ಬಾಗಲಕೋಟೆ
ಪ್ರವಚನ ಪಿತಾಮಹಾ ಲಿಂಗಾನಂದ ಸ್ವಾಮೀಜಿ ಸ್ಮರಣಾರ್ಥ ರಾಷ್ಟ್ರಮಟ್ಟದ ‘ಸ್ವಾಮಿ ಲಿಂಗಾನಂದಶ್ರೀ’ ಪ್ರಶಸ್ತಿಗೆ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
‘ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನದ ಮೂರನೇ ದಿನ ಜನವರಿ 14ರ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿಜಯಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.
ಕಲಬುರಗಿಯ ಕ್ಯಾನ್ಸರ್ ಚಿಕಿತ್ಸಾ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ‘ಬಸವಾತ್ಮಜೆ’ ರಾಷ್ಟ್ರೀಯ ಪ್ರಶಸ್ತಿಯನ್ನು ₹50 ಸಾವಿರ ನಗದು, ಫಲಕಗಳೊಂದಿಗೆ ವಿತರಿಸಲಾಗುವುದು.
‘ಕೂಡಲಸಂಗಮದ ಹಿರಿಯ ಸಹಕಾರಿ ಧುರೀಣ ಎಲ್.ಎಂ. ಪಾಟೀಲರಿಗೆ ರಾಜ್ಯಮಟ್ಟದ ದಾಸೋಹ ರತ್ನ, ಬೆಂಗಳೂರು ರಾಷ್ಟ್ರೀಯ ಬಸವ ದಳದ ದೇವಿಕಾ ಶರಣಪ್ಪರಿಗೆ ಸೇವಾರತ್ನ, ಗೋಕಾಕದ ಕಮಲಕ್ಕ ಚೌಧರಿಗೆ ಶರಣ ರತ್ನ, ಬೀದರ್‌ನ ಸುರೇಶ ಸ್ವಾಮಿಗೆ ಸಂಸ್ಕಾರ ರತ್ನ, ಕೊಪ್ಪಳದ ಬಸವನಗೌಡ ಪಾಟೀಲರಿಗೆ ಸೇವಾ ರತ್ನ, ಚಿತ್ರದುರ್ಗದ ರೈತ ಮುಖಂಡ ಬಸವರಡ್ಡಿಗೆ ಒಕ್ಕಲಿಗ ಮುದ್ದಣ್ಣನ ಸ್ಮರಣಾರ್ಥ ರಾಷ್ಟ್ರಮಟ್ಟದ ಪ್ರಮುಖ ಪ್ರಜೆ, ಬಸವ ಯೋಗೇಶರಿಗೆ ಕಾಯಕ ಕಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.