ತುಮಕೂರು
ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಡಿಸೆಂಬರ್ 29ರಂದು ಯಡಿಯೂರಿನಲ್ಲಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣ ಸಾಹಿತಿ ರಂಜಾನ್ ದರ್ಗಾ ಆಯ್ಕೆಯಾಗಿದ್ದಾರೆ. ೧೦ ಗಂಟೆ ಮುಂಜಾನೆ, ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಆಳಂದಿನ ತೋಂಟದಾರ್ಯ ಅನುಭವ ಮಂಟಪದ ಕೊರ್ಣೇಶ್ವರಸ್ವಾಮಿ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ ಮಾಡಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಬಿ.ಸಿ. ಶೈಲಾ ನಾಗರಾಜ ವಹಿಸಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ರಂಜಾನ್ ದರ್ಗಾ ಅವರಿಂದ ಭಾಷಣ ನಡೆಯಲಿದೆ. ನಂತರ ಶರಣ ಸಂಕುಲ ರತ್ನ ರಾಷ್ಟ್ರೀಯ ಪುರಸ್ಕಾರ ಪ್ರದಾನ ನಡೆಯಲಿದೆ.
ಮಧ್ಯಾಹ್ನ ೦೨ ಗಂಟೆಗೆ ವಚನ ಚಿಂತನಾಗೋಷ್ಠಿಗಳು ನಡೆಯಲಿದ್ದು, ಸಾನಿಧ್ಯವನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿ, ಬೆಟ್ಟಹಳ್ಳಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ವಿಜಯಕುಮಾರ ತುಮಕೂರು ವಹಿಸಲಿದ್ದಾರೆ.
ವರ್ತಮಾನದ ತಲ್ಲಣಗಳು ಮತ್ತು ಶರಣ ಸಂಸ್ಕೃತಿಯ ಅನಿವಾರ್ಯತೆ ಕುರಿತು ಡಾ. ಚಿಕ್ಕ ಹೆಜ್ಜಾಜಿ ಮಹಾದೇವ ಅವರು, ಎ. ಎ. ದರ್ಗಾ ಅವರು ಮಾನವೀಯ ಮೌಲ್ಯಗಳು ಮತ್ತು ಶರಣ ಸಂಸ್ಕೃತಿ ಕುರಿತು, ರೇಖಾ ಪ್ರಕಾಶ ಅವರು ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸರ್ವಾಧ್ಯಕ್ಷರಾದ ರಂಜಾನ್ ದರ್ಗಾ ಅವರು ಸಮ್ಮೇಳನದ ನುಡಿಗಳನ್ನು ಆಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಹಸೀನಾ ಎಚ್.ಕೆ, ಶಿವಲೀಲಾ ಹುಣಸಿಗಿ, ಲಕ್ಷ್ಮೀ ಸಿ.ಎಚ್. ಉಪಸ್ಥಿತರಿರಲಿದ್ದಾರೆ.
ನಂತರ ವಿವಿಧ ಕವಿಗಳಿಂದ ವಚನ ನಿರ್ವಚನ ನಡೆಯಲಿದೆ. ಕೊನೆಗೆ ತಿಪಟೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಚನ ರೂಪಕ ಹಮ್ಮಿಕೊಳ್ಳಲಾಗಿದೆ.