ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ: ಲಿಂಗಸಗೂರಿನಲ್ಲಿ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಸಗೂರು

ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಾಕಾರಿಯಾಗಿ ಮಾತನ್ನಾಡಿದರೂ ಕ್ಷಮೆ ಕೇಳದೆ ಅಸಭ್ಯವಾಗಿ ನಡೆದುಕೊಂಡಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕನ ಬಳಗ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

ವಿಧಾನಸಭೆಯ ಮಾನ್ಯ ಸಭಾಪತಿಗಳಿಗೆ ಬರೆದ ಪತ್ರವನ್ನು ಶುಕ್ರವಾರ ಸಂಘಟನೆಗಳು ಮಾನ್ಯ ಸಹಾಯಕ ಆಯುಕ್ತರು ಲಿಂಗಸುಗೂರು, ಇವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಸುಗೂರು ಘಟಕ ಅಧ್ಯಕ್ಷರಾದ ಶಿವಾನಂದ ಐದನಾಳ, ಅ.ಭಾ. ವೀ.ಮಹಾಸಭಾ ಅಧ್ಯಕ್ಷ ಶರಣಪ್ಪ ಮೇಟಿ, ದೊಡ್ಡಪ್ಪ ಹೆಸರೂರ , ಭೂಪನಗೌಡ ಬಿರಾದಾರ ಪಾಟೀಲ, ಶರಣಪ್ಪ ಮೇಟಿ, ಗಿರಿಮಲ್ಲನಗೌಡ ಮಾಲಿಪಾಟೀಲ, ಮಲ್ಲಣ್ಣ ನರಕಲದಿನ್ನಿ, ಶ್ರೀಶೈಲಪ್ಪ ಪೇರಿ, ಡಾ. ಶಶಿಕಾಂತ ಕಾಡ್ಲೂರ, ನಾಗರಾಜ ಮಾಜಿ ಪುರಸಭೆ ಉಪಾಧ್ಯಕ್ಷರು, ಕೆ. ನಾಗಭೂಷಣ, ವಿಶ್ವನಾಥ ಸಕ್ರಿ, ವೀರಣ್ಣ ಹುರಕಡ್ಲಿ , ಭೂಪನಗೌಡ ಕರಡಕಲ್, ಜಂಗಮೂರ್ತಯ್ಯಸ್ವಾಮಿ, ಗಿರಿಮಲ್ಲನಗೌಡ ಕರಡಕಲ್, ವಿನಯಕಮಾರ ಗಣಾಚಾರಿ, ಮಲ್ಲಯ್ಯ ಸ್ವಾಮಿ, ಮಲ್ಲಣ್ಣ ವಾರದ, ಜಯಪ್ರಕಾಶ ಲಿಂಗಪ್ಪ ಹಿರೇನಗನೂರು, ಬಸವ ರೆಡ್ಡಿ , ಅಮರೇಶ ಸಕ್ರಿ, ಶಿವಪ್ಪ ಸಕ್ರಿ, ಸುರೇಶ ಶೆಟ್ಟಿ , ಮಾಹಾಂತೇಶ ಅನ್ವರಿ, ನಾಗರಾಜ ಅಸ್ಕಿನಾಳ ಹಾಗು ಸಂಘಟನೆಗಳ ಮತ್ತಿತರ ಪದಾಧಿಕಾರಿಗಳು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *