ಕುಂಭಮೇಳಕ್ಕೆ ಸರಕಾರದ ಅತಿಥಿಯಾಗಿ ಹೋಗಿರುವ ಜಯ ಮೃತ್ಯುಂಜಯ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರಯಾಗ್ ರಾಜ್

ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್ ರಾಜ್ ಗೆ ತೆರಳಿರುವ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳಿಗೆ ವಿಐಪಿ ಆತಿಥ್ಯ ದೊರೆಯುತ್ತಿದೆ.

ಉತ್ತರ ಪ್ರದೇಶ ಸರಕಾರದ ಅತಿಥಿಯಾಗಿ ಶ್ರೀಗಳು ಜನವರಿ 24ರಂದು ಲಕ್ನೋಗೆ ಹೋದರು. ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲಾಯಿತು.

ಇದರ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ವಿಡಿಯೋ ಸಹಿತ ಮಾಹಿತಿ ಹಂಚಿಕೊಂಡಿರುವ ಶ್ರೀಗಳು ರಾಷ್ಟ್ರೀಯ ಸಂತ ಕುಂಭಮೇಳ ಮಹೋತ್ಸವ ಸಮಿತಿಯ ಆಮಂತ್ರಣದ ಮೇರೆಗೆ ಕುಂಭಮೇಳಕ್ಕೆ ಬಂದಿದ್ದೇನೆ ಎಂದು ಸೂಚಿಸಿದ್ದಾರೆ.

ಶ್ರೀಗಳೊಂದಿಗೆ ಬೆಳಗಾವಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ನಿಂಗಪ್ಪ ಫಿರೋಜಿ ಚಿಕ್ಕೋಡಿ, ಜಿಲ್ಲಾ ಅಧ್ಯಕ್ಷ ಧರೆಪ್ಪ ಟಕ್ಕಣ್ಣವರ್, ಬೆಳಗಾವಿ ನಗರ ಅಧ್ಯಕ್ಷ ಶಿವಾನಂದ್ ತಂಬಾಕೆ, ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ರಾವಸಾಹೇಬ್ ಪಾಟೀಲ್ ಕೂಡ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ.

ಕುಂಭಮೇಳಕ್ಕೆ ಹೋಗಿ ಐದು ದಿನಗಳಾದರೂ ಶ್ರೀಗಳು ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ ‘ಪುಣ್ಯ ಸ್ನಾನ’ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿಲ್ಲ.

ಜನವರಿ ತಿಂಗಳಿಂದ ನಡೆಯಲಿರುವ ಪೂರ್ಣ ಕುಂಭಮೇಳಕ್ಕೆ ಕರ್ನಾಟಕದ ಲಿಂಗಾಯತರಿಗೆ ವಿಶೇಷ ಆಹ್ವಾನ ನೀಡಲು ಆರೆಸ್ಸೆಸ್ ನಿರ್ಧರಿಸಿದೆ ಎಂದು ಬಸವ ಮೀಡಿಯಾ ಅಕ್ಟೋಬರ್ ತಿಂಗಳಲ್ಲಿ ವರದಿ ಮಾಡಿತ್ತು.

ಲಿಂಗಾಯತರು ಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಆರೆಸ್ಸೆಸ್ ಪ್ರಯತ್ನಿಸಿದರೆ ತಾವು ಅದಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ವತಿಯಿಂದ ಆಡಳಿತಾತ್ಮಕ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದರು.

ಈ ವಿಷಯದ ಮೇಲೆ ಶರಣ ಸಮಾಜದಿಂದ ವ್ಯಾಪಕವಾದ ಪ್ರತಿಕ್ರಿಯೆ ಬಂದಿತ್ತು.

ಲಿಂಗಾಯತರನ್ನು ಸೆಳೆದು ಪ್ರತ್ಯೇಕ ಧರ್ಮದ ಹೋರಾಟವನ್ನು ಹತ್ತಿಕ್ಕಲು ಆರೆಸ್ಸೆಸ್ ಕುಂಭಮೇಳವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ ಎಂದು ಅನೇಕ ಚಿಂತಕರು, ಹೋರಾಟಗಾರರು ಹೇಳಿದ್ದರು.

ಜಯಮೃತ್ಯುಂಜಯ ಶ್ರೀಗಳಂತಯೇ ಆರೆಸ್ಸೆಸ್ ಗೆ ಹತ್ತಿರವಾಗಿರೋ ವಚನಾನಂದ ಶ್ರೀ, ಮಾದಾರ ಚೆನ್ನಯ್ಯ ಶ್ರೀಗಳಂತವರು ಕುಂಭಮೇಳಕ್ಕೆ ಹೋಗಿದ್ದಾರೆ.

Share This Article
6 Comments
  • ಇವರು ಲಿoಗಾಯತ ಸ್ವಾಮಿಗಳಾ…….. ನಾಚಿಗ್ಗೆಡು……

  • ಜಯ ಮೃತ್ಯಂಜಯ ಸ್ವಾಮಿ ಒಬ್ಬ ಬಸವ ದ್ರೋಹಿ ಇವರು ಲಿಂಗಾಯತ ಎಂದು ಹೇಳುವ ಬದಲು ಲಿಂಗವನ್ನು ಕಳಚಿ ಸನಾತನಿ ಸ್ವಾಮಿಯಾಗಿ ಬದಲಾಗಲಿ

  • RSS divide policy ಒಬ್ಬ ಬಸವ ದ್ರೋಹಿ ಮೃತ್ಯುಂಜಯ ಸ್ವಾಮೀ ಇಂದ ಆಗುತ್ತಿರುವದು ಅವರ ಜೊತೆ ವಚನಂದ ಸ್ವಾಮಿ ಇಬ್ಬರು ಮಗ್ಗಳ ಮುಳ್ಳುಗಳು

  • ಮೀಸಲಾತಿ ಜಾಥಾ, ಉಪವಾಸ, ಕಾಲ್ನಡಿಗೆ ಎಲ್ಲವನ್ನೂ ನದಿಯಲ್ಲಿ ಬಿಟ್ಟು ಬರಲು ಹೋಗಿರಬೇಕು.

  • ಕುಂಭ ಮೇಳಕ್ಕೆ ಹೋಗಿ ಬಂದ ಲಿಂಗಾಯತ ಮಠಾಧೀಶರು ಅಲ್ಲಿ ಯಾವ ವಿಷಯದ ಮೇಲೆ ಚರ್ಚೆ ನಡೆಯಿತು ಸ್ವಲ್ಪ ಹೇಳಿ. ಹಾಗೂ ತಾವು ಪಾಪ ಪರಿಹಾರಕ್ಕಾಗಿ ನೀರಲ್ಲಿ ಮುಳುಗಿದಿರಾ ?

  • ಲಿಂಗಾಯತ ಧರ್ಮದ ಒಂದು ಪೀಠದ ಪೀಠಾಧಿಪತಿಯಾಗಿ, ಶರಣ ಸಂಸ್ಕೃತಿಗಳ ಬಗ್ಗೆ ಆಳವಾದ ಜ್ಞಾನವನ್ನು ಸಂಪಾದಿಸಿ ಅದನ್ನು ಭಕ್ತ ಸಮೂಹಕ್ಕೆ ಹಂಚದೆ ಮಾರಿಕೊಳ್ಳಲು ಹೋದ ಈ ವೇಷಧಾರಿ ನಂಬಬೇಡಿ.

Leave a Reply

Your email address will not be published. Required fields are marked *