ಮಹಿಳೆಯರನ್ನು ಶರಣರು, ಹಿಂದುತ್ವವಾದಿಗಳು ನೋಡುವ ರೀತಿ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಬಿ. ಚನ್ನಪ್ಪ

ನಮ್ಮ ಶರಣರು ಎಲ್ಲಾ ಮಹಿಳೆಯನ್ನು ‘ಅಕ್ಕ’ ‘ಅವ್ವ’ ಎಂದೇ ಕರೆದರು. ವೇಶ್ಯೆಯರನ್ನು, ದಾಸಿಯರನ್ನು ಕೂಡ ‘ಶರಣೆ’ ಎಂದರು.

ಸನಾತನ ಹಿಂದುತ್ವದ ವಾದಿಗಳು ತಮ್ಮ ದೇವತೆಗಳಿಗೆ, ನದಿಗಳಿಗೆ ಹೆಣ್ಣಿನ ಹೆಸರಿಟ್ಟು ಗೌರವದಿಂದ ನಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ನಿಜ ಜೀವನದಲ್ಲಿ ಇವರು ನುಡಿದಂತೆ ನಡೆಯುತ್ತಾರೆಯೇ?

ಬಿಜೆಪಿ ನಾಯಕ ಸಿ.ಟಿ. ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಅಶ್ಲೀಲ ಪದ ಬಳಸಿ ಒಂದು ರಾತ್ರಿ ಪೊಲೀಸ್ ಅತಿಥಿಯಾಗಿದ್ದರು. ಅದನ್ನು ಬಿಜೆಪಿಯ ಯಾರಾದರೂ ನಾಯಕರು ಖಂಡಿಸಿದ್ದಾರೆಯೇ?

ಸಿ.ಟಿ.ರವಿ ಬಿಡುಗಡೆಯಾದ ಮೇಲೆ ಅವರ ಮನೆ ಮುಂದೆ ಕೇಕೆ ಹಾಕುತ್ತ ಮಹಿಳೆಯರು
ಕುಣಿದರು. ಈ ಕುಣಿತದ ಅರ್ಥವೇನು? ಈ ವರ್ತನೆ ಇಡೀ ಹೆಣ್ಣಿನ ಕುಲಕ್ಕೆ ಅವಮಾನ ಮಾಡಿದಂತೆ ಅಲ್ಲವೇ?

ಹಿಂದುತ್ವವಾದಿಗಳು ಮಹಿಳೆಯರನ್ನು ಗೌರವಿಸುತ್ತೇವೆ ಅನ್ನುವ ಮಾತು ಬರೀ ಬೂಟಾಟಿಕೆ ಅಲ್ಲವೇ? ಅವರು ನಿಜವಾಗಿಯೂ ಮಹಿಳೆಯರನ್ನು ತುಚ್ಛವಾಗಿ ನೋಡುತ್ತಾರೆ ಎಂದು ಇದನ್ನೆಲ್ಲ ನೋಡಿದರೆ ಅನಿಸುದಿಲ್ಲವೇ.

ಸಿ.ಟಿ.ರವಿ ವಿರುದ್ಧ ಮಹಿಳಾ, ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿವೆ. ಆದರೆ ಲಿಂಗಾಯತ ರಾಜಕೀಯ ನಾಯಕರು, ಸ್ವಾಮೀಜಿಗಳ ಮೌನಕ್ಕೆ ಕಾರಣವೇನು? ನಮ್ಮ ಸಮುದಾಯದ ಒಬ್ಬ ಪ್ರಮುಖ ಹೆಣ್ಣು ಮಗಳ ಮೇಲೆ ಈ ರೀತಿ ಕೆಟ್ಟ ದಾಳಿ ನಡೆದಿರುವುದು ಜನಸಾಮಾನ್ಯರನ್ನು ಸಿಟ್ಟಾಗಿಸಿದೆ. ಆದರೆ ಇವರೆಲ್ಲಾ ಯಾಕೆ ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿಯಿದ್ದೂ ಕಿವುಡರಾಗಿದ್ದಾರೆ.

Share This Article
2 Comments
  • ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ.
    ಹಾಗೆಯೂ .
    ನೆರಮನೆ ದುಃಖ ಕ್ ನೀವೇಕ್ ಆಳ್ಲ್ ವಿರಿ.

    ನೀವುಗಳು ಬಸವಾದಿ ಶರಣರ ಅನುಯಾಯಿ ಗಳು./
    ಕಾಂಗ್ರೇಸ್ ಹೂಗಳ ಭಟರು..ನಿಮ್ಮ ನಿಮ್ಮ ಮನವ ಕೇಳಿ ಕೋಳೀ

    • ಹಾಗಾದರೆ ನಿಂಮ್ಮ ನೆರೆಮನೆ ಜನ ನಮ್ಮ ಮೇಲೆ ಬೇಕಾದ್ದು ಮಾತಾಡಬಹುದು. ಅದನ್ನು ನಾವು ಕೇಳಬಾರದು. ಇಲ್ಲೂ ಪಕ್ಷ ಹುಡುಕೋ ನೀವೆಂತಾ ಭಟ್ಟರು

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು