ಸಿದ್ಧರಾಮರ ಜಯಂತಿಯಲ್ಲಿ ವೈದಿಕ ಮೌಢ್ಯಗಳ ದುರಂತ: ಡಾ. ಜೆ ಎಸ್ ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಸಿದ್ಧರಾಮರ ಜಾತ್ರೆಯ ಹೆಸರಿನಲ್ಲಿ ಯೋಗ ದಂಡಕ್ಕೆ ಮದುವೆˌ ಹೋಮ ಹವನ ಮಾಡುವುದು ಸಿದ್ಧರಾಮರ ತತ್ವಗಳಿಗೆ ವಿರುದ್ಧ ನಡೆ

ವಿಜಯಪುರ

ಹನ್ನೆರಡನೇ ಶತಮಾನದ ಶರಣ ಸಿದ್ಧರಾಮರ ಜಯಂತಿಯನ್ನು ಸಿದ್ದರಾಮರ ಮಂದಿರ ಪರಿಸರದ ಜಾತ್ರೆಯಲ್ಲಿ ಶರಣಪಡೆ ಹಾಗೂ ಲಿಂಗಾಯತ ಜಾಗರಣ ವೇದಿಕೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣ ಸಾಹಿತಿ ಡಾ. ಜೆ ಎಸ್ ಪಾಟೀಲ ಅವರು ಬಸವಯೋಗಿ ಶರಣ ಸಿದ್ಧರಾಮರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ವೈದಿಕ ಮೌಢ್ಯಗಳನ್ನುˌ ಹೋಮˌ ಹವನ ಮುಂತಾದ ಮೌಢ್ಯಾಚಾರಣೆಗಳನ್ನು ತಮ್ಮ ವಚನಗಳ ಮೂಲಕ ತೀಕ್ಷ್ಣವಾಗಿ ವಿರೋಧಿಸಿದ್ದರು. ಆದರೆ ಇಂದು ಸಿದ್ಧರಾಮರ ಜಯಂತಿಯನ್ನು ವೈದಿಕ ಮೌಢ್ಯಗಳ ಮೂಲಕ ಆಚರಿಸುತ್ತಿರುವುದು ದುರಂತದ ಸಂಗತಿ ಎಂದರು.

ಸಿದ್ಧರಾಮರ ಜಯಂತಿ ಹಾಗೂ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆಯು ಸಂಕ್ರಾಂತಿಯ ಪರ್ವಕಾಲದಲ್ಲಿ ಅವೈದಿಕ ಲಿಂಗಾಯತ ಧರ್ಮಿಯರು ಆಚರಿಸುತ್ತಾರೆ.

ಸಿದ್ಧರಾಮರ ಜಾತ್ರೆಯ ಹೆಸರಿನಲ್ಲಿ ಯೋಗ ದಂಡಕ್ಕೆ ಮದುವೆˌ ಹೋಮ ಹವನ ಮಾಡುವುದು ಸಿದ್ಧರಾಮರ ತತ್ವಗಳಿಗೆ ವಿರುದ್ಧ ನಡೆ ಎಂದರು. ಉದ್ಘಾಟನೆಯ ನಂತರ ಸಾರ್ವಜನಿಕರಿಗೆ ಪ್ರಸಾದ ದಾಸೋಹ ನೆರವೇರಿತು. ವೇದಿಕೆಯ ಸಂಸ್ಥಾಪಕ ಕಲ್ಲಪ್ಪ ಕಡೆಚೂರ್ ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *