ಮೈಸೂರಿನಲ್ಲಿ ಒಂದು ದಿನದ ಶಿವಯೋಗ, ನಿಜಾಚರಣೆ ಅನುಷ್ಠಾನ ಶಿಬಿರ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಮೈಸೂರು

ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿಗಳು ಸರಸ್ವತಿಪುರಂ ಬಡಾವಣೆಯಲ್ಲಿ ಬಗ್ಗೆ ಮಂಗಳವಾರ ನಿಜಾಚರಣೆ ಶಿಬಿರ ನಡೆಸಿಕೊಟ್ಟರು.

ಭಾಗವಹಿಸಿದ್ದ ಒಟ್ಟು 22 ಶಿಬಿರಾರ್ಥಿಗಳಿಗೆ ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಧರ್ಮ ಮತ್ತು ಸಿದ್ದಾಂತವನ್ನು ಮೂರು ಭಾಗಗಳಲ್ಲಿ ಪರಿಚಯ ಮಾಡಿಕೊಟ್ಟರು.

ಭಾಗ 1 ರಲ್ಲಿ ಶಿವಯೋಗ ಅನುಷ್ಠಾನ ಮಾಡುವುದು ಹೇಗೆ, ಇಷ್ಟಲಿಂಗವನ್ನು ಯಾವ ಪದಾರ್ಥಗಳಿಂದ ಮಾಡಿದೆ, ವಿಭೂತಿ ಮಹತ್ವವೇನು ಧರಿಸುವಾಗ ಹೇಳಬೇಕಾದ ವಚನ ಭೋದಿಸಿದರು.

ಅಯ್ಯಾ ಎನಗೆ ವಿಭೂತಿಯೇ ಕುಲದೈವ
ಅಯ್ಯಾ ಎನಗೆ ವಿಭೂತಿಯೇ ಮನದೈವ
ಅಯ್ಯಾ ಎನಗೆ ವಿಭೂತಿಯೇ ಸರ್ವಕಾರಣ
ಅಯ್ಯಾ ಎನಗೆ ವಿಭೂತಿಯೇ ಸರ್ವಸಿದ್ಧಿ
ಅಯ್ಯಾ ಎನಗೆ ವಿಭೂತಿಯೇ ಸರ್ವವಶ್ಯ ಅಯ್ಯಾ ಕೂಡಲ ಚನ್ನಸಂಗಮದೇವಾ ಶ್ರೀ ವಿಭೂತಿಯೆಂಬ ಮಹಾಪರಂಜ್ಯೋತಿ ನೀವಾದಿರಾಗಿ, ಎನಗೆ ಶ್ರೀ ವಿಭೂತಿಯೇ ಸರ್ವಸಾಧನವಯ್ಯ.

ರುದ್ರಾಕ್ಷಿ ಮಹತ್ವವನ್ನು ತಿಳಿಸುತ್ತಾ, ಈ ಕೆಳಗಿನ ವಚನ ದೊಂದಿಗೆ ರುದ್ರಾಕ್ಷಿ ಧರಿಸಬೇಕು ಎಂದು ಹೇಳಿದರು:
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ ಎಂದು ಹೇಳಿದರು.

ಇಷ್ಟಲಿಂಗವನ್ನು ಹೇಗೆ ನಿರೀಕ್ಷಣೆ ಮಾಡಬೇಕು, ಶಿವಯೋಗದ ವೈಜ್ಞಾನಿಕತೆ, ಪರಿಣಾಮ ಮತ್ತು ಇಷ್ಟಲಿಂಗ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕೆಂದು ತಿಳಿಸಿದರು.

ಭಾಗ 2 ರಲ್ಲಿ ಲಿಂಗಾಯತ ಸಿದ್ದಾಂತ ವಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಳದ ಬಗ್ಗೆ ತಿಳಿಸಿಕೊಟ್ಟರು .

ಭಾಗ 3 ರಲ್ಲಿ ಲಿಂಗಾಯತ ಧರ್ಮದ ಬಗ್ಗೆ ತಿಳಿಸಿಕೊಟ್ಟರು. ಲಿಂಗಾಯತ ಧರ್ಮವನ್ನು ಬಸವಣ್ಣನವರು ಏಕೆ ಕೊಟ್ಟರು ಮತ್ತು ಅದರ ಉದ್ದೇಶವೇನು ಎಂದು ತಿಳಿಸಿ, ಲಿಂಗಾಯತ ಸಮುದಾಯ ಶರಣ ಸಂಸ್ಕೃತಿಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗ ಬೇಕೆಂದು ತಿಳಿಸಿದರು .

ಬಸವಣ್ಣನವರು ಕೊಟ್ಟದ್ದು ಅರಿವಿನ ಧರ್ಮ

ಅರಿದೊಡೆ ಶರಣ, ಮರೆದೊಡೆ ಮಾನವ
ಅರಿವು ಉಳ್ಳವನೇ ಗುರು,
ಆಚಾರವುಳ್ಳವನೇ ಲಿಂಗ ಹಾಗೂ ಅನುಭಾವವುಳ್ಳವನೇ ಜಂಗಮ
ಎಂದು ಧರ್ಮ ಲಕ್ಷಣಗಳ ಬಗ್ಗೆ ತಿಳಿಸಿದರು.

ಪ್ರತಿಯೊಬ್ಬ ಲಿಂಗಾಯತ ತನ್ನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆ ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸ ಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಸಾದದ ನಂತರ ಮಧ್ಯಾಹ್ನ ಸುಮಾರು ಒಂದು ಗಂಟೆಗಳ ಕಾಲ ಶಿವಯೋಗ ಮತ್ತು ನಿಜಾಚರಣೆ ಅನುಷ್ಠಾನ ಸಮಿತಿಯ ಉದ್ದೇಶದ ಬಗ್ಗೆ ಸಂವಾದ ನಡೆಯಿತು .

ಲಿಂಗವಂತರು ಲಿಂಗಾಯತರಾಗಿ ಧರ್ಮದ ರೀತಿ ನೀತಿಗಳನ್ನು ಅರಿತು, ಅನುಷ್ಠಾನ ಗೊಳಿಸಿಕೊಂಡು ಆಚರಣೆಗೆ ತಂದು ಸರಿಯಾಗಿ ನಡೆಯಬೇಕು ಮತ್ತು ನಡಿಯೋಣ ಎನ್ನುವ ಮಾತುಗಳನ್ನು ತಿಳಿಸಿದರು.

ಈ ಶಿವಯೋಗ ಮತ್ತು ನಿಜಾಚರಣೆ ಅನುಷ್ಠಾನ ಕಾರ್ಯಕ್ರಮದಿಂದ ಉಪಯುಕ್ತವಾದ ಮಾಹಿತಿ ಲಭ್ಯವಾಯಿತೆಂದು ಶಿಬಿರಾರ್ಥಿಗಳು ಹೇಳಿದರು.

Share This Article
1 Comment

Leave a Reply

Your email address will not be published. Required fields are marked *