ಬೆಂಗಳೂರು
ಜಗಜ್ಯೋತಿ ಬಸವಣ್ಣನವರ ಮೇಲೆ ಶಾಸಕ ಬಸವನ ಗೌಡ ಯತ್ನಾಳ್ ನೀಡಿರುವ ಅವಮಾನಕರ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ ಬಿಜೆಪಿ ಖಂಡಿಸುವ ಗೋಜಿಗೆ ಹೋಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರಾಗಲಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲಿ ಅಥವಾ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಲಿ, ಯಾರೊಬ್ಬರೂ ಯತ್ನಾಳ್ ಅವರ ಅವಮಾನಕರ ಹೇಳಿಕೆಯನ್ನು ಖಂಡಿಸದಿರುವುದೇಕೆ? ಎಂದು ತಮ್ಮ X ಖಾತೆಯಲ್ಲಿ ಕೇಳಿದ್ದಾರೆ.
ಬಸವಣ್ಣನವರ ತತ್ವ ಸಿದ್ಧಾಂತದೊಂದಿಗೆ ಗುರುತಿಸಿಕೊಂಡರೆ ಮನುಸ್ಮೃತಿಯಲ್ಲಿ ನಂಬಿಕೆ ಇರುವ ಆರ್‌ಎಸ್‌ಎಸ್‌ಗೆ ಸಿಟ್ಟು ಬರಬಹುದು ಎನ್ನುವ ಭಯವೇ? ಅಥವಾ ಗುರು ಬಸವಣ್ಣನವರಿಗಾದ ಅವಮಾನಕ್ಕಿಂತ ಯತ್ನಾಳ್ ಅವರ ಮೇಲಿನ ಭಯವು ಬಿಜೆಪಿಯವರನ್ನು ಹೆಚ್ಚು ಕಾಡುತ್ತಿದೆಯೇ?
ಬಿಜೆಪಿಗರ ಈ ಮೌನವು, ಬಸವಣ್ಣನವರ ಬಗೆಗಿನ ತಿರಸ್ಕಾರವೇ ಅಥವಾ ಯತ್ನಾಳ್ ಅವರ ಮೇಲಿನ ಭಯವೇ? ಎಂದು ಪ್ರಶ್ನಿಸಿದ್ದಾರೆ.
. @BJP4Karnataka ಪಕ್ಷದ ಅಧ್ಯಕ್ಷರಾಗಲಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲಿ ಅಥವಾ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಲಿ, ಯಾರೊಬ್ಬರೂ ಜಗಜ್ಯೋತಿ ಬಸವಣ್ಣನವರ ಬಗೆಗಿನ ಯತ್ನಾಳ್ ಅವರ ಅವಮಾನಕರ ಹೇಳಿಕೆಯನ್ನು ಖಂಡಿಸದಿರುವುದೇಕೆ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 4, 2024
ಬಸವಣ್ಣನವರ ತತ್ವ ಸಿದ್ಧಾಂತದೊಂದಿಗೆ ಗುರುತಿಸಿಕೊಂಡರೆ ಮನುಸ್ಮೃತಿಯಲ್ಲಿ ನಂಬಿಕೆ ಇರುವ ಆರ್ಎಸ್…