ಬಹಿರಂಗ ಪತ್ರ: ಲಿಂಗಾಯತರನ್ನು ವಿ.ಎಚ್.ಪಿ ಬಳಸಿಕೊಳ್ಳಲು ಬಿಡಬೇಡಿ ಬೇಲಿಮಠ ಶ್ರೀಗಳೇ

ಉಮೇಶ್ ಎಚ್.ಸಿ
ಉಮೇಶ್ ಎಚ್.ಸಿ

ಬೆಂಗಳೂರು

ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮೀಜಿ,

ಶರಣು ಶರಣಾರ್ಥಿಗಳು

ಡಿಸೆಂಬರ್ 18 ಬೆಂಗಳೂರಿನ ವೀರಭದ್ರ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮೆಕ್ಕೆ ಹೋಗುವ ನಿರ್ಧಾರ ಮಾಡಿದ್ದೀರಿ.

ಈ ‘ಸಂತರ ಪಾದಯಾತ್ರೆಯ’ ಉದ್ದೇಶ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು.

ನಾನು ಕೇಳಿರುವ ಹಾಗೆ ಈ ಪಾದಯಾತ್ರೆ ನಡೆಯುತ್ತಿರುವುದು ಎರಡು ಉದ್ದೇಶಗಳಿಗವೆ:

ಒಂದು ವೀರಭದ್ರ ನಗರದಲ್ಲಿ ಹಿರಿಯ ಸಿದ್ದಗಂಗಾ ಶ್ರೀಗಳ ಪ್ರತಿಮೆಯನ್ನು ಕಿಡಿಗೇಡಿಯೊಬ್ಬ ಭಗ್ನಗೊಳಿಸಿದ್ದ. ಅದರ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ ಎನ್ನುವ ಸುದ್ದಿಯಿದೆ.

ವೀರಭದ್ರ ನಗರದಲ್ಲಿ ಬಡ ಲಿಂಗಾಯತ ಕುಟುಂಬಗಳು ಮತಾಂತರಗೊಳ್ಳುತ್ತಿವೆ ಎಂಬ ಹೊಸ ಸುದ್ದಿ ಬರುತ್ತಿದೆ. ಅದರ ವಿರುದ್ದವೂ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಕೇಳಿದ್ದೇನೆ.

ಅಂದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಈ ಪ್ರತಿಭಟನೆ ನಡೆಯುತ್ತಿದೆ.

ಇವು ಪ್ರತಿಭಟಿಸಬೇಕಾಗಿರುವ ವಿಷಯಗಳೇ. ಅದರೆ ಇದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮವಾಗಿ ನಡೆಯುತ್ತಿರುವ ಸುದ್ದಿ ನಿಜವಾದರೆ ಅದಕ್ಕೆ ನಮ್ಮ ವಿರೋಧವಿದೆ.

ಸಂಘ ಪರಿವಾರದವರು ಬಸವಣ್ಣನವರ ಶತ್ರುಗಳು. ಅವರ ನಿಯಂತ್ರಣದಲ್ಲಿ ಈ ತಿಂಗಳ 20ರಿಂದ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಲ್ಲಿ ಬಸವಣ್ಣನವರ ಒಂದು ಫೋಟೋ ಹಾಕಿರಲಿಲ್ಲ. ವಚನಗಳ ಮೇಲೆ ಯಾವುದೇ ಚರ್ಚೆ ನಡೆಯದ ಹಾಗೆ ನೋಡಿಕೊಂಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಅವರಿಗೆ ಸಿದ್ದಗಂಗಾ ಶ್ರೀಗಳ ಬಗ್ಗೆ ಅಥವಾ ಲಿಂಗಾಯತರ ಬಗ್ಗೆ ಯಾವ ಪ್ರೀತಿಯೂ ಇಲ್ಲ. ಲಿಂಗಾಯತ ಯುವಕರನ್ನು ಹಿಡಿದು ಬ್ರೈನ್ ವಾಷ್ ಮಾಡಲು ಇದೊಂದು ಅವಕಾಶವಷ್ಟೇ. ಅದನ್ನು ದಯವಿಟ್ಟು ಬೆಂಬಲಿಸಬೇಡಿ.

ವಿಶ್ವ ಹಿಂದೂ ಪರಿಷತ್ ಪೋಸ್ಟರ್ ನೋಡಿ ನಿಮ್ಮ ವಿರುದ್ಧ ಲಿಂಗಾಯತರು ಪ್ರತಿಭಟನೆ ಮಾಡುವ, ನಿಮ್ಮನ್ನು ಬಹಿಷ್ಕಾರ ಮಾಡುವ ಮಾತು ಆಗಲೇ ನಡೆಯುತ್ತಿದೆ. ಇದನ್ನು ಬೆಳೆಯಲು ಬಿಡಬೇಡಿ.

ಇವೆರಡೂ ವಿಷಯಗಳ ಮೇಲೆ ಹೋರಾಟ ಮಾಡೋಣ. ನಿಮ್ಮ ನೇತೃತ್ವದಲ್ಲಿಯೇ ಚರ್ಚೆ ಮಾಡೋಣ, ನಿಮ್ಮ ನೇತೃತ್ವದಲ್ಲಿಯೇ ಹೋರಾಟ ಮಾಡೋಣ.

ಧನ್ಯವಾದ

ಉಮೇಶ್ ಎಚ್ ಸಿ

Share This Article
1 Comment
  • ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿಯವರನ್ನು ದಿವಂಗತ ಹಿರಿಯ ಪೇಜಾವರ ಶ್ರೀಗಳೇ VHP ಗೆ ತುಂಬಾ ಹಿಂದೇನೆ ಅಂದರೆ ಅವರು ಉಪಾಧ್ಯಕ್ಷರಾಗಿ ರಾಮಜನ್ಮ ಭೂಮಿ ಹೋರಾಟ ನಡೆಸುವಾಗಲೇ ಎತ್ತಿಹಾಕಿಕೊಂಡು ಹೋಗಿದ್ದಾರೆ. ಇವರು ಆಗಿನಿಂದಲೂ ಅಲ್ಲೊಂದು ಕಾಲು ಇಟ್ಟುಕೊಂಡು “ಬೇಲಿ”ಯ ಮೇಲೆಯೇ ಕುಳಿತಿದ್ದಾರೆ. ಇವರು ವಚನಗಳನ್ನು ಓದಿಕೊಂಡಿದ್ದಾರೆ ಮತ್ತು ಚನ್ನಾಗಿ ಮಾತನಾಡುತ್ತಾರೆ, ಆದರೆ, ಅಷ್ಟಾದರೆ ಸಾಕೆ? ಅನ್ನುವುದು ಇಂದಿನ ಪ್ರಶ್ನೆ. ಈ ಹಿಂದೆ “ವಚನ ದರ್ಶನ” ಪುಸ್ತಕ ಬಿಡುಗಡೆಗೂ ಹೊರಟು ನಿಂತ ಇವರ ನಿಲುವು ಎಲ್ಲರಿಗೂ ತಿಳಿದಿದೆ.

Leave a Reply

Your email address will not be published. Required fields are marked *