ದಾವಣಗೆರೆಯಲ್ಲಿ ಎರಡು ದಿನಗಳ ಲಿಂಗಾಯತ ಧರ್ಮ ಅಧ್ಯಯನ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಡಿಸೆಂಬರ್ 28, 29 ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು 94497 29838, 9945439171 ಮೊಬೈಲ್ ನಂಬರುಗಳನ್ನು ಸಂಪರ್ಕಿಸಬಹುದು

ದಾವಣಗೆರೆ

ನಗರದ ಹರಿಹರ ಬೈಪಾಸ್ ರಸ್ತೆಯಲ್ಲಿರುವ ಪ್ರೊ. ಬಿ. ಕೃಷ್ಣಪ್ಪ ಮೆಮೋರಿಯಲ್ ಹಾಲ್ ನಲ್ಲಿ
ಎರಡು ದಿನಗಳ ‘ಲಿಂಗಾಯತ ಧರ್ಮ ಅಧ್ಯಯನ ಶಿಬಿರ’ ಡಿಸೆಂಬರ್ 28 ಹಾಗೂ 29 ಬೆಳಿಗ್ಗೆ
ನಡೆಯಲಿದೆ.

ಲಿಂಗಾಯತ ಧರ್ಮದ ಇತಿಹಾಸ ಸಿದ್ಧಾಂತ ಹಾಗೂ ಸಂಘಟನೆ ಕುರಿತು ವಿಜಯಪುರದ ಶರಣ ಚಿಂತಕ ಡಾ. ಜೆ. ಎಸ್. ಪಾಟೀಲ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.

ಶಿಬಿರಾರ್ಥಿಗಳಿಗೆ ಉಪಹಾರ, ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಇಚ್ಛಿಸುವವರು 94497 29838, 9945439171 ಮೊ. ನಂಬರುಗಳಿಗೆ ಸಂಪರ್ಕಿಸಲು ದಾವಣಗೆರೆ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ರುದ್ರಗೌಡ ಗೋಪನಾಳ ಹಾಗೂ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಹೆಮ್ಮನಬೇತೂರು ಅವರು ಕೋರಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲೂಕು ಘಟಕ, ಮಾನವ ಬಂಧುತ್ವ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ, ದಾವಣಗೆರೆ, ಇವರುಗಳ ಇವರುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

Share This Article
2 Comments
  • ಬಹಳ ಮಹತ್ವವಾದ ಕಾರ್ಯಕ್ರಮ ಇದು ..ಇಂತಹ ಕಾರ್ಯಕ್ರಮಗಳಿಂದ ಲಿಂಗಾಯತ ಸಿದ್ದಾಂತದ ಅರಿವು ಮೂಡಿಸುವ ಕಾರ್ಯ ಹಲವು ವರ್ಷಗಳಿಂದಲೇ ಆಗಬೇಕಿತ್ತು ಆದರೆ ಈಗಲಾದರೂ ಅರಿತ ಜ್ಞಾನಿಗಳಿಂದ ಆಗುತ್ತಿರುವುದು ಸಂತೋಷದ ವಿಷಯ. ಆಯೋಜಕರು ಹಾಗು ಉಪನ್ಯಾಸ ನೀಡುವ ಸಂಪನ್ಮೂಲರಿಗೆ ಅನಂತ ಶರಣ

    • ಉತ್ತಮವಾದ ಕಾರ್ಯ ಇಂಥ ಕಾರ್ಯಕ್ರಮಗಳು ಪ್ರತಿ ಜಿಲ್ಲೆಯಲ್ಲಿ
      ಆಗಬೇಕು ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ
      ಯುವಕರು ಭಾಗವಹಿಸುವಂತೆ ಪ್ರಯತ್ನಿಸಿ.

Leave a Reply

Your email address will not be published. Required fields are marked *