ಇತರೆ ಸಮಾಜದವರು ನಮಗೆ ಎಷ್ಟೇ ಅವಹೇಳನ ಮಾಡುತ್ತಿದ್ದರೂ ಸ್ವತಃ ಬಸವಣ್ಣನವರೇ ಕಾಯಕಕ್ಕೆ ಮಹತ್ವಕೊಟ್ಟಿದ್ದರಿಂದ ಈ ಕಸುಬನ್ನು ಮಾಡುತ್ತಲೇ ಬಂದಿದ್ದೇವೆ.
ಬೆಳಗಾವಿ
೧೨ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಶಿವಶರಣ ಹಡಪದ ಅಪ್ಪಣ್ಣನವರ ವಂಶಜರಾದ ನಮ್ಮ ಕುಲಕಸುಬು ಕ್ಷೌರಿಕ ವೃತ್ತಿಯನ್ನು ನಂಬಿ ಬದುಕುತ್ತಿದ್ದೇವೆ. ಇತರೆ ಸಮಾಜದವರು ನಮಗೆ ಎಷ್ಟೇ ಅವಹೇಳನ ಮಾಡುತ್ತಿದ್ದರೂ ಸ್ವತಃ ಬಸವಣ್ಣನವರೇ ಕಾಯಕಕ್ಕೆ ಮಹತ್ವಕೊಟ್ಟಿದ್ದರಿಂದ ಈ ಕಸುಬನ್ನು ಮಾಡುತ್ತಲೇ ಬಂದಿದ್ದೇವೆ.
ಸಮಾನತೆ ಮತ್ತು ಸ್ಥಾನಮಾನ ಎಂಬುದನ್ನು ಕಾಣದವರು ನಾವು. ಹೀಗಾಗಿ ಮುಂದುವರೆದವರ ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿ ಬಾಳಿ ಬದುಕುತ್ತಿದ್ದೇವೆ.
ಲಿಂಗಾಯತರು ಎಂಬ ಹಣೆಪಟ್ಟಿಯಿಂದ ಸರ್ಕಾರದ ಅಧಿಕಾರಿಗಳು ನಮ್ಮನ್ನೂ ಮುಂದುವರೆದವರು ಎಂದು ತಪ್ಪುಗ್ರಹಿಕೆಯಿಂದ ೨೦೦೨ರ ಮೀಸಲಾತಿ ಆದೇಶದಲ್ಲಿ ನಮ್ಮನ್ನು ಪ್ರವರ್ಗ-೩ಬಿ ದಲ್ಲಿ ಸೇರಿಸಿದ್ದಾರೆ. ಯಾರದೋ ಒತ್ತಡದಿಂದಾಗಿ ನಮ್ಮ ಮುಗ್ದ ಹಾಗೂ ಅವಿದ್ಯಾವಂತರಾದ ಆಗಿನ ಹಿರಿಯರು ಇದನ್ನು ಒಪ್ಪಿಕೊಂಡರು.
ಇದರಿಂದ ಸಾಮಾಜಿಕ ಸ್ಥಾನಮಾನದಿಂದ ವಂಚಿತರಾದ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಔಧ್ಯೋಗಿಕವಾಗಿ ತುಂಬಾ ಹಿಂದುಳಿಯುವಂತಾಗಿದೆ.
ಲಿಂಗಾಯತ ಎಂದರೆ ಅದು ಒಂದು ಧರ್ಮ ವಿನಹ ಜಾತಿ ಅಲ್ಲ.
ಜಾತಿಗಳು ಹುಟ್ಟಿದ್ದು ಕುಲಕಸುಬು ಆಧಾರದ ಮೇಲೆ ವಿನಹ ಧರ್ಮದಿಂದ ಅಲ್ಲ. ಉದಾ: ಬಡಿಗೇರ, ಕಮ್ಮಾರ, ಕುಂಬಾರ, ಈಡಿಗ, ಅಂಬಿಗೇರ, ಚಮ್ಮಾರ, ಕ್ಷೌರಿಕ ಇತ್ಯಾದಿ ಲಿಂಗಾಯತರಲ್ಲಿ ಎಲ್ಲರೂ ಮುಂದುವರೆದವರು ಇರುವದಿಲ್ಲ. ನಾವು ಲಿಂಗಾಯತರು ಎಂದಾಕ್ಷಣ ಯಾರಿಗೂ ನಾವು ಲಿಂಗವನ್ನು ಕಟ್ಟುವ ಕಾಯಕ ಮಾಡುವುದಿಲ್ಲ.
ವೃತ್ತಿಯಲ್ಲಿ ನಾವು ಕ್ಷೌರಿಕರು ಇದು ಲೋಕಸತ್ಯ ಕ್ಷೌರಿಕರು ಎಂದಾದರೂ ಮುಂದುವರೆದ ಜನಾಂಗವಾಗುತ್ತಿದೆಯೆ ಎಂಬುದನ್ನು ಘನ ಸರ್ಕಾರ ಈಗಲಾದರೂ ಪರಿಗಣಿಸಬೇಕು.
ಹಲವಾರು ವರ್ಷಗಳಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸುತ್ತ, ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ನಮಗೆ ನ್ಯಾಯ ದೊರಕಿಲ್ಲ. ಇನ್ನಾದರೂ ನ್ಯಾಯ ದೊರಕೀತೆ ?