ಬೆಂಗಳೂರು
ಆರೆಸೆಸ್ ಮುಖಂಡ ಮೋಹನ್ ಭಗವತ್ ಡಿಸೆಂಬರ್ 8 ಉಡುಪಿಯ ಕೃಷ್ಣಮಠಕ್ಕೆ ಬೇಟಿ ನೀಡಿದ್ದರು. ಇವರ ಜೊತೆ ಬೇಲಿ ಮಠಾಧೀಶರಾದ ಶ್ರೀ ಶಿವಾನುಭವಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಕೂಡ ಉಡುಪಿ ಕೃಷ್ಣಮಠಕ್ಕೆ ಹೋಗಿದ್ದರು ಎಂಬ ಮಾತು ಕೆಲವು ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಇದರ ಜೊತೆ ಶ್ರೀಗಳ ಉಡುಪಿ ಕೃಷ್ಣಮಠ ಭೇಟಿಯ ಕೆಲ ಫೋಟೋಗಳೂ ವೈರಲ್ ಆಗಿವೆ.

ಇದು ಫೇಕ್ ನ್ಯೂಸ್. ಬೇಲಿ ಮಠ ಶ್ರೀಗಳು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದು ನವೆಂಬರ್ 10ರಂದು. ಅಲ್ಲಿ ವಿಜಯ ದಾಸರ ಆರಾಧನೆ, ತುಳಸಿ ಸಂಕೀರ್ತನ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಪರ್ಯಾಯ ಪೀಠದಲ್ಲಿರುವ ಸುಗುಣೇಂದ್ರ ತೀರ್ಥ ಶ್ರೀ ಪಾದರೇ ಖುದ್ದಾಗಿ ಬೇಲಿ ಮಠದ ಶ್ರೀಗಳನ್ನು ಗೌರವದಿಂದ ಪುಷ್ಪಗಳೊಂದಿಗೆ ಬರಮಾಡಿಕೊಂಡಿದ್ದರು. ಮಠದ ಒಳಗೆ ಸಂಚರಿಸಿ ಬೇಲಿ ಮಠದ ಶ್ರೀಗಳು ಗರ್ಭ ಗುಡಿಯ ಮುಂದೆ ನಿಂತು ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನ ಪಡೆಡಿದ್ದರು. ನಂತರ ಪೂಜ್ಯ ಸುಗುಣೇಂದ್ರ ತೀರ್ಥ ಶ್ರೀ ಪಾದರ ಪಕ್ಕದಲ್ಲಿಯೇ ಕುಳಿತು ಮಠದ ಶಿಷ್ಯರೊಂದಿಗೆ ಧಾರ್ಮಿಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ವಚನ ದರ್ಶನ ವಿವಾದದಲ್ಲಿ ಬೇಲಿ ಮಠ ಶ್ರೀಗಳ ಹಸರು ಕಾಣಿಸಿಕೊಂಡಿದ್ದರಿಂದ ಅವರು ಉಡುಪಿಗೆ ಹೋಗಿದ್ದು ಕುತೂಹಲ ಕೆರಳಿಸಿದೆ ಎಂದು ಬಸವ ತತ್ವದ ಹೋರಾಟಗಾರರೊಬ್ಬರು ಹೇಳಿದರು.
ಉಡುಪಿ ಕೃಷ್ಣಮಠಕ್ಕೆ ಹತ್ತಿರವಾಗಿರುವ ಸಂಘ ಪರಿವಾರ ಪ್ರಾಯೋಜಿತ ವಿವಾದಾಸ್ಪದ ‘ವಚನ ದರ್ಶನ’ ಪುಸ್ತಕದ ಲೋಕಾರ್ಪಣೆಯ ಸಾನಿಧ್ಯ ವಹಿಸಲು ಬೇಲಿ ಮಠದ ಶ್ರೀಗಳು ಒಪ್ಪಿಗೆ ನೀಡಿದ್ದು, ನಂತರ ಭಕ್ತರ ಆಕ್ರೋಶಕ್ಕೆ ಮಣಿದು ಕಾರ್ಯಕ್ರಮಕ್ಕೆ ಹೋಗಲು ನಿರಾಕರಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.


Matakke hogeddu ok . Basavahesum bedabaradu…