ಮಿಥ್ಯ VS ಸತ್ಯ: ವಚನ ದರ್ಶನಕ್ಕೆ JLM ಉತ್ತರ ಬಿಡುಗಡೆಗೆ ಸಜ್ಜು

ಬಸವ ಮೀಡಿಯಾ
ಬಸವ ಮೀಡಿಯಾ

“ನಿರಂತರವಾಗಿ ಜನರ ಜಾಗೃತಿ ಮೂಡಿಸುವ ಮತ್ತು ಸಂಘಟಿಸುವ ಪ್ರಕ್ರಿಯೆ ಶುರುವಾಗಲಿದೆ. ಇನ್ನು ಮುಂದೆ ಯಾರೋ ಮಾಡುವ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಸೀಮಿತವಾಗಿರುವುದಿಲ್ಲ.”

ಧಾರವಾಡ

ಶರಣ ತತ್ವವನ್ನು ತಿರುಚಿ, ಕಲ್ಯಾಣ ಕ್ರಾಂತಿಯನ್ನೇ ನಿರಾಕರಿಸಲು ಸಂಘ ಪರಿವಾರ ಹೊರ ತಂದಿರುವ ‘ವಚನ ದರ್ಶನ’ ಪುಸ್ತಕಕ್ಕೆ ತಕ್ಕ ಉತ್ತರ ನೀಡಲು ಜಾಗತಿಕ ಲಿಂಗಾಯತ ಮಹಾಸಭಾ ಪ್ರಕಟಿಸಿರುವ “ವಚನ ದರ್ಶನ: ಮಿಥ್ಯ VS ಸತ್ಯ” ಪುಸ್ತಕ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

ಇಂದು ಸಂಜೆ ಧಾರವಾಡದಲ್ಲಿ ನಡೆಯುತ್ತಿರುವ ಪದಾಧಿಕಾರಿಗಳ ಸಭೆಗೆ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅವರು “ವಚನ ದರ್ಶನ: ಮಿಥ್ಯ VS ಸತ್ಯ” ಪುಸ್ತಕದ ಕೆಲವು ಪ್ರತಿಗಳನ್ನು ತೆಗೆದುಕೊಂಡು ಹೋಗಿ ಸದಸ್ಯರಿಗೆ ತೋರಿಸಲಿದ್ದಾರೆಂದು ತಿಳಿದು ಬಂದಿದೆ.

ಟಿ ಆರ್ ಚಂದ್ರಶೇಖರ್ ಮತ್ತು ಮುಕ್ತಾ ಕಾಗಲಿ ಸಂಪಾದಿಸಿರುವ “ಮಿಥ್ಯ VS ಸತ್ಯ” ಪುಸ್ತಕದಲ್ಲಿ ಪ್ರಸಿದ್ಧ ಲೇಖಕರು ಬರೆದಿರುವ 18 ಲೇಖನಗಳಿವೆ. ಸಂಘ ಪರಿವಾರ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೂ ತೀಕ್ಷ್ಣ ಉತ್ತರಗಳು ಇವುಗಳಲ್ಲಿ ಸಿಗಲಿದೆ.

310 ಪುಟಗಳ ಪುಸ್ತಕದ 10,000 ಸಾವಿರ ಪ್ರತಿಗಳು ಮುದ್ರಣವಾಗಿದ್ದು, 150 ರುಪಾಯಿಗೆ ಲಭ್ಯವಿದೆ. ಮಹಾಸಭಾದ ಸದಸ್ಯರಿಗೆ ಶೇಕಡಾ 50ರಷ್ಟು ರಿಯಾಯತಿ ಕೂಡ ದೊರೆಯಲಿದೆ.

ಇಂದಿನ ಸಭೆಯಲ್ಲಿ ಪುಸ್ತಕವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾರ್ಪಣೆ ಮಾಡುವುದರ ಬಗ್ಗೆ ಚರ್ಚೆ ನಡೆಸಲಾಗುವುದು. ವಿವಿಧ ಜಿಲ್ಲೆಗಳಲ್ಲಿರುವ ಬಸವ ಸಂಘಟನೆ ಮತ್ತು ಸಮಾನ ಮನಸ್ಕರ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಮಾಡಿ ಶರಣ ಮತ್ತು ರಾಜ್ಯದ ಬಹುತ್ವದ ಸಂಸ್ಕೃತಿಗಳಿಗೆ ಬಂದಿರುವ ಆತಂಕಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು.

ಟಿ ಆರ್ ಚಂದ್ರಶೇಖರ್ ಅವರು “ಮಿಥ್ಯ VS ಸತ್ಯ” ಆರ್.ಎಸ್.ಎಸ್ ಮಾಡಿರುವ ಕ್ರಿಯೆಗೆ ಪ್ರತಿಕ್ರಿಯೆ ಮಾತ್ರವಲ್ಲ. ಇದರಿಂದ ನಿರಂತರವಾಗಿ ಜನರ ಜಾಗೃತಿ ಮೂಡಿಸುವ ಮತ್ತು ಸಂಘಟಿಸುವ ಪ್ರಕ್ರಿಯೆ ಶುರುವಾಗಲಿದೆ. ಇನ್ನು ಮುಂದೆ ನಮ್ಮ ಪ್ರತಿಕ್ರಿಯೆ ಯಾರೋ ಮಾಡುವ ಕ್ರಿಯೆಗೆ ಸೀಮಿತವಾಗಿರುವುದಿಲ್ಲ, ಎಂದರು.

ಇಂದಿನ ಮಹಾಸಭಾದ ಸಭೆಯಲ್ಲಿ ರಾಜ್ಯದಲ್ಲಿ ಶರಣ ಪರಂಪರೆಯನ್ನು ಮತ್ತು ಸಂಘಟನೆಗಳನ್ನು ಸಬಲಗೊಳಿಸಲು ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವ ಚರ್ಚೆಯೂ ನಡೆಯಲಿದೆ. ಹಲವು ತಿಂಗಳ ಕಾಲ ರಾಜ್ಯದ ಶರಣ ಸಮುದಾಯವನ್ನು ಎಚ್ಚರಗೊಳಿಸುವ ಕಾರ್ಯಕ್ರಮವಾಗಿ ಇದನ್ನು ರೂಪಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿದು ಬಂದಿದೆ.

Share This Article
10 Comments
  • ಲಿಂಗಾಯತ ವಿರಕ್ತ ಮಠದ ಸ್ವಾಮಿಗಳು ಈಗಲಾದರೂ ಧಮ೯ ಕಟ್ಟಲು ಜಾಗೃತವಾಗಿರುವದಕ್ಕೆ ಧನ್ಯವಾದಗಳು🙏🙏

  • ತಡವಾಗಿಯಾದರೂ ಒಳ್ಳೆಯ ಕೆಲಸ ಮತ್ತು ಉತ್ತಮ ಕೃತಿ. ಇನ್ನು ಮುಂದೆ ಸನಾತನಿಗಳು ಮೊದಲು ಕ್ರಿಯೆ ಮಾಡುವುದು ಲಿಂಗಾಯತರು ಅದರಲ್ಲಿಯೂ JLM ಕೇವಲ ಪ್ರತಿಕ್ರಿಯೆಗೆ ಸೀಮಿತವಾಗದೆ ನಿರಂತರವಾಗಿ ಜಾಗೃತಿ ಮೂಡಿಸುವ ಮತ್ತು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮರು ಹೋರಾಟ ರೂಪಿಸಲಿ.

  • ಲಿಂಗಾಯತ ಮಠಾಧೀಶರು ಇತ್ತಿಚೆಗೆ ತಮ್ಮ ಧ್ವನಿಯನ್ನು
    ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದು ಉತ್ತಮ
    ಬೆಳವಣಿಗೆ ಇದು ನಿರಂತರವಾಗಿ ಸಾಗಬೇಕು .
    ಇದರೊಂದಿಗೆ ಎಲ್ಲಾ ಲಿಂಗಾಯತ ಸಂಘಟನೆಗಳು
    ಹಿಂದುತ್ವ ವ್ಯಾಮೋಹ ರಿಂದ ಹೊರಗೆ ಬಂದು
    ಲಿಂಗಾಯತ ನಿಜ ತತ್ವವಾದ ಮಾನವ ಬಂಧುತ್ವ
    ಪೂರೈಸುವಲ್ಲಿ ತಮ್ಮನ್ನು ತಾವು ತೊಡಗಿಸಿವಲ್ಲಿ
    ನಿರಂತರ ಪ್ರಯತ್ನ ಸಾಗಲಿ.

  • ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಾ ಬಸವ ತತ್ವದ ಮಠಾದಿಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗುವುದರಲ್ಲಿ ಅನುಮಾನವೆ ಇಲ್ಲ ಹಾಗೆಯ ಮಠಾಧಿಪತಿಗಳಿಗೂ ಪ್ರತಿ ಜಿಲ್ಲೆಯಲ್ಲಿ ಒಂದು ಶಿಬಿರ ಏರ್ಪಡಿಸಬೇಕು ಅದರಲ್ಲಿ ಹುಟ್ಟಿನಿಂದ ಸಾಯುವವರೆಗೂ ಲಿಂಗಾಯತ ಆಚರಣೆ ಹೇಗೆ ಮಾಡಿಸಬೇಕು ಅಂತ ತಿಳಿಸಿಕೊಡಬೇಕು ಡಾ: ಮಾತಾಜಿ ಬರೆದ ಬಸವ ಧರ್ಮದ ಸಂಸ್ಕಾರಗಳು ಎಂಬ ಪುಸ್ತಕ ಮುಂದಿಟ್ಟುಕೊಂಡು ಕಲಿಸಬೇಕು

  • ಎಮ್ಮಳೊಗೊಂಡು, ವಿಶೇಷವಾಗಿ ಜವಾಬ್ದಾರಿ ಸ್ಥಾನದಲ್ಲಿರುವವರಿಗೂ ಬಸವ ಧರ್ಮದ ಬಗ್ಗೆ ಕಾಳಜಿಯ ಜಾಗೃತಿ ಮೂಡಿರುವುದು ಬಸವನ ಅನುಯಾಯಿಗಳಿಗೆ ತುಂಬಾ ತುಂಬಾ ಸಂತೋಷವಾಗುತ್ತಿದೆ….
    ಧನ್ಯವಾದಗಳು…..👍👌🙏🙏

  • ಒಳ್ಳೆಯ ಬೆಳವಣಿಗೆ 🙏 ಇದೇ ರೀತಿ ಎಲ್ಲಾ ಬಸವ ಧರ್ಮದ ಸ್ವಾಮಿಗಳು ಮನೆ ಮನೆಗೆ ಬಸವ ಧರ್ಮದ ತತ್ವಗಳನ್ನು ತಲುಪಿಸುವ ಕೆಲಸ ಮಾಡಲಿ 🙏💐 ಶರಣು ಶರಣಾರ್ಥಿ ಗಳು

  • ಇಂತಹ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು, ಧನ್ಯವಾದಗಳು.

  • ಒಳ್ಳೆಯ ಬೆಳವಣಿಗೆ ಧನ್ಯವಾದಗಳು

    • ಲಿಂಗಾಯತದ ಉಳಿವಿಗಾಗಿ ಎಲ್ಲರೂ ಒಂದುಗೂಡಿರುವುದು ಒಳ್ಳೆಯ ಬೆಳವಣಿಗೆ. ವಚನ ಜಾಗೃತಿ, ಸಭೆ ಸಮಾರಂಭಗಳಿಗೆ ಸೀಮಿತವಾಗದೆ ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ವಚನ ಮಂಟಪ ಕಾರ್ಯಕ್ರಮಗಳು ಜರುಗಬೇಕು. ತಾಲ್ಲೂಕು, ಜಿಲ್ಲಾವಾರು ಸಭೆ ಸಮಾರಂಭಗಳಲ್ಲಿ ಜನರಲ್ಲಿ ವೈಚಾರಿಕ ಮನೋಭಾವ ಬಿತ್ತುವ ಮತ್ತು ಬಸವ ತತ್ವದ ಅರಿವು ಮೂಡಿಸುವ ಪ್ರಯತ್ನವನ್ನು ಆರಂಭಿಸಬೇಕು. ಆಗ ಮಾತ್ರ ಬಸವಣ್ಣನ ಋಣ ತೀರಿಸಲು ಸಾಧ್ಯ.

Leave a Reply

Your email address will not be published. Required fields are marked *