ಬೆಳಗಾವಿ
ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದ ಶರಣ ಸಂಕುಲದಲ್ಲಿ ಮಾದಾರ ಚೆನ್ನಯ್ಯನವರ ವ್ಯಕ್ತಿತ್ವ ಬಹು ಮೌಲಿಕವಾದದ್ದಾಗಿತ್ತು. ಚೆನ್ನಯ್ಯನವರು ನಿಷ್ಠಾವಂತ ಭಕ್ತರಾಗಿ ಶಿವನ ಒಲುಮೆಗೆ ಪಾತ್ರರಾಗಿದ್ದರೆಂದು ಶರಣೆ ಅಕ್ಕಮಹಾದೇವಿ ತೆಗ್ಗಿ ಹೇಳಿದರು.
ಲಿಂಗಾಯತ ಸಂಘಟನೆಯಿಂದ ರವಿವಾರ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ನಡೆದ ಬೆಳಗಿನ ಪ್ರಾರ್ಥನೆಯ ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ 12 ನೇ ಶತಮಾನದ ಬಸವಾದಿ ಶರಣ ಮಾದಾರ ಚೆನ್ನಯ್ಯನವರ ಬದುಕು ಮತ್ತು ಸಾಧನೆ ಕುರಿತು ಅವರು ಮಾತನಾಡಿದರು.

ಚೆನ್ನಯ್ಯನವರ ಪರಿಯನ್ನು ದೃಷ್ಟಾಂತದೊಂದಿಗೆ ವಿವರಿಸಿದರು. ಬಸವಣ್ಣನವರು ತಮ್ಮ ವಚನಗಳಲ್ಲಿ ಮಾದಾರ ಚೆನ್ನಯ್ಯನವರನ್ನು ಹಾಡಿ ಹೊಗಳಿದ್ದು ಅವರ ವ್ಯಕ್ತಿತ್ವದ ಹಿರಿಮೆಗೆ ಸಾಕ್ಷಿಯಾಗಿದೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘಟನೆ ಅಧ್ಯಕ್ಷರಾದ ಶರಣ ಈರಣ್ಣ ದೇಯನ್ನವರ ಅವರು ಲಿಂಗಾಯತ ಸಂಘಟನೆ ಭವಿಷ್ಯತ್ತಿನಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯ ಚಟುವಟಿಕೆಗಳು ಮತ್ತು ಯೋಜನೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.

ಪ್ರಾರಂಭದಲ್ಲಿ ಶರಣ ಸುರೇಶ ನರಗುಂದ ಅವರ ನೇತೃತ್ವದಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ನೆರವೇರಿತು. ಶರಣ ಎಂ. ವಾಯ್. ಮೆಣಸಿನಕಾಯಿ ಅವರು ಉಪನ್ಯಾಸಕರ ಪರಿಚಯ, ಸ್ವಾಗತ ಮಾಡಿದರು. ಬಿ.ಪಿ. ಜೇವನಿ, ಜಯಶ್ರೀ ಚಾವಲಗಿ, ಶ್ರೀದೇವಿ ನರಗುಂದ ಅವರಿಂದ ವಚನ ಗಾಯನ ನೆರವೇರಿತು. ನ್ಯಾಯವಾದಿಗಳಾದ ಶ್ರೀ ವಿ.ಕೆ ಪಾಟೀಲ್ ಅವರು ವಚನ ವಿಶ್ಲೇಷಣೆ ಮಾಡಿದರು. ಸಂಗಮೇಶ ಅರಳಿಯವರು ವಂದನಾರ್ಪಣೆ ನೆರವೇರಿಸಿದರು. ಶ್ರೀ ಸುರೇಶ ನರಗುಂದ ಅವರು ನಿರೂಪಣೆ ಮಾಡಿದರು. ಶರಣೆ ಮಹದೇವ ಘಾಟಿ ಅವರಿಂದ ಪ್ರಸಾದ ಸೇವೆ ನೆರವೇರಿತು. ಸುಶೀಲ ಗುರವ, ಶ್ರೀದೇವಿ ನರಗುಂದ, ಶಾಂತಾ ಕಂಬಿ ಹಾಗೂ ಕಮಲಾ ಗಣಾಚಾರಿ, ಅವರ ಮೂಲಕ ಉಪನ್ಯಾಸಕರನ್ನು ಗೌರವಿಸಲಾಯಿತು.
ಶಿವಾನಂದ ನಾಯಕ, ಬಸವರಾಜ ಬಿಜ್ಜರಗಿ, ಸಾರಾಪುರೆ ಸರ್, ಬಸವರಾಜ ಕರಡಿಮಠ, ಮಹದೇವ ಕೆಂಪಗೌಡರ ಹಾಗೂ ಸಂಘಟನೆಯ ಸದಸ್ಯರು ಮತ್ತು ಮತ್ತಿತರ ಶರಣ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.