ಗದಗ
ಮಣ್ಣಿನ ಸವಕಳಿಯನ್ನು ಸಂರಕ್ಷಣೆ ಮಾಡಬೇಕು. ಮಣ್ಣಿನ ಸವೆತವನ್ನು ಕಡಿಮೆ ಮಾಡಿ, ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ನೀರು, ಗಾಳಿ, ಆಹಾರದಂತೆ ಮಣ್ಣು ಕೂಡ ಅಗತ್ಯವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೨೩ ನೇ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಾನವನ ದುರಾಸೆಯಿಂದ ಮಣ್ಣು ಸವಕಳಿಯಾಗುತ್ತಲೇ ಇದೆ. ಜನರಲ್ಲಿ ಜಾಗೃತಿ ಮೂಡಿಸಲು ಡಿಸೆಂಬರ್ ೫ ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ. ಮಣ್ಣಿಗೂ ಕಾಡಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿದ್ದರೆ ಕಾಡು. ಕಾಡುಗಳಿದ್ದರೆ ವನ್ಯಪ್ರಾಣಿಗಳು. ವನ್ಯಪ್ರಾಣಿಗಳ ಸಂರಕ್ಷಣೆ ನಮ್ಮ ಧ್ಯೇಯವಾಗಬೇಕು. ಅದಕ್ಕೆ ಬಸವಣ್ಣನವರು ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಹೇಳಿದ್ದಾರೆ.
ಪ್ರಾಣಿಗಳ ಚರ್ಮ ತುಪ್ಪಳಕ್ಕಾಗಿ, ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಕಾಡಿನಲ್ಲಿ ಹಾಯಾಗಿ ಅಡ್ಡಾಡಿಕೊಂಡು ಇರುವ ಪ್ರಾಣಿಗಳ ವಾಸಸ್ಥಾನ ಕಾಡು. ಅದನ್ನೆ ಕಡಿದು ತೋಟ ಮಾಡುತ್ತಾರೆ. ಕಾಡಿಲ್ಲದೆ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬಂದರೆ ಅವುಗಳು ಮಾನವರಿಗೆ ತೊಂದರೆ ಕೊಡುತ್ತವೆಂದು ಕೊಲ್ಲುತ್ತೇವೆ ಎಂದು ವಿಷಾದಿಸಿದರು. ಅದರ ಜಾಗೃತಿಗಾಗಿ ಪ್ರತಿವರ್ಷ ಡಿಸೆಂಬರ್ ೪ ರಂದು ವನ್ಯಜೀವಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಮನುಕುಲದ ಉಳಿವಿಗಾಗಿ ಈ ಜಗದ ಮಣ್ಣು, ಕಾಡು ಹಾಗೂ ವನ್ಯಪ್ರಾಣಿಗಳ ಸಂರಕ್ಷಣೆ ಅಗತ್ಯವೆಂದರು.
ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಅಪರ ಆಯುಕ್ತಾಲಯದ ನಿವೃತ್ತ ನಿರ್ದೇಶಕರಾದ ಸಿದ್ಧರಾಮ ಮನಹಳ್ಳಿಯವರು, ಬಸವಣ್ಣನವರ ವಚನಗಳಲ್ಲಿ ಪ್ರಾಣಿಗಳ ಪರಿಕಲ್ಪನೆ ಬಗ್ಗೆ ತಿಳಿಸಿದರು. ಮಣ್ಣಿನ ಬಣ್ಣ ತಾವು ತೊಟ್ಟು, ತಮ್ಮ ಬಣ್ಣ ಮಣ್ಣಿಗೆ ಕೊಟ್ಟು ಪ್ರಗತಿಪರ ಕೃಷಿಕ ಮಹಿಳೆಯರ ಸಾಧನೆಯ ಕಥೆಯನ್ನು ಮನೋಜ್ಞವಾಗಿ ತಿಳಿಸಿದರು. ಹಾಗೆಯೇ ಮಣ್ಣು ಸಂರಕ್ಷಣೆಯಿAದ ಕಾಡಿನ ಸಂರಕ್ಷಣೆ. ಅದರಿಂದ ವನ್ಯಜೀವಿ ಸಂರಕ್ಷಣೆಯಾಗುತ್ತದೆ. ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕಿದೆ. ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ವಕೀಲರಾದ ಎಸ್ ಎಸ್ ಶೆಟ್ಟರ ಹಾಗೂ ಶ್ರೀಮತಿ ಶ್ರೀದೇವಿ ಎಸ್. ಶೆಟ್ಟರ ಅವರನ್ನು ಸಂಮಾನಿಸಲಾಯಿತು. ಮತ್ತು ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಆನಂದ ತುಕಾರಾಮ ಬೇಂದ್ರೆ ಅವರನ್ನು ಕೂಡ ಸಂಮಾನಿಸಲಾಯಿತು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣವನ್ನು ತ್ರಿಷಾ .ಆರ್. ಹಬೀಬ್ ಹಾಗೂ ವಚನ ಚಿಂತನವನ್ನು ಶ್ರೇಯಸ್ .ಜೆ. ಅಂಗಡಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶೇಖರಪ್ಪ .ಎಸ್. ಬಾಗೂರು ಹಾಗೂ ಕುಟುಂಬ ವರ್ಗದವರು ಗಜೇಂದ್ರಗಡ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಮಿತಿಯ ಚೆರಮನ್ ಐ.ಬಿ. ಬೆನಕೊಪ್ಪ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಶಿವಾನಂದ ಹೊಂಬಳ ಸ್ವಾಗತ ಕೋರಿದರೆ, ಡಾ. ಉಮೇಶ್ ಪುರದ ಪರಿಚಯಿಸಿದರು. ಮಂಜುಳಾ ಹಾಸಲಕರ ಕಾರ್ಯಕ್ರಮ ನಿರೂಪಿಸಿದರು.
ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ವಕೀಲರಾದ ಎಸ್ ಎಸ್ ಶೆಟ್ಟರ ಹಾಗೂ ಶ್ರೀಮತಿ ಶ್ರೀದೇವಿ ಎಸ್. ಶೆಟ್ಟರ ಅವರನ್ನು ಸಂಮಾನಿಸಲಾಯಿತು.