ಮುಖ್ಯಮಂತ್ರಿಗಳಿಂದ ಸುವರ್ಣಸೌಧದಲ್ಲಿ ಅನುಭವ ಮಂಟಪದ ಬೃಹತ್ ಕಲಾಕೃತಿಯ ಲೋಕಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಸುವರ್ಣಸೌಧದ ಸೆಂಟ್ರಲ್ ಹಾಲ್ ಮುಂಭಾಗ ಬಿಡಿಸಿದ ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಭಾಧ್ಯಕ್ಷ ಯು. ಟಿ. ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಹೆಚ್. ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮುಂತಾದವರು ಉಪಸ್ಥಿತರಿದ್ದರು.

ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರ ಇದಾಗಿದೆ. ಬೆಂಗಳೂರು ಚಿತ್ರಕಲಾ ಪರಿಷತ್​ನ ಕಲಾವಿದ ಸತೀಶ್ ರಾವ್, ಶಿವಮೊಗ್ಗದ ಶ್ರೀಕಾಂತ್ ಹೆಗಡೆ ಸಿದ್ದಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಅಶೋಕ್ ಯು. ಜಗಳೂರು, ರಾಜಾ ರವಿವರ್ಮ ಕಲಾಶಾಲೆಯ ರೂಪಾ ಎಂ. ಆರ್. ವೀರಣ್ಣ ಮಡಿವಾಳಪ್ಪ ಬಲ್ಲಿ, ಬೈಲಹೊಂಗಲ ಮತ್ತು ಶ್ರೀ ಮಹೇಶ ನಿಂಗಪ್ಪ ಹಾಗೂ ಜಮಖಂಡಿಯ ದಫಲಾಪುರ ಅವರ ಕುಂಚದಲ್ಲಿ ಮೂಡಿಬಂದಿದೆ.

ಮುಖ್ಯಮಂತ್ರಿಗಳು ಸಭಾಧ್ಯಕ್ಷರ ಕೊಠಡಿಯಲ್ಲಿ ಅನುಭವ ಮಂಟಪ ತೈಲ ಕಲಾಕೃತಿಯ ಕಲಾವಿದರನ್ನು ಸನ್ಮಾನಿಸಿದರು.‌

ಅನುಭವ ಮಂಟಪವು ಮಾನವೀಯತೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಸಾರಿದ ಶಕ್ತಿ ಕೇಂದ್ರವಾಗಿತ್ತು. ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಮುಂತಾದ ಸಮಾಜದ ಎಲ್ಲ ಸ್ತರಗಳಿಂದ ಬಂದ ಶರಣರಿಗೆ ಮುಕ್ತ ವೇದಿಕೆ ನಿರ್ಮಿಸಿ ವಿಶ್ವಕ್ಕೆ ಮೊದಲ ಸಂಸತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Share This Article
7 Comments
  • ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು..

  • ದಿನೇ ದಿನೆ ಭಾರತದಲ್ಲಿ ಬಸವ ಫ್ರಜ್ಞೆ ಭಾರತೀಯರಲ್ಲಿ ಮೂಡಿ ಈಗ ಬಸವಣ್ಣ ಜಾತಿಮುಕ್ತನಾಗುತ್ತಿರುವುದು ಕಂಡು ಬರುತ್ತಿದ್ದು ಎಲ್ಲ ವರ್ಣದ, ಜಾತಿಯ ಭಾರತಿಯರು ಬಸವಾದಿ ಶರಣರ ವಿಚಾರಗಳನ್ನು ಒಪ್ಪಿ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

    • ಅನುಭವ ಮಂಟಪ ಚಿತ್ರ ರಚಿಸಿದ ಸವ೯ರಿಗೂ ಮತ್ತು ಸುವಣ೯ಸೌಧದಲ್ಲಿ ಅನಾವರಣ ಗೊಳಿಸಿಳಿಸಿದ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಸಚಿವರಿಗೂ ಶರಣು ಹಾಗೂ ಚಿತ್ರ ಕಲಾಕಾರರಿಗೂ ಹೃತ್ಪೂರ್ವಕ ಶರಣಾರ್ಥಿಗಳು.💐💐🙏🙏

  • ತುಂಬು ಹೃದಯದ ಧನ್ಯವಾದಗಳು ಕನಾ೯ಟಕ ಸರಕಾರಕ್ಕೆ. 🙏🙏

  • ಅನುಭವ ಮಂಟಪ ಚಿತ್ರ ರಚಿಸಿದ ಸವ೯ರಿಗೂ ಮತ್ತು ಸುವಣ೯ಸೌಧದಲ್ಲಿ ಅನಾವರಗೋಳಿಸಿ ಮುಖ್ಯಮಂತ್ರಿ ಹಾಗೂ ಸಚಿವರಿಗೂ ಶರಣು ಶರಣಾಥಿ೯ಗಳು💐💐🙏🙏

  • ತುಂಬಾ , ಪ್ರಜಾ ಪ್ರಭುತ್ವ ಕ್ಕೆ , ಬಸವಾದಿ ಶರಣರ ಅಡಿಪಾಯ ಹಾಕಿದರಿಂದ , ಈಗಿನ ಪ್ರಜಾ ಪ್ರಭುತ್ವದ ಸರಕಾರದ ಆಡಳಿತಕ್ಕೆ ಮತ್ತಷ್ಟು ಮೌಲ್ಯ ಯಾಗಿದ್ದೆ , ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆ ಅನಂತ ಧನ್ಯವಾದಗಳೊಂದಿಗೆ ಶುಭಾಶಯಗಳು ಎಲ್ಲರಿಗೂ ಸಮಾನ ಗೌರವ ಅವಕಾಶ ಕಲ್ಪಿಸುವ ಕೂಡಬೇಕು. ಎಂದು ನನ್ನ ಮನವಿ, ಶರಣು ಶರಣಾರ್ಥಿ. ಮಲ್ಲಿಕಾರ್ಜುನ ನಾಗಶೆಟ್ಟಿ ಬೀದರ್ ಜಿಲ್ಲಾ ಮೊಬೈಲ್ 9449585572

Leave a Reply

Your email address will not be published. Required fields are marked *