ಸಮಾಜಕ್ಕೆ ಅಂಟಿರುವ ಯತ್ನಾಳರಂತಹ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆಯೇ ಮದ್ದು

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ಬಸವಧರ್ಮದವರು ಎಲ್ಲವನ್ನೂ ಸಹಿಸಿಕೊಂಡು ಸಮಾಧಾನಿಗಳಾಗಿರುತ್ತಾರೆ ಎಂದು ಭ್ರಮೆಯಲ್ಲಿ ಇರುವವರಿಗೆ ಎಚ್ಚರ. ತತ್ವಕ್ಕೆ ಚ್ಯುತಿ ಬಂದಾಗ ವೀರ ಗಣಾಚಾರಿ ಮಡಿವಾಳ ಮಾಚಿದೇವರಂತೆ ಹೋರಾಡಲೂ ಸಿದ್ಧರಿರುತ್ತೇವೆ.

ನಾಗನೂರು

ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಿಂದ ಹಿಡಿದು ೨೧ನೇ ಶತಮಾನದವರೆಗೆ ಜೀವಿಸಿದ್ದರ ಮೇಲೆಯೇ ತಿಳಿದು ಬರುತ್ತದೆ ಅವರು ಹೊಳೆ ಹಾರಿದ್ರಾ ಇಲ್ಲವಾ ಎಂದು. ಅಂದು ಅವರು ಹೊಳೆ ಹಾರಿದ್ರೆ ಇಂದು ನಿಮ್ಮ ಹೆಸರು ಬಸನಗೌಡ ಅಂತಾ ಇರ್ತಾ ಇರ್ಲಿಲ್ಲ.

ಧರ್ಮಗುರು ಬಸವಣ್ಣನವರ ನಾಡಲ್ಲಿ ಹುಟ್ಟಿ ಅವರ ಲಿಂಗೈಕ್ಯದ ಬಗ್ಗೆ ಹಗುರವಾಗಿ ಮಾತನಾಡುವುದು ಭಂಡತನವೇ ಸರಿ. ಸಮಾಜದಲ್ಲಿದ್ದ ಅನಿಷ್ಟ ಆಚರಣೆಗಳಾದ ಮೂಢನಂಬಿಕೆ, ಕಂದಾಚಾರದ ಅಲೆಗಳ ವಿರುದ್ಧ ಮೂಲನಂಬಿಕೆಯ ತತ್ವ ಹಿಡಿದು ಈಜಿದ ಜಗಜ್ಯೋತಿ ಬಸವಣ್ಣನವರೆಲ್ಲಿ? ರಾಜಕೀಯ ಲಾಭಕ್ಕಾಗಿ ಲಿಂಗಾಯತರಾಗಿದ್ದರೂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ನೀವೆಲ್ಲಿ?

ಹೆಣ್ಣಿಗೆ ಮನೆಯಿಂದ ಹೊರಗಡೆ ಬರಲು ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಆಕೆಯನ್ನು ವೀರ ವೈರಾಗ್ಯನಿಧಿಯನ್ನಾಗಿಸಿದವರು, ಅಸ್ಪೃಶ್ಯರೊಂದಿಗೆ ಕ್ರೂರ ಮೃಗಗಳಂತೆ ವರ್ತಿಸುತ್ತಿದ್ದ ಅವಧಿಯಲ್ಲಿ ಅವರೇ ತನ್ನ ಅಪ್ಪ-ಬೊಪ್ಪ ಎಂದು ಕೊಂಡಾಡಿದವರು, ಪತೀತರನ್ನು ಪಾವನರನ್ನಾಗಿಸಿದವರು, ಕಳ್ಳನಲ್ಲಿ ಸಂಗಮನಾಥನನ್ನು ಕಂಡವರು, ದೇವರನ್ನೇ ಚುಳುಕಾಗಿಸಿ ಅಂಗೈಗೆ ತಂದವರು, ಎಲ್ಲದಕ್ಕಿಂತ ಹೆಚ್ಚಾಗಿ ಅಂತರ್ಜಾತಿಯ ವಿವಾಹ ನಡೆಸಿ ಜಗತ್ತು ಕಂಡು ಕೇಳರಿಯದ ಕ್ರಾಂತಿಗೆ ನಾಂದಿ ಹಾಡಿದವರು.

ಈ ಎಲ್ಲಾ ಸಂದರ್ಭಗಳಲ್ಲಿ ಇರದ ಹೇಡಿತನ ಅವರು ಸಂಗಮನಾಥನಲ್ಲಿ ಲೀನವಾಗುವಾಗ ತೋರಿದರೇ? ಇದಕ್ಕೆ ನಗಬೇಕೋ? ಅಳಬೇಕೋ? ತಿಳಿಯದು.

ಬಹುಶಃ ಅವರು ಹೊಳೆಗೆ ಹಾರಿದ್ದರೆ ಇವತ್ತು ನೀವು ಯಾವ ಸಂವಿಧಾನದ ಅಡಿಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದೀರೋ ಆ ಸಂವಿಧಾನಕ್ಕೆ ಸುಭದ್ರ ಬುನಾದಿಯೆಂಬುದೇ ಇರುತ್ತಿರಲಿಲ್ಲಾ. ದೇಶದ ಪ್ರಸ್ತುತ ಪ್ರಧಾನಿಗಳೇ ಧರ್ಮಗುರು ಬಸವಣ್ಣನವರನ್ನು ಹಲವಾರು ಬಾರಿ ಸಂವಿಧಾನದ ಪಿತಾಮಹ ಎಂದು ಉಲ್ಲೇಖಿಸಿದ್ದು ತಾವು ಗಮನಿಸಿದಂತೆ ಕಾಣದು. ಕೇವಲ ಆಧ್ಯಾತ್ಮ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿ ಹೋದವರು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು.

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

ಈ ಎಲ್ಲಾ ಅಂಶಗಳನ್ನು ಹೊಂದಿ ಅಪ್ರತಿಮ ಶಕ್ತಿಯಾದ ಅಪ್ಪ ಬಸವಣ್ಣನವರು, ಇಂಗ್ಲೆಂಡಿನ ಥೇಮ್ಸ್ ನದಿಯ ದಂಡೆಯಲ್ಲಿ ಪ್ರತಿಮೆಯಾಗಿ ಬೆಳಗುತ್ತಿರುವದಕ್ಕಿಂತ ಸಾಕ್ಷಿ ಬೇಕಿಲ್ಲ ಯತ್ನಾಳರ ಮಾತಿನಲ್ಲಿ ಹುರುಳಿಲ್ಲಾ ಎಂದು ಸಾಬೀತು ಪಡಿಸಲು.

ಬಸವಧರ್ಮದವರು ಎಲ್ಲವನ್ನೂ ಸಹಿಸಿಕೊಂಡು ಸಮಾಧಾನಿಗಳಾಗಿರುತ್ತಾರೆ ಎಂದು ಭ್ರಮೆಯಲ್ಲಿ ಮಾತನಾಡುವ ಎಲ್ಲರಿಗೂ ಈ ಮೂಲಕ ಎಚ್ಚರಿಸುವುದೇನೆಂದರೆ, ತತ್ವಕ್ಕೆ ಚ್ಯುತಿ ಬಂದಾಗ ವೀರ ಗಣಾಚಾರಿ ಮಡಿವಾಳ ಮಾಚಿದೇವರಂತೆ ಹೋರಾಡಲೂ ಸಿದ್ಧರಿರುತ್ತೇವೆ. ಯತ್ನಾಳ ಅಂತವರೆಲ್ಲ ಸಮಾಜಕ್ಕೆ ಅಂಟಿದ ಕ್ಯಾನ್ಸರ್ ಇದ್ದಂತೆ ಇದಕ್ಕೆ ಶಸ್ತ್ರಚಿಕಿತ್ಸೆಯೇ ಮದ್ದು.

Share This Article
4 Comments
  • ನಿಜಕ್ಕೂ ಅಣ್ಣ ಬಸವಣ್ಣ ಹೊಳೆ ಹಾರಿಲ್ಲ ಎಂದು ಈಗ ಮತ್ತೊಮ್ಮೆ ಗೊತ್ತಾಗುತ್ತಿದೆ ಕಾರಣ ಏನೆಂದರೆ ಒಬ್ಬ ಹೆಣ್ಣು ಮಗಳು ಒಬ್ಬ ಶಾಸಕನ ವಿರುದ್ಧ ದ್ವನಿ ಎತ್ತುವಂತೆ ಶಕ್ತಿ ತುಂಬಿದ್ದರಲ್ಲ ಇದೇ ಬಸವಣ್ಣ ಧ್ವನಿ. ಸಹೋದರಿ ನಿವೇದಿತಾ ನೀವು ಹೇಳಿರುವುದು ತುಂಬಾ ಅರ್ಥಗರ್ಭಿತ ನಿಮಗೆ ಶರಣು ಶರಣಾರ್ಥಿ

  • ಸರಿಯಾಗಿಯೇ ಹೇಳಿದ್ದೀರಾ ಅಕ್ಕ..ಈ ಮೂಢನಿಗೆ ಬಸವಣ್ಣನವರ ಬಗ್ಗೆ ಬಸವಾದಿಪ್ರಮಥರ ಬಗ್ಗೆ ತಿಳಿದುಕೊಳ್ಳುವಷ್ಟು ವ್ಯವಧಾನವಿಲ್ಲದಿರುವುದು ಇವನ ಅವಿವೇಕವನ್ನ ತೋರುತ್ತದೆ. ಬಿಜೆಪಿಯು ಇವನ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ಷಮೆ ಕೇಳಿಸದಿದ್ದರೆ ಬಿಜೆಪಿಗೆ ಹಾಗು ಇವನಿಗೆ ಉಳಿಗಾಲವಿಲ್ಲ

  • ಯತ್ನಾಳ್ ಯಂಬ ಮನೂವಾದಿಯ ಗುಲಾಮನನ್ನು ಲಿಂಗಾಯತ ಎನ್ನದಿರಿ ,ಆತನಿಗೆ ರಾಜಕೀಯ ಅಂತ್ಯಕಾಲ ಸನ್ನಿಹಿತವಾಗಿದೆ.

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು