ಪುಣೆ
ನಗರದಲ್ಲಿ ರವಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕರಿಸಲಾದ ಪ್ರಮುಖ ನಿರ್ಣಯಗಳು:
- ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಸ್ಥರಗಳ ಘಟಕಗಳಿಗೆ ಚುನಾವಣೆ ನಡೆಸುವ ನಿಯಮಾವಳಿಗಳನ್ನು ರೂಪಿಸಲೆಂದು ಸಮಿತಿ ರಚಿಸಲಾಗಿತ್ತು. ಆ ಸಮಿತಿ ನಿಯಮಾವಳಿ ರಚಿಸಿ ಕೇಂದ್ರ ಸಮಿತಿಗೆ ಸಲ್ಲಿಸಿತು, ಆ ವರದಿಯನ್ನು ಕಾರ್ಯಕಾರಿಣಿ ಸಭೆಯಲ್ಲಿ ಮಂಡಿಸಿ ಸುಧೀರ್ಘವಾಗಿ ಚರ್ಚಿಸಿ ಅನುಮೋದನೆ ನೀಡಲಾಯಿತು.
- ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಪಡೆಯಲು ದೇಶಾದ್ಯಂತ ಇರುವ ಎಲ್ಲ ಲಿಂಗಾಯತರಿಗೆ ಅನ್ವಯವಾಗುವಂಥ ಮುಂದಿನ ಕ್ರಮ ಕೈಗೊಳ್ಳುವದು.
- ವಚನ ದರ್ಶನದಂತಹ ಅಪಪ್ರಚಾರದ ಕೃತಿಗಳ ವಿರುದ್ಧ, ಶರಣರ ವಚನಗಳ ನಿಜ ಭಾವಾರ್ಥ ತಿಳಿಸುವ ಕೃತಿಗಳನ್ನು ಪ್ರಕಟಿಸುವುದು, ಪ್ರಸಾರ-ಪ್ರಚಾರ ಮಾಡುವುದು.
- ಜಾಗತಿಕ ಲಿಂಗಾಯತ ಮಹಾಸಭಾ ಆನ್ಲೈನ್ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸುವುದು.
- ಲಿಂಗಾಯತ ವಧು-ವರರ ಮಾಹಿತಿ ಕೇಂದ್ರವನ್ನು ಪ್ರಾರಂಭಿಸುವ ಕ್ರಮ.
- ಸಂಘಟನೆಗೆ ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವುದು, ಸಂಘಟನಾತ್ಮಕವಾಗಿ ಬಲಪಡಿಸುವುದು.
- ಮಹಾಸಭಾದ ಐದು ವರ್ಷಗಳ ಸಾಧನೆಯ ಕಿರುಹೊತ್ತಿಗೆ ಪ್ರಕಟಿಸುವುದು.
ರಾಷ್ಟ್ರೀಯ ಉಪಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಕೆಂಪಗೌಡ ಅವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಗಳನ್ನು ಮಂಡಿಸಲಾಯಿತು. ಸರ್ವರು ಚಪ್ಪಾಳೆ ತಟ್ಟಿ ಈ ನಿರ್ಣಯಗಳಿಗೆ ಅನುಮೋದನೆ ನೀಡಿದರು. ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹಾಗೂ ರಾಷ್ಟ್ರ, ರಾಜ್ಯ ಪದಾಧಿಕಾರಿಗಳು, ಮಹಾಪೋಷಕರು, ಪೋಷಕರು, ದಾಸೋಹಿಗಳು, ಅಹ್ವಾನಿತರು ಮತ್ತಿತರರು ಹಾಜರಿದ್ದರು.
ಒಳ್ಳೆಯ ಬೆಳವಣಿಗೆ. ದೇಶದ ಹಲವು ರಾಜ್ಯದಲ್ಲಿ ಲಿಂಗಾಯತ ತತ್ವಸಿದ್ದಾಂತಗಳನ್ನ ಹಂಚಿದ್ರೆ ಜನರಿಗೆ ಬೇಗ ತಲುಪಿ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುತ್ತೆ
👏🙏
👏🏻🙏
🙏🙏
🙏🙏ಶರಣು ಶರಣಾಥಿ೯ಗಳು.
ಜಾಗತಿಕ ಲಿಂಗಾಯತ ಮಹಾಸಭಾ ಕ್ಕೆ ಅಭಿನಂದನೆಗಳು 💐🙏
ಜಿಲ್ಲಾ ಮಟ್ಟ, ತಾಲೂಕು ಮಟ್ಟ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಿ ಮಹಾಸಭಾ ಕೆಲಸ ಮಾಡಬೇಕೆಂದು ವಿನಂತಿ.