ಬಸವಕಲ್ಯಾಣ
ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ ೨೨ ರವಿವಾರ ಸಾಯಂಕಾಲ ೫-೩೦ ಗಂಟೆಗೆ ಶರಣು ಶರಣಾರ್ಥಿ ಸಮಾವೇಶ, ಪೂಜ್ಯ ಶ್ರೀ ಡ. ಚನ್ನಬಸವ ಪಟ್ಟದ್ದೇವರ ಜಯಂತಿ ಹಾಗೂ ೨೦೨೫ ರ ದಿನದರ್ಶಿಕೆ ಬಿಡುಗಡೆ ಹಮ್ಮಿಕೊಳ್ಳಲಾಗಿದೆ.
ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ದಿವ್ಯ ಸಾನಿಧ್ಯದಲ್ಲಿ ಸಂಡೂರು ಪ್ರಭುದೇವ ಸಂಸ್ಥಾನ ಮಠದ ಪೂಜ್ಯರಾದ ಮ.ನಿ.ಪ್ರ. ಪ್ರಭುಸ್ವಾಮಿಗಳು ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ರವೀಂದ್ರನಾಥ ಅನುಭಾವ ನೀಡುವರು. ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕೆಪಿಸಿಸಿ ಸದಸ್ಯ ಬಾಬುರಾವ ತುಂಬಾ ದಿನದರ್ಶಿಕೆ ಬಿಡುಗಡೆ ಮಾಡಲಿದ್ದಾರೆ. ಮುಖಂಡರಾದ ಸುರೇಶ ಸೀಗಿ, ಶರಣಪ್ಪಾ ಪಾಟೀಲ, ಎನ್‌ಎಸ್‌ಎಸ್‌ಕೆ ನಿರ್ದೇಶಕ ಶಿವಬಸಪ್ಪಾ ಚನ್ನಮಲ್ಲೆ, ಹುಲಸೂರು ಬಸವಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ಸಂದೀಪ ಜಾಧವ, ಅನಿತಾ ಇಸ್ಲಾಪೂರೆ, ವಿಮಲಾಬಾಯಿ ವಾಘ್ಮಾರೆ ಸೇರಿದಂತೆ ಇತರರು ಉಪಸ್ಥಿತರಿರುವರು. ರೇವಪ್ಪಾ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಡಲಿದ್ದಾರೆ. ಆದ್ದರಿಂದ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.