ಮೈಸೂರು
ಬಸವ ಇಂಟರ್ನ್ಯಾಷನಲ್ ಫೌಂಡೇಶನ್ ಸ್ಥಾಪಕ ಮಹಾದೇವಯ್ಯ ಮತ್ತು ಸಾಹಿತಿ ಡಾಕ್ಟರ್ ಎಂ ಎಸ್ ವೇದಾ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ವತಿಯಿಂದ ಡಾ. ಶಕುಂತಲಾ ಜಯದೇವ ಶರಣ ಪ್ರಶಸ್ತಿಯನ್ನು ಗುರುವಾರ ನೀಡಲಾಯಿತು.
ಪ್ರಶಸ್ತಿ ಪ್ರಧಾನ ವನ್ನು ಪರಮಪೂಜ್ಯ ಸುತ್ತೂರು ಶ್ರೀಗಳು ನೆರವೇರಿಸಿ ಡಾಕ್ಟರ್ ಶಕುಂತಲಾ ಜಯದೇವಿ ಯವರು ಅವರ ಉದಾರ ಮನಸ್ಸಿನಿಂದಾಗಿ ಸಿದ್ದಗಂಗಾ ಮಠ ಸೇರಿದಂತೆ ಅನೇಕ ಕಡೆ ಈ ರೀತಿಯ ಪ್ರಶಸ್ತಿಗಳನ್ನು, ದತ್ತಿ, ದಾಸೋಹ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಇವರ ಮಗ ಮಹಾದೇವಯ್ಯನವರು ಇಂಗ್ಲೆಂಡಿನಲ್ಲಿದ್ದು ಈಗ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.

ಮಹಾದೇವಯ್ಯನವರು ಬಸವ ಇಂಟರ್ನ್ಯಾಷನಲ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಇದರ ಮೊದಲ ಕಾರ್ಯದರ್ಶಿಯಾಗಿ ಪ್ರೊಫೆಸರ್ ಸಿದ್ದಣ್ಣ ಲಂಗೋಟಿಯವರು ಕಾರ್ಯನಿರ್ವಹಿಸಿದರು. ಮಹದೇವಯ್ಯನವರು ಕಲ್ಬುರ್ಗಿಯವರ ಮತ್ತು ಬೇರೆ ಬೇರೆ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ, ಎಂದರು.
ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಎಂ ಎಸ್ ವೇದಾ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿ ಬೆಂಗಳೂರು ಇವರು ತಮ್ಮನುಡಿಗಳಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳುವಾಗ ಒಂದು ರೀತಿಯಾದ ತಲ್ಲಣ ಉಂಟಾಯಿತು ಯಾಕೆಂದರೆ ಪ್ರಶಸ್ತಿಯಲ್ಲಿ ಶರಣ ಎನ್ನುವ ಪದ ಇದೆ. ಶರಣ ಎನ್ನುವ ಪದಕ್ಕೆ ಅದರದೇ ಆದ ತೂಕ ಇದೆ. 12ನೇ ಶತಮಾನದಿಂದ ಬಂದ ಈ ಶರಣ ಪದ ತುಂಬಾ ಉನ್ನತವಾದದ್ದು.

ರಾಜರಾಜೇಶ್ವರಿ ಅಕ್ಕನ ಬಳಗ ಮೈಸೂರು ವಚನ ಗಾಯನ ನೆರವೇರಿಸಿದರು. ಸುದರ್ಶನ, ಶ್ರೀಮತಿ ಮೀನಾ ಮತ್ತು ಕುಸುಮ ರವರು ವಚನ ಪ್ರಾರ್ಥನೆ ಮಾಡಿದರು. ಮ. ಗು ಸದಾನಂದಯ್ಯ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಮೈಸೂರು ಘಟಕ ಇವರು ಸ್ವಾಗತವನ್ನು, ಸೋಮಶೇಖರ್ ಗಾಂಜಿ ಪ್ರಧಾನ ಕಾರ್ಯದರ್ಶಿ ಆ ಭಾ ಶ ಸಾ ಪ ಇವರು ವಂದನಾರ್ಪಣೆಯನ್ನು ಮಾಡಿದರು.
ಶ್ರೀಮತಿ ಶೈಲಜಾ ಗುರುಸ್ವಾಮಿಯವರು ನಿರೂಪಣೆಯನ್ನು ಮಾಡಿದರು.