ಗದಗ
ಬಸವತತ್ವ ಪ್ರಚಾರಕರು ಗದಗ ನಿವಾಸಿಯಾಗಿದ್ದ ಶರಣ ಬಿ.ವಿ. ಕಾಮಣ್ಣವರ (74 ವ.) ಅವರು ಸೋಮವಾರ ಮಧ್ಯಾಹ್ನ ಲಿಂಗೈಕ್ಯರಾದರು. ಅವರು ಪತ್ನಿ ಮೂವರು ಹೆಣ್ಣುಮಕ್ಕಳು, ಅಪಾರ ಶರಣ ಬಳಗವನ್ನು ಅಗಲಿದ್ದಾರೆ.
ಲಿಂಗೈಕ್ಯ ಪೂಜ್ಯ ಲಿಂಗಾನಂದಸ್ವಾಮಿ, ಲಿಂ.ಪೂಜ್ಯ ಮಾತೆ ಮಹಾದೇವಿ ಹಾಗೂ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳವರೊಂದಿಗೆ ಆಪ್ತತೆ ಹೊಂದಿದ್ದ ಅವರು ಅನೇಕ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳು, ಬಸವತತ್ವ ಪ್ರಸಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆಗೆ ಗದಗ-ಬೆಟಗೇರಿಯ ಬಸವ ಬಳಗ ಸಂತಾಪ ವ್ಯಕ್ತಪಡಿಸಿದೆ.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12ಗಂಟೆಗೆ ಗದಗ ಲಿಂಗಾಯತ-ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.