ಬೆಳಗಾವಿ
ಹಿರೇಬಾಗೇವಾಡಿ ಗ್ರಾಮದ ಶರಣೆ ಸ್ವಾತಿ ಅಡಿವೇಶ ಇಟಗಿ ಅವರ ಮನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕ ಘಟಕ ಬೆಳಗಾವಿ ಹಾಗೂ ಗುರು ಬಸವ ಬಳಗ ಹಿರೇಬಾಗೇವಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ 59ನೆಯ ವಾರದ ವಚನ ಪ್ರಾರ್ಥನೆ ಹಾಗೂ ವಚನ ಚಿಂತನೆ ಕಾರ್ಯಕ್ರಮವು ಗುರು ಬಸವಣ್ಣನವರ ಭಾವಪೂಜೆ, ವಚನ ಪ್ರಾರ್ಥನೆಯ ಮೂಲಕ ಜರುಗಿತು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ವಚನ ಗಾಯನ ನಡೆಯಿತು. ಹಿರಿಯರು, ಯುವಕರು ಅನುಭಾವದ ನುಡಿಗಳು ಆಡಿದರು. ಪಂಚಾಚಾರದಲ್ಲಿ ಬರುವ ಶಿವಾಚಾರ ತತ್ವದ ಕುರಿತಾಗಿ ಶರಣ ಡಾ. ಮಹಾಂತೇಶ ನರಸಣ್ಣವರ ತಿಳಿಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆ ಮಹಾಂತೇಶ ತೋರಣಗಟ್ಟಿ ನಡೆಸಿದರು, ವಚನ ಪ್ರಾರ್ಥನೆಯನ್ನು ಕುಮಾರಿ ಅನನ್ಯ ಗೌಡಪ್ಪ ಹಾದಿಮನಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿ ಜಿ ವಾಲಿಇಟಗಿ, ದಯಾನಂದ ಹಂಚಿನಮನಿ, ಬಾಬುಗೌಡ ಪಾಟೀಲ, ಎನ್.ಪಿ. ಉಪ್ಪಿನ, ಆನಂದ ಕೊಂಡಗುರಿ, ನಾಗನಗೌಡ ಹಾದಿಮನಿ, ಶ್ರೀಕಾಂತ ಪಡಗಲ್, ಪೂರ್ಣಿಮಾ ಮಠಪತಿ, ಶೀಲಾ ಪಾಟೀಲ, ಶೈಲಾ ಕಡಿಮನಿ ಹಾಗೂ ಗುರುಬಸವ ಬಳಗದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.