ವರ್ಷದೊಳಗೆ ಅನುಭವ ಮಂಟಪ ಲೋಕಾರ್ಪಣೆ: ಈಶ್ವರ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ವಿಶ್ವಗುರು ಬಸವಣ್ಣರ ಕರ್ಮಭೂಮಿ ಬೀದರ್‌ನ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ, ಉದ್ಘಾಟನೆ ಮಾಡಲಾಗುವುದು ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ಆಧುನಿಕ ಅನುಭವ ಮಂಟಪದ 770 ಕಂಬಗಳಲ್ಲಿ ಬಸವಾದಿ ಶರಣರೆಲ್ಲರ ವಚನಗಳನ್ನು ಕೆತ್ತಿಸಲಾಗುವುದು. ಈ ಮೂಲಕ ಶರಣ ಸಾಹಿತ್ಯ, ವಚನ ಸಾಹಿತ್ಯ ಚಿರಸ್ಥಾಯಿಯಾಗಿ ಉಳಿಯುಂತೆ ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ನೊಳಂಬ ಲಿಂಗಾಯತ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಗುರು ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವ ಸಮಾರಂಭದಲ್ಲಿ ‘ನೊಳಂಬ ಸ್ಮರಣ ಸಂಚಿಕೆ’ ಬಿಡುಗಡೆ ಮಾಡಿ ಮಾತನಾಡಿದರು.

ಬಸವ ಕಲ್ಯಾಣದ ಅನುಭವ ಮಂಟಪ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡಿದ ಕೀರ್ತಿಗೆ ಪಾತ್ರವಾಗಿದೆ. 12ನೆ ಶತಮಾನದಲ್ಲಿ ಶರಣರು ಸರ್ವರಿಗೂ ಸಮಾನತೆ ಕೊಡುವ ನಿಟ್ಟಿನಲ್ಲಿ ಮಾಡಿದ ಕ್ರಾಂತಿಯೇ ‘ಕಲ್ಯಾಣ ಕ್ರಾಂತಿ’ ಅದು ಬಸವಣ್ಣರ ಕ್ರಾಂತಿ. ಅನುಭವ ಮಂಟಪ ಆ ಕ್ರಾಂತಿಯ ವೇದಿಕೆಯಾಗಿತ್ತು ಎಂದು ಹೇಳಿದರು.

ಶರಣರೆಲ್ಲರೂ ಸ್ವಾತಂತ್ರ್ಯ, ಸಮಾನತೆ, ಕಾಯಕ, ಸಹೋದರತ್ವ, ಭ್ರಾತೃತ್ವ, ದಾಸೋಹ, ಸಹಬಾಳ್ವೆಯ ಸುಂದರ ಸಮಾಜ ನಿರ್ಮಾಣ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಅವರೆಲ್ಲರೂ ವರ್ಗ, ವರ್ಣ ರಹಿತ ಸಮಾಜಕ್ಕಾಗಿ ಮತ್ತು ಅಸ್ಪೃಶ್ಯತೆ, ಕಂದಾಚಾರದ ವಿರುದ್ಧ ಹೋರಾಟ ಮಾಡಿದ್ದರು ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.

ಸಿದ್ಧರಾಮೇಶ್ವರರು ವಚನಕಾರರಷ್ಟೇ ಅಲ್ಲ, ಸಮಾಜ ಸೇವಕರೂ ಆಗಿದ್ದರು. ದೇವಾಲಯಗಳು, ಕೆರೆಗಳನ್ನು ಕಟ್ಟಿಸಿದ್ದರು. ಅವರ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು.

ಅವರು ಸಾವಿರಾರು ವಚನಗಳನ್ನು ರಚಿಸಿದ್ದು, ಅವುಗಳ ಪೈಕಿ ಕೆಲವು ಮಾತ್ರವೇ ಲಭ್ಯವಾಗಿವೆ. ಅವರ ಸಮಗ್ರ ಜೀವನ ಚರಿತ್ರೆಯು ಜಗತ್ತಿಗೆ ತಿಳಿಯಬೇಕು, ಎಂದು ಹೇಳಿದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಇಡೀ ವೀರಶೈವ ಲಿಂಗಾಯತ ಸಮುದಾಯ ಎಚ್ಚೆತ್ತು ಕೊಳ್ಳಬೇಕು ಎಂದು ಹೇಳಿದರು.

ಪಕ್ಕದ ಮನೆಗೆ ಬೆಂಕಿ ಹಚ್ಚಿದರೂ ನಮ್ಮ ಮನೆಗೆ ಬೆಂಕಿ ಹಚ್ಚಿಲ್ಲ ಎಂದು ಕಣ್ಮುಚ್ಚಿ ಕುಳಿತುಕೊಂಡಿದ್ದೇವೆ. ವೀರಶೈವ ಲಿಂಗಾಯತ ಸಮಾಜಗಳು ತಮ್ಮ, ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಕೇವಲ ರಾಜಕೀಯ ಕಾರಣಕ್ಕೆ ಅಷ್ಟೇ ಅಲ್ಲ ಈ ನಾಡಿನ ಅಭಿವೃದ್ದಿ, ಏಳ್ಗೆ ದೃಷ್ಟಿಯಿಂದ ಒಗ್ಗಟ್ಟಾಗಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಸಾಧಕರ ಜಯಂತಿಗಳು ಒಂದು ದಿನ ಆಚರಣೆಗಳಿಗೆ ಸೀಮಿತವಾಗಬಾರದು. ಸಾಧು-ಶರಣರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳಡಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿ, ಗೋಡೇಕೆರೆ ಶ್ರೀ ಮೃತ್ಯುಂಜಯ ದೇಶೀ ಕೇಂದ್ರ ಶ್ರೀಗಳು, ಪರಮಪೂಜ್ಯ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಶ್ರೀಗಳು, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ನೊಳಂಬಲಿಂಗಾಯತ ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್‌, ಶಾಸಕ ಗೋಪಾಲಯ್ಯ, ಜ್ಯೋತಿಗಣೇಶ್‌, ಎಸ್‌.ಆರ್‌. ವಿಶ್ವನಾಥ್‌, ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳಿ ಪ್ರಕಾಶ್‌, ಮಾಜಿ ಶಾಸಕ ಡಿ.ಎಸ್‌.ಸುರೇಶ್‌, ಅಖೀಲ ಭಾರತ ಖೋಖೋ ಫೆಡರೇಷನ್‌ ಉಪಾಧ್ಯಕ್ಷ ಲೋಕೇಶ್ವರ್‌, ವೀರಶೈವ ವಿಧ್ಯಾಭಿವೃದ್ದಿ ಸಂಘದ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ, ವೈ.ಎಸ್‌. ಸಿದ್ಧರಾಮೇಗೌಡ ಸೇರಿ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಜ್ಯೋತಿ ಗಣೇಶ್, ಸಂಘದ ಅಧ್ಯಕ್ಷ ಸಿದ್ದರಾಮಪ್ಪ, ಬೆಳ್ಳಿ ಪ್ರಕಾಶ್, ಕೆ.ಬಿ.ಶಶಿಧರ್, ಪರಮಶಿವಯ್ಯ, ಲೋಕೇಶ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

Share This Article
1 Comment
  • Maanya vijaye ndra, kandre yavaru yella lingayata
    Up pangada galannu ottige. Serisalu yenu krama
    Thagondiddera? * Modalu akilabaaratha veerashiva
    Mahasaba eddu, nanthara veerashiva lingayata
    Maadidri. Eega 2 banner ettu kondu samajavannu
    Yaaru odediddare? Note: justice Sri nagamohan das
    Ravara varadi – lingayatha darmakke alpa sankyaatha
    Darma da maanyathe kodalu recommendation -agiddannu yaaru poorna adyayana maadiddera?
    Kendrakke 3 ne baari kalisiddu vaapaas bandu
    Vidaana souda dalli biddide. Lingayata samaajada
    Kela vargada janarige sahaya. Maadoori. Yaaru
    Elve? 2) saahithi, thajnaraada Ramjan darga avaru
    Lingayata, sharana darmada bagge thilidastu namma
    Varu yaaru( sangataneya leaders ) aakavaagi thilidilve! // Veerashiva ne beere, lingayata nebere
    Naayakarugale thiliyade anudaana kodisalu vipalaeaagi bereyavarannu doosisuthiddera.
    ” Manyathe kodisalu thajnara samithi neemisiri”

Leave a Reply

Your email address will not be published. Required fields are marked *