು, ಅದರ ವಿರುದ್ಧ ಹೋರಾಟ ಮಾಡುವ ವಿಷಯ ಬೇರೆ. ಆದರೆ ಅದರ ಭರದಲ್ಲಿ ಗುರು ಬಸವಣ್ಣನವರಿಗೆ ಅಪಮಾನವಾಗುವತಂಹ ಮಾತುಗಳನ್ನು ಆಡಿರುವುದು ಖಂಡನೀಯ.
ಬಸವಣ್ಣನವರು ಹೊಳೆಗೆ ಹಾರಲಿಲ್ಲ, ಅವರು ಹೇಡಿಗಳಾಗಿರಲಿಲ್ಲ. ಅವರು ಸಾವಿಗೆ ಹೆದರುತ್ತಿರಲಿಲ್ಲ. ಏಕೆಂದರೆ ಮರಣವೇ ಮಹಾನವಮಿ ಎಂದು ಹೇಳಿರತಕ್ಕಂತಹ ಮಹಾಗುರು ಅವರು.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು. ಇದಕಾರಳುಕುವರು-
‘ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ.
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ.
ಎಂದು ಹೇಳಿದಂತ ಬಸವಣ್ಣನವರು ಸಾವಿಗೆ ಹೆದರದೆ ಇರತಕ್ಕಂತಹ ಮಹಾಧೀರರು, ಗಣಾಚಾರಿಗಳು ಬಸವಾದಿ ಶರಣರು. ಗುರು ಬಸವಣ್ಣನವರು ಇಷ್ಟಲಿಂಗ ಕೈಯಲ್ಲಿ ಹಿಡಿದುಕೊಂಡು ತಮ್ಮ ಕಲ್ಲಿನ ಗವಿಯಲ್ಲಿ ಕೂಡಲಸಂಗಮದಲ್ಲಿ ಲಿಂಗೈಕ್ಯರಾಗುವವರೆಗೂ ವಚನಗಳನ್ನು ಬರೆದಿದ್ದಾರೆ.

ಆ ಎಲ್ಲ ವಚನಗಳು ಎಲ್ಲರಿಗೂ ಗೊತ್ತಿವೆ. ಕೊನೆಯವರೆಗೂ ಬಸವಣ್ಣನವರು ರನ್ನಿಂಗ್ ಕಾಮೆಂಟರಿ ತರಹ, ತಾವೇ ಲಿಂಗೈಕ್ಯ ಆಗುವವರೆಗೂ ವಚನಗಳನ್ನು ಬರೆದಿದ್ದಾರೆ. ಈ ವಚನಗಳನ್ನು ಬಸನಗೌಡರಂತವರು ಓದಿ ಅರಿಯಬೇಕಾಗಿದೆ ಎಂದು ಬೆಂಗಳೂರು ಶ್ರೀ ಚೆನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರು ಆಗಿರುವ ಚೆನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬುದ್ಧಿ ಕಲಿಸಲು ಇರುವುದು ಒಂದೇ ಮಾರ್ಗ. ಎಲ್ಲಾ ಲಿಂಗಾಯತರು ಅವರಿಗೆ ಮತ ಕೊಡುವುದು ಬೇಡ ಅನ್ನುವ ಅರಿವನ್ನು ಲಿಂಗಾಯತರಲ್ಲಿ ಮೂಡಿಸಿ. ಅಷ್ಟು ಸಾಕು. ಇಲ್ಲವಾದಲ್ಲಿ ಈಗಾಗಲೇ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷದ ಕಪಿ ಮುಷ್ಠಿಯಲ್ಲಿರುವ ಲಿಂಗಾಯತರನ್ನು ಯಾರಿಂದಲೂ ಕಾಪಾಡಲು ಬರುವುದಿಲ್ಲ. ಲಿಂಗಾಯತ ಧರ್ಮವು ಹೇಳ ಹೆಸರಿಲ್ಲದಂತೆ ದಿನಗಳು ದೂರವಿಲ್ಲ.
ಅವರು ಏನು ಮಾತನಾಡುತ್ತಿರುವವರು ಅವರಿಗೆ ಗೊತ್ತಿಲ್ಲ. ಅಂಥವರ ಬೆನ್ನನ್ನ ನಿಂತ ಗುರುಬಸವ ಭಕ್ತರು ಲಿಂಗಾಯಿತ ಧರ್ಮ ಪ್ರೇಮಿಗಳು ಲಿಂಗಾಯತ ನಿಷ್ಠರು ಅವರಿಗೆ ವೋಟು ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ? ಅವರಿಂದ ಯಾವ ಸಮಾಜವು ಉದ್ದಾರ ಆಗಿಲ್ಲ. ಕೇವಲ ಅವರ ಬ್ಯಾಂಕುಗಳು ಉದ್ದಾರ ಆಗಿವೆ. ಅವರ ಶಾಲೆಗಳು ಉದ್ದಾರ ಆಗಿವೆ ಹೊರತು ಸಮಾಜದ ಕೆಲಸವನ್ನು ಏನು ಮಾಡಿದ್ದಾರೆ? ಇದನ್ನು ಸರಿಯಾಗಿ ಗ್ರಹಿಸಿ ಕೇವಲ ಜಾತಿ ಮತ್ತು ಧರ್ಮಗಳನ್ನು ಒಡೆದು ಆಳುವಂತ ಇವರಿಗೆ ಲಿಂಗಾಯತರು ಸರಿಯಾದ ಪಾಠವನ್ನು ಕಲಿಸಬೇಕಂತ ಸಂದರ್ಭ ಇದು!!! ಎಲ್ಲ ಮಠಾಧೀಶರು ಕೂಡ ಅವರ ಹೇಳಿಕೆಗೆ ವಿರೋಧಿಸಬೇಕು . ಈ ಸಂದರ್ಭದಲ್ಲಿ ಅವರನ್ನು ಚೆನ್ನಾಗಿ ಸರಿದಾರಿಗೆ ತರುವುದಂತೂ ಕಷ್ಟ ಬುದ್ದಿ ಕಲಿಸಲು ಸಾಧ್ಯ…!
ಬಸವಣ್ಣನವರು ಜನಿಸಿದ ವಿಜಯಪುರದ ನಾಡಿನ ಲಿಂಗಾಯತ ಬಂಧುಗಳು ತಾವು ಲಿಂಗಾತರಾಗಿರುವುದು ಗುರು ಬಸವಣ್ಣನವರಿಂದ ಎನ್ನುವ ಅರಿವು ಇಲ್ಲದೆ. ಬಸನಗೌಡ ಪಾಟೀಲರಂಥ ವೈದಿಕ ಸಂಪ್ರದಾಯವಾದಿಗಳನ್ನು ಮತ ಕೊಟ್ಟು ಬೆಳಸುವದರಿಂದ ಈ ಮನುಷ್ಯ ಬಾಯಿಗೆ ಬಂದಂತೆ ಮಾತನಾಡಲು ಕಾರಣವಾಗಿದೆ.
ಅಲ್ಲಿಯ ಲಿಂಗಾಯತ ಬಂಧುಗಳು ವಿಶ್ವದಲ್ಲಿಯೇ ಯಾವ ದಾಶ೯ನಿಕನಿಗೂ ಸಿಗದ ವಿಶ್ವಗುರು ಪದವಿ ಇಲ್ಲಿಯೇ ಜನಿಸಿದ ಗುರುಬಸವಣ್ಣನವರಿಗೆ ಸಿಕ್ಕಿದೆ ಎನ್ನುವ ಅಭಿಮಾನ ಶೂನ್ಯರಾಗಿವದೇ?
ಲಿಂಗಾಯತ ಧಮ೯ದ ದುರಂತ ಅಣ್ಣಂದಿರೆ.
ಆದರೂ ಬಸನಗೌಡ ಪಾಟೀಲ ಕ್ಷಮೆ ಕೇಳುವವರೆಗೂ ನಮ್ಮ ದ್ವನಿಯನ್ನು ನಿಲ್ಲಿಸಬಾರದು.