ಹುಬ್ಬಳ್ಳಿ
ಶ್ರೀ ಗುರು ಬಸವ ಮಂಟಪ ಟ್ರಸ್ಟ್ ಕಮಿಟಿ ಸಭಾಭವನದಲ್ಲಿ ಶರಣೆ ಚಿನ್ನಮ್ಮತಾಯಿ ಪಾಟೀಲ ಸ್ಮರಣಾರ್ಥ ದತ್ತಿ ಅನುಭಾವ ಗೋಷ್ಟಿ ಹಾಗೂ ಮೈಲಾರ ಬಸವಲಿಂಗ ಶರಣರ ‘ಗುರು ಕರುಣ ತ್ರಿವಿಧಿ’ ಕಿರು ಪುಸ್ತಕದ ಲೋಕಾರ್ಪಣೆ ನೆರೆವೇರಿತು.
ಶರಣ ಶ್ರೀ ಮೃತ್ಯುಂಜಯ ಜಡಿಮಠ, ಶಿಕ್ಷಣ ಸಂಯೋಜನಾಧಿಕಾರಿಗಳು ಹುಬ್ಬಳ್ಳಿ ಇವರು ಅನುಭವ ನೀಡುತ್ತಾ, ಅಡುಗೆ ಮಾಡುವಾಗಿನಿಂದ ಹಿಡಿದು ಅದನ್ನು ಸೇವಿಸುವವರೆಗೂ ನಾವು ಪ್ರಸಾದ ಎಂಬ ಭಾವನೆಯಿಂದ ಇದ್ದರೆ ಮಾತ್ರ ಅದು ಪ್ರಸಾದವಾಗುತ್ತದೆ ಎಂದರು.

ನಾವು ಹಾಳು ಹರಟೆಯಲ್ಲಿ ಸಮಯ ವ್ಯರ್ಥ ಮಾಡದೆ ಇಷ್ಟಲಿಂಗ ಪೂಜೆ ಕುರಿತು ತಮ್ಮತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ಆ ಬಗ್ಗೆ ಚರ್ಚಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶರಣೆ ಶಕುಂತಲಾ ಮನೋಹರ ಮೈದರಗಿ ಅವರು ಪ್ರಕಟಿಸಿದ ‘ಗುರು ಕರಣ ತ್ರಿವಿಧಿ’ ಕಿರುಗ್ರಂಥದ ಲೋಕಾರ್ಪಣೆಗೊಂಡಿತು.

ಸುವರ್ಣ ತಾಯಿ ಪಾಟೀಲ ಸ್ವಾಗತಿಸಿದರು. ವಚನ ಸುನಾದ ಸಂಗೀತ ಬಳಗದ ಶರಣರಿಂದ ವಚನ ಗಾಯನ ನೆರವೇರಿತು. ಶರಣೆ ರೇಖಾತಾಯಿ ನಾರಾ ಅವರು ಶರಣೆ ಚಿನ್ನಮ್ಮ ತಾಯಿ ಪಾಟೀಲ ಅವರು ಕುರಿತು
ಮಾತನಾಡಿದರು.
ದತ್ತಿ ದಾಸೋಹಿ ದಂಪತಿಗಳಾದ ಶರಣೆ ಸುವರ್ಣ ಮತ್ತು ಶರಣ ಗುರುಸಿದ್ದೇಶ ಪಾಟೀಲ ಅವರು ವೇದಿಕೆ ಮೇಲ್ಲಿದ್ದರು. ವಿ. ಎಸ್. ಲಿಗಾಡೆ ಅನುಭಾವಿಗಳು, ಗುರು ಬಸವ ಮಂಟಪ ಟ್ರಸ್ಟ್ ಇವರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಶಾರದಾ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಿಸಿದರು.
ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
