ನಂಜನಗೂಡು
ಪಟ್ಟಣದ ಬಸವ ಅನುಯಾಯಿಗಳು ಮೊದಲ ಬಾರಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳ ಜೊತೆ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ಆಚರಿಸಿದರು.
ನಂಜನಗೂಡಿನ ಇಪ್ಪತ್ತನೇ ಕ್ರಾಸಿನಲ್ಲಿರುವ ನವೀನ್ ಬ್ರಾಂಡ್ ನ್ಯೂ ಬಟ್ಟೆ ಶೋ ರೂಂನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶರಣ ಸಂಘಗಳ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ್ ಶರಣ ಒಕ್ಕಲಿಗ ಮುದ್ದಣ್ಣನವರ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರಣ ಒಕ್ಕಲಿಗ ಮುದ್ದಣ್ಣನವರ ಕುರಿತು ಶರಣ ಸಂಘಗಳ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ್ ಮಾತನಾಡುತ್ತ, 12ನೇ ಶತಮಾನದಲ್ಲಿ ಒಕ್ಕಲುತನ ಮಾಡಿಕೊಂಡು ಶರಣತ್ವವನ್ನು ಏರಿದ ಮುದ್ದಣ್ಣನವರ ಕಾಯಕ ನಿಷ್ಠೆ, ಆಧ್ಯಾತ್ಮಿಕ ಚಿಂತನೆ ಬಗ್ಗೆ ವಿವರವಾಗಿ ಮಾತನಾಡಿದರು.
ಒಕ್ಕಲಿಗ ಮುದ್ದಣ್ಣನವರ ಸುಮಾರು 12 ವಚನಗಳು ಸದ್ಯ ಸಿಕ್ಕಿದ್ದು , ಅವುಗಳೆಲ್ಲವೂ ಒಕ್ಕಲುತನದ ಕಾಯಕದಲ್ಲಿಯೇ ಸರ್ವಸ್ವವನ್ನು ಕಾಣಬಹುದೆಂದು ಹೇಳಿರುವ ವಚನಗಳಾಗಿವೆ. ಮುದ್ದಣ್ಣನವರು ಮಹಾನ್ ಶರಣರು, ಕಾಯಕ ಜೀವಿಗಳು ಆಗಿದ್ದರೆಂದು ಬಸವ ಯೋಗೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ಬಟ್ಟೆ ಶೋ ರೂಮಿನ ಮಾಲೀಕರಾದ ನವೀನ್ ಕುಮಾರ್ ಮತ್ತು ಒಕ್ಕಲಿಗರ ಸಮುದಾಯದ ಮುಖಂಡರುಗಳಾದ ಪತ್ರಕರ್ತರಾದ ಹುಲ್ಲಹಳ್ಳಿ ಮೋಹನ್ ಮತ್ತು ಕೆಂಪೇಗೌಡರು, ಯುವ ಡಾಟ್ ಕಾಮ್ ಉಮೇಶ್, ಒಕ್ಕಲಿಗರ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಿರ್ದೇಶಕರಾದ ಗೋಪಾಲ್, ಸತೀಶ್, ಹಾಗೂ ಕಾಯಕಯೋಗಿ ಸಂಘಟನೆಯ ಮುದ್ದಳ್ಳಿ ಅಶೋಕ್ ಕುಮಾರ್, ಕೆರೆಹುಂಡಿ ನಂಜುಡುಸ್ವಾಮಿ, ನೀಲಕಂಠೇಶ್ವರ ಶಾಲೆಯ ಕಾರ್ಯದರ್ಶಿ ಕುಮಾರ್ ಹಾಗೂ ಶಿಕ್ಷಕರಾದ ಕುಮಾರಸ್ವಾಮಿ, ಇಮ್ಮಾವು ಗ್ರಾಮದ ಜಿ ವೆಂಕಟೇಶ್, ಗುರುಸ್ವಾಮಿ, ಗಿರಿರಾಜು, ಕಿಶೋರ್ ತಿರುಮಲೇಶ ಗೌಡ, ಕೃಷ್ಣಾಪುರ ಗುರುಸ್ವಾಮಿ ಭಾಗವಹಿಸಿದ್ದರು.
ಬಸವಣ್ಣ ಬೆಳಕು ಜಗದಗಲಕ್ಕೆ ಪಸರಿಸುತ್ತಿದೆ. ಎಲ್ಲ ವರ್ಗದ ಮನ ಮತ್ತು ಮನೆಗೆ ಬಸವ ಬೆಳಗು ತಲುಪುತ್ತಿದೆ. ಕಾರ್ಯಕ್ರಮ ಆಯೋಜಕರಿಗೆ ಕೋಟಿ ಶರಣು