ಮೈಸೂರು
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರಿಗೆ ಅಭಿನಂದನೆ ಹಾಗೂ ಶರಣ ದರ್ಶನ ಕೃತಿ ಲೋಕಾರ್ಪಣೆ ಸಮಾರಂಭವನ್ನು ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿತ್ತು
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ನಗರ ಘಟಕ ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಕದಳಿ ಮಹಿಳಾ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟ ಮೈಸೂರುಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಖ್ಯಾತ ವಾಗ್ಮಿ ಪ್ರೊಫೆಸರ್ ಎಂ .ಕೃಷ್ಣೇಗೌಡ ತಮ್ಮ ಅಭಿನಂದನಾ ನುಡಿಗಳಲ್ಲಿ ಗೊ. ರು. ಚೆನ್ನಬಸಪ್ಪ ಅವರ ಹೆಸರು ಮತ್ತು ವ್ಯಕ್ತಿತ್ವ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ದೊಡ್ಡ ತೊಂದರೆಯಿಂದ ಪಾರು ಮಾಡಿದೆ. ಇವರಲ್ಲದೆ ಬೇರೆ ಯಾರನ್ನಾದರೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ನಾಡಿನಾದ್ಯಂತ ಇನ್ನೊಂದು ಚರ್ಚೆ ನಡೆಯುತ್ತಿತ್ತು ಎಂದರು.
ಗೊಂಡೇನಹಳ್ಳಿ ರುದ್ರಪ್ಪ ಚೆನ್ನಬಸಪ್ಪ ರವರು ಇವರು ಬಡತನವನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿದ್ದವರು. ತಂದೆ ಶಾಲಾ ಮಾಸ್ತರು ತಾಯಿ ಕೂಲಿ ಕೆಲಸದಲ್ಲಿ ತೊಡಗಿದ್ದಾಕೆ. ಬಹುಶಹ ಈ ಕಷ್ಟದ ಬದುಕೆ ಅವರನ್ನು ಇಷ್ಟು ಮೇಲೆತ್ತರಕೆ ಕೂರಿಸಿರಲು ಸಾಧ್ಯ. ಹೊಟ್ಟೆಯಲ್ಲಿ ಇಂತಹದೊಂದು ಬೆಂಕಿ ಇಲ್ಲದೆ ಹೋದರೆ ಇಂಥ ಸುಂದರ ಹೂಗಳು ಅರಳಲು ಕಷ್ಟವಾಗುತ್ತದೇನೋ. ಶ್ರೀಮಂತಿಕೆ ಬಂದ ಮೇಲೂ ಸ್ವ ಇಚ್ಛೆಯಿಂದ ಬಡತನದ ಬದುಕನ್ನು ಬದುಕಿದವರು ಗೊ. ರು. ಚೆನ್ನಬಸಪ್ಪರವರು ಯಾಕೆಂದ್ರೆ ಬಡತನವೇ ಇವರಿಗೆ ಕಂಫರ್ಟ್ ಜೋನ್, ಎಂದರು.
ಡಾಕ್ಟರ್ ಜ್ಯೋತಿಶಂಕರ್ ಪ್ರಾಧ್ಯಾಪಕರು ಕನ್ನಡ ವಿಭಾಗ ಕರಾಮುವಿವಿ ಮೈಸೂರು ಇವರು ಶರಣರ ದರ್ಶನ ಕೃತಿ ಕುರಿತು ಹೀಗೆ ನುಡಿದರು: ವಚನ ಸಾಹಿತ್ಯ ಎನ್ನುವುದು ನಮ್ಮ ಒಳಗಣ್ಣನ್ನು ತೆರೆದು ನೋಡುವಂತಹ ಒಂದು ವಿಶಿಷ್ಟ ಸಾಹಿತ್ಯವಾಗಿದೆ ಕರೋನಾ ಬಂದು ಎಲ್ಲರೂ ಅವರವರ ಮನೆಗಳಲ್ಲಿ ಬಂದಿಗಳಾಗಿದ್ದಾಗ, ಹೊರ ಪ್ರಪಂಚದ ಸಂಬಂಧಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಎಲ್ಲರನ್ನೂ ಬೆಸೆಯುವ ಕೆಲಸವನ್ನು ಕೈಗೆತ್ತಿಕೊಂಡಿತು.

ಮನಸ್ಸಿನ ದುಗುಡ ಗಳಿಗೆ ಕಿವಿಯಾಗುವ ನೊಂದ ಮನಸ್ಸುಗಳಿಗೆ ಪ್ರೀತಿಯನ್ನು ಕೊಡುವಂತಹ ಕೆಲಸ ಮಾಡುವ ಗುರುತರವಾದ ಜವಾಬ್ದಾರಿಯನ್ನು ಶರಣ ಸಾಹಿತ್ಯ ಪರಿಷತ್ತು ವಹಿಸಿ ಕೂಂಡಿತು ವಚನ ಸಾಹಿತ್ಯದ ವಿಷಯಗಳನ್ನು ಆಧರಿಸಿದ ಉಪನ್ಯಾಸಗಳನ್ನು ವಿದ್ವಾಂಸರಿಂದ ಏರ್ಪಡಿಸಿ ಅದು ಅಕ್ಷರಕ್ಕೆ ದಾಖಲಾದಂತಹ 600 ಪುಟಗಳನ್ನು ಒಳಗೊಂಡ ಬೃಹತ್ತಾದ ಕೃತಿ ಇದು 50 ಜನ ವಚನಕಾರರನ್ನು ಇಲ್ಲಿ ಅನೇಕ ಲೇಖಕರು ಪರಿಚಯಿಸಿದ್ದಾರೆ.
ಗೊ. ರು. ಚೆನ್ನಬಸಪ್ಪ ಹನಿ ಮಳೆಯಲ್ಲಿ ನನ್ನನ್ನು ಜಡಿ ಮಳೆಯಲ್ಲಿ ನಡೆಯುವಂತೆ ಮಾಡಿದ್ದಾರೆ. ಕನ್ನಡ ಕ್ಷೇತ್ರ ಅಂಗಳದಲ್ಲಿ ಕೆಲಸ ಮಾಡ್ತಾ ಇದ್ದ ನನ್ನನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಆರಿಸಿದ ಸುದ್ದಿ ಪ್ರಕಟವಾದ ಕೂಡಲೇ ನಾಡಿನ ನಾನಾ ಭಾಗಗಳಿಂದ ಅಭಿಮಾನಿಗಳು ಕಳಿಸುತ್ತಿರುವ ಶುಭಾಶಯದ ನುಡಿಗಳಲ್ಲಿ ತೊಯಿದು ಹೋಗಿದ್ದೇನೆ.
ಇಂತಹ ಸಂದರ್ಭದಲ್ಲಿ ನನ್ನನ್ನು ನನ್ನ ಮೈಸೂರಿನ ಬಂಧುಗಳು ಪರಮಪೂಜ್ಯ ಸ್ವಾಮಿಜಿಗಳ ಸಾನಿಧ್ಯದಲ್ಲಿ ಅಭಿನಂದಿಸಲು ಕರೆದಿದ್ದಾರೆ. ಮತಿಮಂದನಾಗಿ ಗತಿಯ ಕಾಣದೆ ಇರುವ ಗೌಡನ ಕೈಗೆ ಕೋಲು ಕೊಟ್ಟು ನಡೆಸುವಂತೆ ಎಂದು ಬಸವಣ್ಣನವರು ಒಂದು ಮಾತನ್ನು ಹೇಳಿದ್ದಾರೆ. ಹಾಗೆ ನಾನು ಕೂಡ ಎತ್ತಿದವರ ಕೈಗೂಸಾಗಿ ಕರೆದ ಕಡೆಯಲ್ಲೇಲ್ಲಾ ಹೋಗಿ ಬರುತ್ತಿದ್ದೇನೆ.
ಕಳೆದ 70 ವರ್ಷಗಳಿಂದ ಸುತ್ತೂರಿನೊಂದಿಗೆ ಒಡನಾಟ ಇಟ್ಟುಕೂಂಡ ನನಗೆ ಶ್ರೀಗಳ ಆಣತಿಯನ್ನು ಮೀರುವ ಧೈರ್ಯ ಇಲ್ಲ. ಬಹುಶಹ ಮೈಸೂರಿಗೆ ಬಂದು ಹೋದವರಲ್ಲಿ ನನ್ನಷ್ಟು ಹಳಬ ಯಾರು ಇಲ್ಲ ಎಂದು ಭಾವಿಸಿದ್ದೇನೆ, ಎಂದರು.

ಪೂಜ್ಯ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಕೃತಿ ಲೋಕಾರ್ಪಣೆ ಮಾಡಿ ಗೊ. ರು. ಚೆನ್ನಬಸಪ್ಪ ಅಪರೂಪದ ಸಾಮರ್ಥ್ಯವನ್ನು ಉಳ್ಳವರು. ಇವರು ಜಾನಪದ ಮತ್ತು ಶಿಷ್ಟ ಸಾಹಿತ್ಯ ಎರಡರಲ್ಲೂ ಸಿದ್ಧ ಹಸ್ತರು. ಇವರು ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಂಡರು ಆ ಕೆಲಸಕ್ಕೆ ಯಾವ ಅಪಚಾರ ವಾಗದಂತೆ ಅದನ್ನು ತುಂಬಾ ಅಚ್ಚುಕಟ್ಟಾಗಿ ಸರಿಯಾಗಿ ನಿಭಾಯಿಸಬಲ್ಲರು ಎಂಬುದಕ್ಕೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಮಾಡಿದ ಕೆಲಸ ಕಾರ್ಯಗಳೇ ಇದಕ್ಕೆ ಸಾಕ್ಷಿ.
ಗೊರುಚರವರು ತಮ್ಮನ್ನ ಅಧ್ಯಕ್ಷರನ್ನಾಗಿ ಮಾಡಿ ಅಂತ ಯಾರಿಗೂ ಅಪ್ಲಿಕೇಶನ್ ಹಾಕಿಲ್ಲ. ಅಷ್ಟೇ ಯಾಕೆ ನಿಮ್ಮನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೀವಿ ಅಂತ ತಿಳಿಸೋವರೆಗೂ ಅವರಿಗೆ ಈ ವಿಚಾರಗಳೇ ಗೊತ್ತಿಲ್ಲ ಅಷ್ಟರಮಟ್ಟಿಗೆ ತಮ್ಮ ಕಾಯಕದಲ್ಲಿ ನಿರತರಾಗಿದ್ದವರು.
ಒಬ್ಬ ಗ್ರಾಮೀಣ ಪ್ರತಿಭೆಗೆ ಜಾನಪದ ಪ್ರತಿಭೆಗೆ ಈ ಭಾಗ್ಯ ಒರೆದು ಬಂದದ್ದು ನಿಜಕ್ಕೂ ಅದೃಷ್ಟವೇ ಹಾಗಾಗಿ ಇವರು ಅದೃಷ್ಟವಂತರೇ ಇದು ಇವರಿಗೆ ಬಯಸದೇ ಬಂದ ಭಾಗ್ಯ. ಈ ರೀತಿಯಲ್ಲಾದರೂ ಕರ್ನಾಟಕದಲ್ಲಿ ಆಗೊಮ್ಮೆ ಈಗೊಮ್ಮೆ ಯಾದರೂ ಅರ್ಹ ಸರಿಯಾದ ವ್ಯಕ್ತಿಗಳ ಆಯ್ಕೆ ಮತ್ತು ಸೂಕ್ತ ಸ್ಥಾನಮಾನ ದೊರೆಯುತ್ತಿದೆ ಎನ್ನುವುದೇ ಸಮಾಧಾನಕರ ಸಂಗತಿ, ಎಂದರು.
ಮ.ಗು ಸದಾನಂದಯ್ಯ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಮೈಸೂರು
ನಡೋಜ ಡಾಕ್ಟರ್ ಗೊ. ರು. ಚೆನ್ನಬಸಪ್ಪ ನಿಯೋಜಿತ ಸಮ್ಮೇಳನಾಧ್ಯಕ್ಷರನ್ನು ಸುತ್ತೂರು ಶ್ರೀಗಳನ್ನು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯ ಮಾನ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮತಿ ಶಾರದಾ ಶಿವಲಿಂಗ ಸ್ವಾಮಿ ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ ಇವರುಗಳು ಉಪಸ್ಥಿತರಿದ್ದರು .
ನಾದಹಂಸಿನಿ ಭಜನಾ ತಂಡ ಜೆ.ಪಿ ನಗರ ಮೈಸೂರು ಇವರಿಂದ ವಚನ ಗಾಯನ ನೆರವೇರಿತು
ಡಾ!!. ಗೋ. ರು. ಚ ರವರಿಗೆ ಸಾಟಿಯಾರೂ ಇಲ್ಲ. 🙏🙏🙏🙏
ಡಾ!!. ಗೊ . ರು. ಚ ರವರಿಗೆ ಸಾಟಿಯಾರೂ ಇಲ್ಲ. 🙏🙏🙏🙏