ಗಜೇಂದ್ರಗಡದಲ್ಲಿ ಶರಣ ಮೇಳ ಪ್ರಚಾರ ಸಭೆ

ಗಜೇಂದ್ರಗಡ

ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಮುಂದಿನ ತಿಂಗಳು ಕೂಡಲಸಂಗಮದಲ್ಲಿ ಬಸವಧರ್ಮ ಪೀಠದ ನೇತೃತ್ವದಲ್ಲಿ ನಡೆಯುತ್ತಿರುವ 38ನೇ ಶರಣ ಮೇಳದ ಪ್ರಚಾರ ಸಭೆ ಈಚೆಗೆ ಬಸವರಾಜ ಐ. ರೇವಡಿ ಅವರ ಮನೆಯಲ್ಲಿ ಜರುಗಿತು.

ಬಸವಧರ್ಮ ಪೀಠದ ಪರವಾಗಿ ಬೆಳಗಾವಿಯ ಪ್ರಭುಲಿಂಗ ಸ್ವಾಮಿಗಳು ಆಗಮಿಸಿ, ಪವಿತ್ರ ಶರಣ ಮೇಳಕ್ಕೆ ಸಹೋದರ ಭಾವನೆಯಿಂದ ಎಲ್ಲ ಶರಣ, ಶರಣೆಯರು ಕುಟುಂಬ ಸಮೇತ ಬಂದು ಪಾಲ್ಗೊಳ್ಳಲು ವಿನಂತಿಸಿದರು. ಇದೇ ಸಂದರ್ಭದಲ್ಲಿ ಮೇಳದ ಕರಪತ್ರ, ಪೋಸ್ಟರ್ ಪ್ರದರ್ಶಿಸಲಾಯಿತು.

ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸದಸ್ಯರು ಶರಣೆಯರಾದ ಮಂಜುಳಾ ರೇವಡಿ, ಶಾರದಾ ಸೋಂಪುರ, ರೇಖಾ ಅಡೂರರಾಜೂರ, ಹೇಮಾ ಕೇಸರಿ, ರೇಣುಕಾ ಇಟಗಿ, ಅಕ್ಕಮ್ಮ ನರಗುಂದ, ವಿಠ್ಠುಬಾಯಿ ರಂಗರೇಜ, ರೇಣುಕಾ ಪಾಟೀಲ, ಶರಣರಾದ ಕೆ.ಎಸ್. ಸಾಲಿಮಠ, ಬಸವರಾಜ ಕೊಟಗಿ, ಗುರುಲಿಂಗಯ್ಯ ಓದಸುಮಠ, ಮಂಜು ಹೂಗಾರ, ಶರಣಪ್ಪ ಚಲವಾದಿ, ಸಾಗರ ವಾಲಿ, ಶರಣಪ್ಪ ರೇವಡಿ ಮತ್ತಿತರರು ಉಪಸ್ಥಿತರಿದ್ದರು.

ಶರಣ ಮೇಳ 2025 ಜನವರಿ 12, 13 ಮತ್ತು 14 ರಂದು ನಡೆಯಲಿದೆ.

Share This Article
Leave a comment

Leave a Reply

Your email address will not be published. Required fields are marked *