ಮೈಸೂರಿನಲ್ಲಿ ಸರಳ, ಸುಂದರ, ಸ್ಫೂರ್ತಿದಾಯಕ ವಚನ ಮಾಂಗಲ್ಯ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಮೈಸೂರು

ಮದುವೆ ನೆಪದಲ್ಲಿ ಸಾಲ ಮಾಡಿ ದುಂದುವೆಚ್ಚ ಮಾಡುವ ಈ ಕಾಲದಲ್ಲಿ ಮೋನಿಶಾ ವಿಶ್ವನಾಥ್ ಅವರು ದೀಪಕ್ ಕುಮಾರ್ ಅವರನ್ನು ಸರಳ ವಚನ ಮಾಂಗಲ್ಯ ಕಲ್ಯಾಣ ಮಹೋತ್ಸವದ ಮೂಲಕ ರವಿವಾರ ವಿವಾಹವಾದರು.

ಮೋನಿಶಾ ಅವರು ಜ್ಞಾನೇಶ್ವರಿ ಮೈಸೂರಿನ ಎನ್‌ ಬಿ ಮತ್ತು ಸಿ ಜಿ ವಿಶ್ವನಾಥ್ ಇವರ ಪುತ್ರಿ. ದೀಪಕ್ ಅವರು ಬೆಂಗಳೂರಿನ ಭೀನಾ ಮತ್ತು ಅಶೋಕ್ ಬಾಲಸುಬ್ರಮಣ್ಯ ರವರ ಪುತ್ರ.

ಬಸವ ಗಣಾಚಾರ ವೇದಿಕೆಯ ಚೌಹಳ್ಳಿ ಲಿಂಗರಾಜಪ್ಪ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ವೈಚಾರಿಕವಾಗಿ ವಿವಾಹವನ್ನು ನೆರವೇರಿಸಿ ಕೊಟ್ಟರು.

ಷಟ್ಸಸ್ಥಲ ಧ್ವಜಾರೋಹಣ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪವೃಷ್ಠಿ, ವಧುವರರಿಗೆ ವಿಭೂತಿ ಧಾರಣೆ, ವಚನಗಳ ಪಠಣ ಹಾಗೂ ಗಾಯನದೊಂದಿಗೆ ಮಾಂಗಲ್ಯ ಧಾರಣೆ ಮತ್ತು ರುದ್ರಾಕ್ಷಿ ಧಾರಣೆಯಾಯಿತು. ಮಾಡಿಸಿ ವಧುವರರೀವ್ರರಿಗೂ ಪುಷ್ಪವೃಷ್ಠಿ ಮಾಡಿಸಲಾಯಿತು.

ವಧುವರರ ಬಂಧುಗಳ ಸಮ್ಮುಖದಲ್ಲಿ ಅತೀ ಕಡಿಮೆ ಸಂಖ್ಯೆಯ ಅತಿಥಿಗಳ ನಡುವೆ ಹಾಗೂ ಕಡಿಮೆ ಖರ್ಚಿನಲ್ಲಿ ವಿವಾಹವನ್ನು ಮಾಡಿಸಲಾಯಿತು. ಚಿಕ್ಕದಾದ ಚೊಕ್ಕದಾದ ಶಿವ ಭವನದಲ್ಲಿ ಅದ್ದೂರಿ ಅಲಂಕಾರ ಗಳಿಲ್ಲದೇ ನಿರಾಡಂಬರವಾಗಿ ಅಚ್ಚುಕಟ್ಟಾದ ಪ್ರಸಾದ ದೊಂದಿಗೆ ಸಮಾಧಾನ ಹಾಗೂ ಸಂಯಮದೊಂದಿಗೆ ವಚನ ವಿವಾಹ ಮಹೋತ್ಸವವು ಜರುಗಿತು.

ಈ ವಚನ ಮಾಂಗಲ್ಯ ಕಲ್ಯಾಣ ಮಹೋತ್ಸವದಲ್ಲಿ ಚೌಹಳ್ಳಿ ಲಿಂಗರಾಜಪ್ಪ ನವರು ಬಸವ ಗಣಾಚಾರ ವೇದಿಕೆ ಹಾಗೂ ಜೆ. ಎಲ್ .ಎಂ ವತಿಯಿಂದ ನಾಗರತ್ನ ಜಿ ಕೆ (ಗುಂಡಪ್ಪ), ಶಿವಮಲ್ಲಪ್ಪ, ಗಂಗಾಧರ ಎಸ್ .ಸಿ ಹಾಗೂ ಅವರ ಕುಟುಂಬ ಗಾಯತ್ರಿ ಅಕ್ಕನವರು ಹೆಮ್ಮಿಗೆ ತಲಕಾಡು, ನಂದೀಶ ನಂಜನಗೂಡು, ಮರಪ್ಪ, ಬಸವ ಭಾರತ ಪ್ರತಿಷ್ಠಾನದ ಶಿವರುದ್ರಪ್ಪ, ಅಮೃತೇಶ್ ಭಾಗಿಯಾಗಿದ್ದರು.

Share This Article
2 Comments
  • ಬಹಳ ಅರ್ಥಗರ್ಭಿತವಾದ ಸಂತೋಷಕರವಾದ ಕಾರ್ಯಕ್ರಮ. ಪ್ರಸ್ತುತ ದಿನಗಳಲ್ಲಿ ತುಂಬ ಅವಶ್ಯಕತೆಯೇನಿಸುವ ಕಾರ್ಯಕ್ರಮ. ಎರಡು ಕುಟುಂಬದವರಿಗೂ ಶರಣು ಶರಣಾರ್ಥಿ. ವಧುವರರಿಗೆ ಶುಭವಾಗಲಿ. ಆಯೋಜಕರಿಗೆ ಧನ್ಯವಾದಗಳು

  • ಶರಣು ಶರಣಾರ್ಥಿಗಳು ಅಕ್ಕ ವರದಿ ತುಂಬಾ ಚೆನ್ನಾಗಿ ಬಂದಿದೆ, ಇದೆ ತರ ವಚನ ಮಾಂಗಲ್ಯಗಳು ಹೆಚ್ಚಾಗಬೇಕು ಆಗ ಬಡತನದಿಂದ ಮುಕ್ತ ಸಮಾಜ ಆಗುವುದರಲ್ಲಿ ಸಂದೇಹವಿಲ್ಲ. ವಚನ ಮಾಂಗಲ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಶರಣು ಶರಣಾರ್ಥಿಗಳು….

Leave a Reply

Your email address will not be published. Required fields are marked *