ಬಿಸಲವಾಡಿ
ವೈದಿಕ ಸಂಪ್ರದಾಯದಲ್ಲಿ 30 ದಿನಗಳ ಕಾಲ ಇರುವ ಧನುರ್ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದು ನಿಷಿದ್ಧ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶದಂತಹ ಯಾವುದೇ ಹೊಸ ಆರಂಭಗಳನ್ನು ಮಾಡಬಾರದು, ಇದರಿಂದ ಕೇಡಾಗುತ್ತದೆ ಎಂಬ ನಂಬಿಕೆ ಇದೆ.
ಆದರೆ ಈ ಮೂಡ ನಂಬಿಕೆಗೆ ಸೆಡ್ಡು ಹೊಡೆದು ಗ್ರಾಮದ ಬಿ.ಚನ್ನಬಸಪ್ಪ ಅವರು ತಮ್ಮ ನೂತನ ಮನೆಯ ಗುರು ಪ್ರವೇಶವನ್ನು ನಿಜಾಚರಣೆಯ ಮೂಲಕ ನಡೆಸಿದರು.