ಅಶೋಕ ಬರಗುಂಡಿಯವರು ವಧು-ವರರಿಗೆ ಲಿಂಗದೀಕ್ಷೆ ಮಾಡಿದ ಶಿವಯೋಗ ಕಾರ್ಯಕ್ರಮವು ಎಲ್ಲ ಜನರನ್ನು ಮಂತ್ರ ಮುಗ್ದರನ್ನಾಗಿಸಿ ಜನ ಮೆಚ್ಚುಗೆಯನ್ನು ಪಡೆಯಿತು.
ವಿಜಯಪುರ
ಜಿಲ್ಲೆಯ ತಿಡಗುಂದಿಯ ಕಾಯಕ ಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣ ಬಸನಗೌಡ ಭೀಮನಗೌಡ ಹರನಾಳ ಅವರ ಸುಪುತ್ರ ಕುಮಾರಗೌಡನ ಕಲ್ಯಾಣಮಹೋತ್ಸವವು ಬಸವ ತತ್ವದ ಹಾಗೂ ಮಂತ್ರ ಮಾಂಗಲ್ಯ ಪದ್ಧತಿಯಂತೆ ಡಿಸೆಂಬರ್ 14 ಮತ್ತು 15 ರಂದು
ನೆರವೇರಿತು.
14 ರಂದು ಸಂಜೆ ಬಸವ ಬಂಧುತ್ವ (ನಿಶ್ಚಿತಾರ್ಥ) ಹಾಗೂ 15ರಂದು ಕಲ್ಯಾಣ ಮಹೋತ್ಸವ ನಡೆದವು. ಉಭಯ ಕಾರ್ಯಕ್ರಮಗಳು ಗದುಗಿನ ವಚನಮೂರ್ತಿ ಶರಣ ಅಶೋಕ ಬರಗುಂಡಿಯವರು ನೆರವೇರಿಸಿದರು.
ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲˌ ಜಮಖಂಡಿ ಬಸವ ಕೇಂದ್ರದ ರವಿ ಯಡಹಳ್ಳಿ ಹಾಗೂ ಅವರ ಪುತ್ರ ಬಸವಪ್ರಸಾದ ನೆರವಾದರು.
ನಿಶ್ಚಿತಾರ್ಥ ಕಾರ್ಯಕ್ರಮವು ಬಸವ ಷಟಸ್ಥಲ ಧ್ವಜಾರೋಹಣˌ ಧ್ವಜಗೀತೆ ಹಾಗೂ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಆರಂಭವಾಯಿತು. ಬೀಗರ ಇದಿರುಗೊಳ್ಳುವಿಕೆ ಹಾಗೂ ಬಸವ ಬಂಧುತ್ವ ಕಾರ್ಯಕ್ರಮಗಳು ಬಸವ ತತ್ವದ ಅನುಸಾರ ನಡೆದವು. ದಾವಣಗೆರೆಯ ಬಸವ ಕಲಾಲೋಕದ ವಚನ ಸಂಗೀತಸುಧೆ ಜನರ ಮನ ಸೂರೆಗೊಂಡಿತು.

ಮುವತ್ತು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಶಾಲಾ ಆವರಣದಲ್ಲಿ ಹರನಾಳ ಕುಟುಂಬ ನಡೆಸುವ ಶಿಕ್ಷಣ ಸಂಸ್ಥೆಯ ಭವ್ಯವಾದ ಮಹರ್ಷಿ ಪತಂಜಲಿ ಯೋಗ, ಕ್ರೀಡೆ, ಹಾಗೂ ಸಾಂಸ್ಕ್ರೃತಿಕ ಭವನದಲ್ಲಿ ಮಾರನೆ ದಿನ 15ರಂದು ಬೆಳೆಗ್ಗೆ 7 ಗಂಟೆಗೆ ಕಲ್ಯಾಣಮಹೋತ್ಸವ ಕಾರ್ಯಕ್ರಮವು ಸಾಮೂಹಿಕ ಸಹಜ ಶಿವಯೋಗ ಹಾಗೂ ಇಷ್ಟಲಿಂಗ ದೀಕ್ಷೆಯ ಮೂಲಕ ಆರಂಭಗೊಂಡಿತು. ಅಶೋಕ ಬರಗುಂಡಿಯವರು ವಧು-ವರರಿಗೆ ಲಿಂಗದೀಕ್ಷೆ ಮಾಡಿದ ಶಿವಯೋಗ ಕಾರ್ಯಕ್ರಮವು ಎಲ್ಲ ಜನರನ್ನು ಮಂತ್ರ ಮುಗ್ದರನ್ನಾಗಿಸಿ ಜನ ಮೆಚ್ಚುಗೆಯನ್ನು ಪಡೆಯಿತು.

ವಧು ವರನಿಗೆ ರುದ್ರಾಕ್ಷಿ ಮಾಂಗಲ್ಯ ಕಟ್ಟಿದರೆ ವರ ವಧುವಿಗೆ ಚಿನ್ನದ ಮಾಂಗಲ್ಯ ಕಟ್ಟಿದರು. ವಚನಗಳ ಪ್ರತಿಜ್ಞೆ ಸ್ವೀಕರಿಸಿ ವಧುವರರು ಶರಣ ದಾಂಪತ್ಯಕ್ಕೆ ಕಾಲಿರಿಸಿದರು.
ಹರನಾಳ ಅವರ ಕಾಯಕ ಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿನಿ ಭಾಗ್ಯಶ್ರೀ ಚಲವಾದಿ ಇಷ್ಟಪಟ್ಟು ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದಳು. ಆಕೆಗೆ 6 ನೇ ತರಗತಿಯಿಂದ ಬಿ.ಎಸ್ಸಿ ವರೆಗೆ ಬಸನಗೌಡ ಹರನಾಳ ಅವರು ಉಚಿತ ಶಿಕ್ಷಣ ನೀಡುತಿದ್ದಾರೆ. ಆಕೆ ಪ್ರತಿಭಾವಂತೆˌ ಸದಾಚಾರಿಯು ಆಗಿದ್ದಾಳೆ ಮತ್ತು UPSC ಪರೀಕ್ಷೆ ಪೂರ್ವ ತರಬೇತಿಯ ತಯಾರಿಯನ್ನು ಪಡೆಯುತ್ತಿದ್ದಾಳೆ. ಹರನಾಳ ಅವರ ಶಿಕ್ಷಣ ಸಂಸ್ಥೆಯಲ್ಲಿ ಅಂದಾಜು ೪೦ ಅನಾಥ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
15ರಂದು ಮಧ್ಯಾಹ್ನ ಕಲ್ಯಾಣ ಮಹೋತ್ಸವ ಕಾರ್ಯಕ್ರಮವು ಷಟಸ್ಥಲ ಧ್ವಜಾರೋಹಣˌ ಧ್ವಜಗೀತೆ ಹಾಗು ಸಂವಿಧಾನದ ಪೂರ್ವಪೀಠಿಗೆ ಓದುವ ಮೂಲಕ ಆರಂಭಗೊಂಡಿತು. ಕಾರ್ಯಕ್ರಮಕ್ಕೆ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮಿಗಳುˌ ಶಿರೂರು-ಸತ್ತಿಯ ಬಸವಲಿಂಗ ಸ್ವಾಮಿಗಳುˌ ಮನಗೂಳಿ ವಿರಕ್ತ ಮಠದ ವಿರತೀಶಾನಂದ ಸ್ವಾಮಿಗಳುˌ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮಿಗಳು ಹಾಗು ಇನ್ನೂ ಅನೇಕ ಜನ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದು ವಧುವರರನ್ನು ಆಶಿರ್ವದಿಸಿದರು.

ಶಾಸಕ ರಾಜೂ ಅಲಗೂರˌ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರˌ ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ಮಾಜಿ ಶಾಸಕ ಮನೋಹರ ಐನಪುರ ಚಂದ್ರಶೇಖರ ಕೌಟಗಿ, ಬಿ.ಎಲ್.ಡಿ.ಇ. ಸಂಸ್ಥೆಯ ಮಾನ್ಯ ಮಂತ್ರಿಗಳಾದ ಎಂ.ಬಿ. ಪಾಟೀಲರ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ ಅವರು ಹಾಗೂ ಇನ್ನೂ ಅನೇಕ ಜನಪ್ರತಿನಿಧಿಗಳುˌ ಸ್ಥಳೀಯ ಸಂಸ್ಥೆಯ ಸದಸ್ಯರುˌ ಹಿರಿಯ ಸರಕಾರಿ ಅಧಿಕಾರಿಗಳುˌ ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಗೊಂಡ, ನ್ಯಾಯ ಮೂರ್ತಿಗಳಾದ ಸುರೇಶ ಒಂಟಗೋಡೆ, ಖ್ಯಾತ ನೇತ್ರ ತಜ್ಞರಾದ ಪ್ರಭುಗೌಡ ಪಾಟೀಲ, ಖ್ಯಾತ ಮಕ್ಕಳ ತಜ್ಞರಾದ ಎಲ್. ಎಚ್. ಬಿದರಿ, ಡಾ. ಮಲ್ಲನಗೌಡ ಬಿರಾದಾರ, ಅನೇಕ ವೈದ್ಯರು ಮತ್ತು ಹೇಮರೆಡ್ಡಿ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಹಾಜರಿದ್ದು ಆಶಿರ್ವದಿಸಿದರು.

ಕಾರ್ಯಕ್ರಮವು ವಿನೂತನವಾಗಿˌ ಬಸವ ತತ್ವದ ಮಾದರಿ ಮದುವೆಯಾಗಿ ನೆರವೇರಿತು. ಅಂದಾಜು 6-7 ಸಾವಿರ ಜನರು ಕಲ್ಯಾಣಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಮದುವೆಗೆ ಬಂದವರಿಗೆ ವಚನ ತಾಂಬೂಲ ಪುಸ್ತಕವನ್ನು ವಿತರಿಸಲಾಯಿತು. ಭರ್ಜರಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಅನೇಕ ಗಣ್ಯರು, ಸಾಹಿತಿಗಳು, ಹಿರಿಯರು ಇದೊಂದು ವಿಶೇಷ, ವಿಶಿಷ್ಟ ಮತ್ತು ಸಮಾಜಕ್ಕೆ ಮಾದರಿಯಾಗುವಂತಹ ಅಭೂತ ಪೂರ್ವ ಮದುವೆ ಸಮಾರಂಭವೆಂದರು. ಬಸವತತ್ವಾನುಷ್ಟಾನ ಮಾಡಿ ಹೊಸ ಇತಿಹಾಸವನ್ನು ಮಾಡಿದಿರಿ ಎಂದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
!!ಗುರ ಬಸವಲಿಂಗ ಶರಣ!!
[ಅ.ಸ.ಷ.]
🪻🪻🪻🪻🪻🪻🪻🪻
ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಇಂಥ ಕಾರ್ಯಗಳು ನಾಡಿನ ಎಲ್ಲಾ ಕಡೆಯ ಜನರಿಗೂ ತಲುಪಿ ವಿಶ್ವಾದ್ಯಂತ ಹರಡಲಿ ಎಂದು ಹಾರೈಸುತ್ತೆವೆ, ಶರಣಾರ್ಥಿ
ಯಿಂದ
ಪೀಠಾಧಿಪತಿ
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ ಭಾರತ ದೇಶ
😀😀😀
ಇಂತಹ ಬಸವ ತತ್ವದ ಅಡಿಯಲ್ಲಿ ನಡೆಯುವ ಕಲ್ಯಾಣ ಮಹೋತ್ಸವಗಳು ನೋಡಲು ಅರ್ಥಪೂರ್ಣವಾಗಿರುತ್ತವೆ, ಇಷ್ಟಲಿಂಗ ಪೂಜೆ ಇಲ್ಲದೆ ಎಷ್ಟೊಂದು ಜನ ವಿವಾಹ ಮಾಡಿಕೊಳ್ಳುತ್ತಾರೆ , ಲಿಂಗಾಯತ ವಧು ವರರು ಕಡ್ಡಾಯವಾಗಿ ಇಷ್ಟಲಿಂಗ ಪೂಜೆ ಮತ್ತು ಕನ್ನಡದ ವಚನಗಳ ಹಿನ್ನೆಲೆಯಲ್ಲಿಯೇ ವಿವಾಹವಾಗಬೇಕು . ಇದು ಕನ್ನಡದ ವಿವಾಹವೂ ಹೌದು, ಬಸವ ತತ್ವದ ಕಲ್ಯಾಣ ಮಹೋತ್ಸವವೂ ಕೂಡ, ವದು ವರರಿಗೂ ಅವರ ಪೋಷಕರಿಗೂ ಅಭಿನಂದೆನಗಳು.
ಬಹಳ ಸಂತೋಷದ ವಿಷಯ ಜಗತ್ತಿಗೆ ಬಸವಣ್ಣನವರ ಆಶಯ ತಲುಪುತ್ತಿದೆ.
ಶರಣು ಶರಣು ಸಾಥರ್ಕ ಜೀವನ ನಡೆಸುವ ಮೂಲಕ ಬಸವಣ್ಣನವರ ಆಶಯ ಪ್ರತಿ ಯೊಬಬರಿಗು ತಲುಪಿಸುವ ಕಾರ್ಯ ನೆರವೇರಲಿ. ವಚನ ತಾಅಂಬೂಲ ಪುಸ್ತಕ ನಿಮಗೆ ಸಾಧ್ಯವಾದರೆ ನಮಗೆ ತಲುಪಿಸುವ ವ್ಯವಸ್ಥೆ ಆಗಲಿ.