ಅನುರಾಗ್ ಮಕ್ಕಳ ಮನೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು

ಪಟ್ಟಣದ ಅನುರಾಗ್ ಮಕ್ಕಳ ಮನೆಯಲ್ಲಿ ೭೬ ನೇ ಗಣರಾಜ್ಯೋತ್ಸವ ಕಾರ್ಯಕ್ರಮ ೨೬ ಜನವರಿ ೨೦೨೫ ರಂದು ಜರುಗಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಶರಣ ತತ್ವ ಚಿಂತಕ ಪೂಜ್ಯ ಶ್ರೀ ಬಸವ ಯೋಗಿ ಪ್ರಭು ಸ್ವಾಮಿಗಳು ಮತ್ತು ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್ ನೆರವೇರಿಸಿದರು.

ಭಾರತ ಸಂವಿಧಾನದ ಪೀಠಿಕೆ ಮತ್ತು ಪ್ರಸ್ತಾವನೆಯನ್ನು ಎಲ್ಲರೂ ಪಠಣ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರಥಮ್ ಎಜುಕೇಷನ್ ಫೌಂಡೇಶನ್ನಿನ ನಾರಾಯಣ್ ಎಚ್. ಪಿ ರವರು ನಮ್ಮ ಸಂವಿಧಾನ ಜಾರಿಗೆ ತರಲು ಅನೇಕ ಜನರು ಶ್ರಮಿಸಿದ ಬಗ್ಗೆ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಧರ್ಮರಾಜ್ ರವರು ಮಕ್ಕಳ ಮನೆಯ ವಿದ್ಯಾರ್ಥಿಗಳು ಕಪಿಲಾ ನದಿಯನ್ನು ಸ್ವಚ್ಛತೆ ಮಾಡುವಲ್ಲಿ ತೊಡಗಿಸಿಕೊಂಡಿದ್ದುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಪ್ರತಿಧ್ವನಿ ವೇದಿಕೆಯ ಪ್ರತಿಧ್ವನಿ ತ್ರಿಣೇಶ್ ರವರು ಸಂವಿಧಾನದ ಆಶಯದಂತೆ ಅನುರಾಗ್ ಸೇವಾ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮನೆಯ ಹಳೆಯ ವಿದ್ಯಾರ್ಥಿ ವೃಷಬೇಂದ್ರ ಸಿ ನಿರೂಪಣೆ ಮಾಡಿದ್ದು, ಪ್ರಾರ್ಥನೆಯನ್ನು ವಿಧ್ಯಾರ್ಥಿ ಕಾಳಿ ಪ್ರಸಾದ್, ಸ್ವಾಗತವನ್ನು ಹಳೆಯ ವಿಧ್ಯಾರ್ಥಿ ಹರೀಶ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಅನುರಾಗ್ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಿ.ಜಿ. ಸೋಮಶೇಖರಮೂರ್ತಿಯವರು, ಕಾ.ಸು. ನಂಜಪ್ಪ, ಪ್ರತಿಧ್ವನಿ ಕೀರ್ತಿ, ಪ್ರತಿಧ್ವನಿ ಲೋಕೇಶ್, ಮತ್ತಿತರರು ಭಾಗಿಯಾಗಿದ್ದರು.

Share This Article
Leave a comment

Leave a Reply

Your email address will not be published. Required fields are marked *