“ವೀರಶೈವರು ಸನಾತನ ಧರ್ಮದವರು ಅಂತ ಅವರನ್ನು ದೂರ ಮಾಡಿ ವ್ಯವಸ್ಥಿತವಾಗಿ ಧರ್ಮ ಒಡೆಯುವ ಕೆಲಸ ‘ಕಟ್ಟರ್ ಲಿಂಗಾಯತರು’ ಮಾಡುತ್ತಿದ್ದಾರೆ”
ತುಂಗಳ (ಜಮಖಂಡಿ)
ಭಾರತದಲ್ಲಿ ಒಂದು ‘ಕಟ್ಟರ್ ಜನಾಂಗ’ ಇರುವಂತೆ ಲಿಂಗಾಯತ ಸಮಾಜದಲ್ಲೂ ಪಂಚಪೀಠದವರನ್ನು ವಿರೋಧ ಮಾಡುವ ಒಂದು ‘ಕಟ್ಟರ್’ ಗುಂಪು ತಯಾರಾಗಿದೆ.
‘ವೀರಶೈವರು ಸನಾತನ ಧರ್ಮದವರು’ ಅಂತ ಅವರನ್ನು ದೂರ ಮಾಡಿ ವ್ಯವಸ್ಥಿತವಾಗಿ ಧರ್ಮ ಒಡೆಯುವ ಕೆಲಸ ‘ಕಟ್ಟರ್ ಲಿಂಗಾಯತರು’ ಮಾಡುತ್ತಿದ್ದಾರೆ, ಎಂದು ಬಸನಗೌಡ ಪಾಟೀಲ ಯತ್ನಾಳ ಆಪಾದಿಸಿದರು.
ತುಂಗಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣನವರ ನೂತನ ಪುತ್ಥಳಿ ಅನಾವರಣ ಜೊತೆಗೆ ಶ್ರೀಶೈಲ ಪಂಚಾಚಾರ್ಯ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆಯ ಧರ್ಮಸಭೆಯಲ್ಲಿ ಯತ್ನಾಳ ಮಾತನಾಡಿದರು.
ಪಂಚಪೀಠದವರನ್ನು ಬೈಯುವುದು ಒಂದು ಪ್ಯಾಶನ್ ಆಗೈತಿ, ಆದರೆ ಮೂಲತಃ ನಾವೆಲ್ಲರು ಪಂಚಪೀಠದ ಭಕ್ತರೇ. ಬಸವಣ್ಣವರು ನಮ್ಮ ಧರ್ಮದ ಸುಧಾರಕರು. ವೀರಶೈವರು ಲಿಂಗಾಯತರು ಒಂದೇ ರೀತಿ ವಿಭೂತಿ ಹಚ್ಚಿಕೊಳ್ಳುತ್ತೇವೆ, ಒಂದೇ ರೀತಿ ಲಿಂಗ ಹಿಡಿಯುತ್ತೇವೆ, ನಾವೆಲ್ಲಾ ಒಂದೇ ಎಂದು ಹೇಳಿದರು.
ನೀವು ಬೇಕಾದರೆ ಬಸವಣ್ಣನವರನ್ನ ಪೂಜೆ ಮಾಡ್ರಿ ಅಥವಾ ಬೇಕಾದರೆ ಅಡ್ಡಪಲ್ಲಕ್ಕಿ ಹೊತ್ತಕೊಂಡ್ ಹೋಗಿ. ನಿಮ್ಮನ್ನ ಅಡ್ಡಪಲ್ಲಕ್ಕಿ ಹೊರಲಿಕ್ಕೆ ಯಾರೂ ಬಲವಂತ ಮಾಡ್ತಿಲ್ಲ. ಒಬ್ಬರೊನ್ನಬ್ಬರು ಪ್ರಶ್ನೆ, ಟೀಕೆ ಮಾಡದೆ ವೀರಶೈವ ಲಿಂಗಾಯತ ಎಂದು ಒಂದಾಗಿರಿ, ಎಂದು ಯತ್ನಾಳ್ ಹೇಳಿದರು.
ವೀರಶೈವ-ಲಿಂಗಾಯತ ಮತ್ತು ಸನಾತನ ಧರ್ಮದ ಎಲ್ಲಾ ಸಮಾಜಗಳು ಒಂದಾಗದಿದ್ದರೆ ಭಾರತದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ನಮ್ಮ ದೇಶ ಉಳಿಯಬೇಕೆಂದರೆ ಸನಾತನ ಧರ್ಮ ಉಳಿಯಬೇಕು. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕೆಂದರೆ ಸನಾತನ ಧರ್ಮ ಜೀವಂತ ಇರಬೇಕು. ಅದು ಜೀವಂತ ಇದ್ದರೆ ಮಾತ್ರ ಸಂವಿಧಾನ ಇರುತ್ತದೆ.
ಬಸವಣ್ಣ ಏನಾದರೂ ಹಿಂದು ಧರ್ಮಕ್ಕೇ ಬೈದಾರ ಏನ್ರೀ ಎಂದು ಯತ್ನಾಳ್ ಪ್ರಶ್ನಿಸಿದರು.
ಮೂಢನಂಬಿಕೆ ಬಗ್ಗೆ ಅವರು ಮಾತಾಡಿದ್ದಾರೆ. ನಮ್ಮಲ್ಲಿ ಕೆಲವು ಮೂಢನಂಬಿಕೆಗಳು ಹೋಗಬೇಕು, ಜಾತಿ ಜಾತಿ ಮಧ್ಯದ ಕಂದಕ ಹೋಗಬೇಕು. ಬಸವಣ್ಣವರ ಆದ್ರೂ ಅಂಬೇಡ್ಕರ್ ಅವರ ಆದ್ರೂ ಹಿಂದು ಧರ್ಮಕ್ಕ ಬೈದಿಲ್ಲ, ಎಂದು ಯತ್ನಾಳ್ ಹೇಳಿದರು.
ತುಂಗಳ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಶೈಲ ಪಂಚಾಚಾರ್ಯ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳೂ ಕೂಡ ಲಿಂಗಾಯತರ ಮತ್ತು ವೀರಶೈವರ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದರು.
ಸನಾತನಿ ಪಾದ ಮೂಡಿಸುವ ನಸುಗುನ್ನಿ ಇವನು ನಾಚಿಕೆಯಿಲ್ಲದೆ ಪುಡಾರಿ ವ್ಯಕ್ತಿ
ಇತನ ಬಾಯಿಂದ ಮಾತನಾಡಿಸುವ ಸನಾತನ
ಕುತಂತ್ರ ಇದು . ಲಿಂಗಾಯತರು ಇನ್ನೂ ಗಟ್ಟಿಯಾಗಿ
ಸ್ವತಂತ್ರ ವಾಗಿ ಈ ಕುತಂತ್ರ ಬೇಧಿಸಬೇಕು .
ಕಾಂಗ್ರೇಸ್ ಮತ್ತು ಬಿ ಜೆ.ಪಿ ಪಕ್ಷ ಎರಡು ಒಂದೇ? ನೀವು ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪುತ್ತೀರ?
ಪಂಚಪೀಠದವರು ಬಸವ ತತ್ವ ಒಪ್ಪಿ ಆಚರಿಸುತ್ತಾರ.?
ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಯತ್ನಾಳ್ ಅವರು ಮೆದುಳಿನ ಮೇಲೆ ನಿಯಂತ್ರಣ ಕಳೆದುಕೊಂಡಿರಬಹುದು
ಇವನೊಬ್ಬ ಅರೆಹುಚ್ಚ ಯಾವ ವಿಚಾರಗಳೂ ಇವನಿಗೆ ಸ್ಪಷ್ಟವಾಗಿ ಗೊತ್ತಿಲ್ಲ
ಎಂಜಲದ ಆಸೆಗೆ ಹೀಗೆಲ್ಲ ಮಾತನಾಡುತ್ತಿದ್ದಾನೆ
ಬಸವಣ್ಣನವರ ಕಾಲದಲ್ಲಿ ಹಿಂದೂ ಇತ್ತಾ? ಸನಾತನ ಧಮ೯ದಲ್ಲಿ ತಾನು ಹುಟ್ಟಿರೋದಾದರೆ ಕೊರಳಲ್ಲಿ ಲಿಂಗದ ಬದಲು ಜನಿವಾರ ಯಾಕಿಲ್ಲಾ? ಈ ಅಜ್ಞಾನಿಗೆ ಈ ಎಲ್ಲಾ ಖಬರೈತಿ ,ಆದರೆ. ಬಿಜಾಪುರದಾಗ ಮಾತ್ರ ಹಿಂಗಾ ಹೆಳಬೆಕು ,ಬ್ಯಾರೆ ಕಡೆ ಹೆಳಬಾದು೯ ಅನ್ನೋ ಖಬರಾಯಿಲ್ಲಾ ಖಬರಗೆಡಿಗೆ.
ಆಯೋಜಕರು ಇಂತಹ ಹರಕಬಾಯಿ ಜನರನ್ನು ದೂರ ಇಟ್ಟು ಕಾರ್ಯಕ್ರಮ ನಿರೂಪಿಸಬೇಕು.
ಸುಮ್ಮೆನ್ನೆ ಮೈಮೇಲೆ ಎಳೆದುಕೊಂಡು ಇಂತಹ ಹೇಳಿಕೆ ಬೆಕಿತ್ತಾ,
ಲಿಂಗಾಯತ ಧರ್ಮದ ನಿಜಾಚರಣೆ ಗೊತ್ತಿಲ್ಲದ ಮನುಷ್ಯನನ್ನು ವೇದಿಕೆಗೆ ಇನ್ನೂ ಮೇಲೆ ಕರೆಯುವುದು ಬಿಡಬೇಕು.
ಅಂದು ಹಿಂದೂ ಇತ್ತಾ ಅನ್ನೊ ನಿಮಗ ಬಸವಣ್ಣನವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದರು ಅಂತ ಹೇಗೆ ಗೊತ್ತಾಯ್ತು? ಲಿಂಗದ ಬದಲು ಜನಿವಾರ ಯಾಕಿಲ್ಲ ಅನ್ನೊ ನಿಮಗೆ ಬಸವಣ್ಣನವರಿಗೆ ಜನಿವಾರಧಾರಣೆ ಮಾಡುವಾಗ ಅದನ್ನ ವಿರೋಧಿಸಿ ಮನೆ ಬಿಟ್ಟು ಬಂದಿದ್ದು ಓದಿಲ್ವಾ? ನೀವು ಮಾಡ್ತಾಯಿರೋದು ಟೂಲ್ ಕಿಟ್ಟಿನ ಒಂದು ಭಾಗವಾದ ಜಾತಿ ಒಡೆಯುವ ಕೆಲಸ ಅಷ್ಟೆ.
ಬಸವಣ್ಣನವರ ಅನುಯಾಯಿಗಳು ತನ್ನ ಸ್ವಾರ್ಥ ಸಾಧನೆಗಾಗಿ ಮನುವಾದಿಗಳ ಪ್ರಚಾರಕರಾಗಿ ಹುಟ್ಟಿದ ಲಿಂಗಾಯತ ಧರ್ಮಕ್ಕೇ ದ್ರೋಹ ಬಗೆಯುತ್ತಿರುವ ಕುಂಕುಮದಾರಿ ಬಸವನ ಗೌಡ ಪಾಟೀಲ್ ಯತ್ನಾಳ್ ಅವರನ್ನು ನೈಜ ಲಿಂಗಾಯತರು ರಾಜಕೀಯವಾಗಿ ಸೋಲಿಸಿ ಬುದ್ಧಿ ಕಲಿಸಬೇಕು. ಲಿಂಗಾಯತರು ಕಣ್ಣುಮುಚ್ಚಿಕೊಂಡು ಮನುವಾದಿಗಳ ಪರ ನಿಲ್ಲುವುದನ್ನು ಬಿಡಬೇಕು. ಬಸವ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ರನ್ನು ದೂರ ಇಡಬೇಕು.