ಬೆಂಗಳೂರು
ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪನವರು ಲಿಂಗೈಕ್ಯರಾಗಿದ್ದಾರೆ.
ಸಿದ್ಧಗಂಗಾ ಮಠದ ಸ್ವಾತಂತ್ರ್ಯ ಪೂರ್ವದ ಅತ್ಯಂತ ಹಳೆಯ ವಿದ್ಯಾರ್ಥಿಗಳಾಗಿದ್ದ ಚನ್ನಬಸಪ್ಪನವರು ಪರಮಪೂಜ್ಯ ಗುರುದೇವರ ಆಪ್ತ ಶಿಷ್ಯರಾಗಿದ್ದರು. ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ದುಡಿದ್ದಿದ್ದರು. ಸಿದ್ಧಗಂಗಾ ಸಂಸ್ಥೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸಿದ್ದರು.
ಅವರ ಆತ್ಮಕ್ಕೆ ಚಿರ ಶಾಂತಿಯನ್ನು ದಯಾಮಯನಾದ ಭಗವಂತನು ಅನುಗ್ರಹಿಸಲಿ. ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ, ಅಪಾರ ಶಿಷ್ಯವೃಂದಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ, ಎಂದು ಅವರ ಆಪ್ತರು ಪ್ರಕಟಣೆ ನೀಡಿದ್ದಾರೆ.